Showing posts with label ಕಾಯೋ ಕರುಣಾಬ್ಧಿ ಗುರು ಎನಗೆ ದಯವುಳ್ಳ ಸ್ವಾಮಿ ನೀನಹುದೊ mahipati. Show all posts
Showing posts with label ಕಾಯೋ ಕರುಣಾಬ್ಧಿ ಗುರು ಎನಗೆ ದಯವುಳ್ಳ ಸ್ವಾಮಿ ನೀನಹುದೊ mahipati. Show all posts

Wednesday, 1 September 2021

ಕಾಯೋ ಕರುಣಾಬ್ಧಿ ಗುರು ಎನಗೆ ದಯವುಳ್ಳ ಸ್ವಾಮಿ ನೀನಹುದೊ ankita mahipati

ಕಾಖಂಡಕಿ ಶ್ರೀ ಮಹಿಪತಿರಾಯರು

ಕಾಯೊ ಕರುಣಾಬ್ಧಿ ಗುರು ಎನಗೆ ದಯವುಳ್ಳ ಸ್ವಾಮಿ ನೀನಹುದೊ ಜಗದೊಳಗೆ ಪ 


ಶಿರದಲಭಯವ ನೀಡಿ ಕರುಣದಯದಲಿ ನೋಡಿ ಹರುಷ ಮನವನು ಮಾಡಿ ದುರಿತಭವ ಈಡ್ಯಾಡಿ ಗುರುತ ನಿಜ ಮಾಡರಹು ನೀಡಿ ಪರಮ ಗತಿ ಇದರಿಡಿ ವರಕೃಪೆಯ ಮಾಡಿ 1 

ಒಂದು ಪಥವನು ತಿಳಿಸಿ ದ್ವಂದ್ವ ಭೇದವನಳಿಸಿ ಕುಂದ ದೋಷವ ತೊಳಿಸಿ ಒಂದರೊಳು ನಿಲಿಸಿ ನೆಲೆಗೊಳಿಸಿ ಸಂದು ಜನ್ಮಗಳಳಿಸ್ಯಾನಂದ ಸುಖ ಹೊಳಿಸಿ 2 

ಕರುಣಿಸೊ ಗುರು ಎನಗೆ ಶರಣ ಹೊಕ್ಕಿದೆ ನಿಮಗೆ ದೋರುದನುಭವ ಈಗೆ ಕರಗಿ ಮನವೆರಗುವ್ಹಾಂಗೆ ಸ್ಮರಣ ಸುಖ ಎದುರಿಡು ಬ್ಯಾಗೆ ತರಣೋಪಾಯದಲೆನೆಗೆ ಪೊರೆಯೊ ಮಹಿಪತಿಗೆ 3

***