Showing posts with label ಶೇಷದೇವ ಶೇಷದೇವ ವಾರುಣೀಶ ಪಾಹಿ ಮಾಂ prasannashreenivasa. Show all posts
Showing posts with label ಶೇಷದೇವ ಶೇಷದೇವ ವಾರುಣೀಶ ಪಾಹಿ ಮಾಂ prasannashreenivasa. Show all posts

Thursday, 5 August 2021

ಶೇಷದೇವ ಶೇಷದೇವ ವಾರುಣೀಶ ಪಾಹಿ ಮಾಂ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ಶೇಷದೇವರು


ಶೇಷದೇವ ಶೇಷದೇವ ವಾರುಣೀಶ ಪಾಹಿ ಮಾಂ ಶೇಷದೇವ ಪ


ಷಡ್ಗುಣೈಶ್ವರ್ಯಪೂರ್ಣ ಕೇವಲಾನಂದರೂಪ

ಜಡಜಾಕ್ಷ ಜಯೇಶನಿಗೆ ಪರ್ಯಂಕ ನಮೋ ನಮೋ 1


ದ್ಯುಭ್ವಾದಿಗಳಿಗಾಧಾರ ವೇದವತೀಶ ಕೂರ್ಮ

ವಿದ್ಯುನ್ ರಮಣ ಕೂರ್ಮರ ಒಲುಮೆ ನಿನ್ನಲಿ ಸದಾ 2


ಗಿರಿಸಿಂಧುಯುತಧರೆ ಬ್ರಹ್ಮಾಂಡ ಸರ್ವವ

ಧರಿಸಿರುವೆ ಫಣಿಯ ಮೇಲೆ ಶರ್ಷಪದಂತೆ ನೀನು 3


ಖದ್ರೂಜಾದಿ ವಿಷ ಸರ್ವದೋಷವೆನಗೆ ತಗಲದಂತೆ

ಕರ್ದಮರ ಸುತನಲ್ಲಿ ಭಕ್ತಿಜ್ಞಾನ ಸತತವೀಯೊ 4


ಶ್ರಷ್ಟಿಧರ ಶುಕ್ಲವರ್ಣ ಸಹಸ್ರಫಣಿ ನೀಲವಾ¸ À

ಸೃಷ್ಟಿಕರ್ತ ವೇಧತಾತ ಪ್ರಸನ್ನ ಶ್ರೀನಿವಾಸನ ತೋರೊ 5

***