ರಾಗ ಸೂರ್ಯ ತಾಳ ಖಂಡಚಾಪು
ಆರು ನಿನಗಿದಿರಧಿಕ ಧಾರುಣಿಯೊಳಗೆ ಪ
ಸಾರ ಶಾಸ್ತ್ರವನೊರೆದ ಸರ್ವಜ್ಞ ಮುನಿರಾಯ ಅ.ಪ.
ಆರೊಂದು ವೈರಿಗಳ ತರಿದು ವೈಷ್ಣವರಿಗೆಆರೆರಡು ಊಧ್ರ್ವ ಪುಂಡ್ರಗಳ ಇಡಿಸಿಆರು ಮೂರರಮೇಲೆ ಮೂರಧಿಕ ಕುಮತಗಳಬೇರೊರಸಿ ಕಿತ್ತೊಮ್ಮೆ ಬಿಸುಟಂಥ ಧೀರ 1
ಆರು ನಾಲ್ಕು ತತ್ವದಭಿಮಾನಿಗಳಿಗೊಡೆಯಮಾರುತನ ಮೂರನೆಯ ಅವತಾರನೆಆರೈದು ಮೇಲೆರಡು ಅಧಿಕ ಲಕ್ಷಣವುಳ್ಳಮೂರುತಿಯೊಳೊಪ್ಪುತಿಹ ಮುನಿವರೇಣ್ಯ 2
ಆರಾರು ಮೇಲೊಂದು ಅಧಿಕ ಲೆಖ್ಖದ ಗ್ರಂಥಸಾರವನು ರಚಿಸಿ ಸಜ್ಜನರಿಗಿತ್ತುಪಾರಮಾರ್ಥಿಕ ಭೇದ ಪಂಚಕ ಸ್ಥಾಪಿಸಿದೆ ಉ-ದಾರ ಶ್ರೀಕೃಷ್ಣನ ದಾಸರೊಳು ದೊರೆಯೆ 3
***
rendered by
shrI Ananda rAo, srIrangam
to aid learning the dAsara pada for beginners
rAga: sUrya
tALa: kanTacApu
Aru ninagidiradhika dhAruNiyoLage |
sAra shAstravanorada sarvajJa munirAya ||
Arondu vairigaLa taridu vaishNavarige
AreraDu Urdhva puNDragaLa iDisi
Aru mUrara mElE mUradhika kumatagaLa
bErorasi kittomme bisuDanta dhIrA ||
Aru nAlaku tatvadabhimAnigaLa goDeya
mArutana mUraneya avatArane
Araidu mEleraDu adhika lakShaNavuLLa
mUrutiyoLopputiha munivarENya ||
ArAru mElondu adhika lekkada grantha
sAravanu racisi sajjanarigiddu
paramArttika bhEda pancava sthApisidE
udAra shrI kRSNana dAsaroLu doreye ||
***
ಆರು ನಿಮಗಿದಿರಖಿಳ ಧಾರುಣಿಯೊಳಗೆ , ಪರಮ ॥ ಪ ॥
ಕಾರುಣಿಕ ಗುರುಮಧ್ವ ಚಾರುಚರಿತಾ ॥ ಅ ಪ ॥
ಆರೊಂದು ವೈರಿಗಳ ತರಿದು ವೈಷ್ಣವರಿಗೆ ।
ಆರೆರಡು ಊರ್ಧ್ವಪುಂಡ್ರಗಳನಿಡಿಸಿ ॥
ಆರು ಮೂರರ ಮ್ಯಾಲೆ ಮೂರಧಿಕ ಕುಮತಗಳ ।
ಬೇರರಿಸಿ ಕಿತ್ತೊಮ್ಮೆ ಬಿಸುಟ ಧೀರ ॥ 1 ॥
ಆರು ನಾಲ್ಕು ತತ್ವದಭಿಮಾನಿಗಳಿಗೊಡೆಯ ।
ಮಾರುತೀ ಮೂರನೇ ಅವತಾರನೆ ॥
ಆರೈದು ಮ್ಯಾಲೆರಡು ಅಧಿಕ ಲಕ್ಷಣವುಳ್ಳ । ಮೂರುತಿಯೊಳೊಪ್ಪುತಿಹ್ಯ ಮುನಿವರೇಣ್ಯ ॥ 2 ॥
ಆರಾರು ಮ್ಯಾಲೊಂದು ಅಧಿಕ ಲೆಖ್ಖದ ಗ್ರಂಥ ।
ಸಾರವನು ರಚಿಸಿ ಸಜ್ಜನರಿಗೊಲಿದು ॥
ಪಾರಮಾರ್ಥಿಕ ಭೇದ ಪಂಚಕವ ಸ್ಥಾಪಿಸಿ ಉ - ।
ದಾರ ಕೃಷ್ಣನ್ನ ದಾಸರೊಳು ಮೆರೆದೆ ॥ 3 ॥
***