Showing posts with label ಎಷ್ಟು ಪೊಗಳಲಿ ನಾನು ಎನ್ನೊಡೆಯ ನಿನ್ನ ವಿಶಿಷ್ಟ ಮಹಿಮೆಗಳನು kadarundalagihanumaiah. Show all posts
Showing posts with label ಎಷ್ಟು ಪೊಗಳಲಿ ನಾನು ಎನ್ನೊಡೆಯ ನಿನ್ನ ವಿಶಿಷ್ಟ ಮಹಿಮೆಗಳನು kadarundalagihanumaiah. Show all posts

Tuesday, 3 August 2021

ಎಷ್ಟು ಪೊಗಳಲಿ ನಾನು ಎನ್ನೊಡೆಯ ನಿನ್ನ ವಿಶಿಷ್ಟ ಮಹಿಮೆಗಳನು ankita kadarundalagihanumaiah

 ..

ಎಷ್ಟು ಪೊಗಳಲಿ ನಾನು

ಎನ್ನೊಡೆಯ ನಿನ್ನ ವಿ-

ಶಿಷ್ಟ ಮಹಿಮೆಗಳನು

ಭಕ್ತರಿಗೆ ಬಂದಾ ಕಷ್ಟ ಕಳೆಯುವೆಯೋ ನೀನು

ಸುರಕಾಮಧೇನು

ವಿಷ್ಣುವೇ ಪರದೈವವೆಂದು

ದುಷ್ಟರಾಕ್ಷಸರನ್ನೆ ಕೊಂದು

ಸೃಷ್ಟಿಪಾಲಿಪ ಶ್ರೀ ರಮೇಶನೇ

ಇಷ್ಟ ಭಕುತರೊಳು ಶ್ರೇಷ್ಠನೆನಿಶಿದಿ ಪ


ತಾಯಿಯೂ ಬಂದು ಸೇವೆಗೆ ರಘುಪತಿ

ರಾಯನಲೆ ನಿಂದು ಬಯಸಲಿಲ್ಲಾ ಒಂದು

ಶ್ರೀಹರಿಗೆ ಬಂದು

ಕಾಯಬೇಕು ಸುಗ್ರೀವನೆನುತಲಿ

ತೋಯಜಾಕ್ಷಗೆ ಪೇಳಿ ವಾಲಿಯ ಉ-

ಪಾಯದಿಂದಲಿ ಕೊಲಿಸಿ ರವಿಜಗೆ ಸ-

ಹಾಯ ಮಾಡಿದಿ ವಾಯುತನಯನೆ 1


ಕಡಲ ಬೇಗನೆ ಹಾರೀ ಶ್ರೀರಾಮನ

ಮಡದಿಗುಂಗುರ ತೋರಿ ಅಲ್ಲಿದ್ದ ಅಸುರರ

ಜಡಿದೆ ಬಲು ಹೊಂತಕಾರಿ

ಮಾಡಿಯೊ ಸೂರಿ

ಒಡೆಯಗ್ವಾರ್ತೆಯ ಪೇಳಿ ಶೀಘ್ರದಿ

ನಡೆಸಿ ಸೈನ್ಯವ ದಶಮುಖನ ಶಿರ

ಹೊಡೆಸಿದಾಕ್ಷಣ ಲೋಕಮಾತೆಯ

ಒಡಗೂಡಿಸಿದೆಯೋ ಶ್ರೀರಾಮಚಂದ್ರಗೆ 2


ಮೂರು ರೂಪವ ತಾಳ್ದಿ ಮಹಯೋಗ್ಯ ಜನರಿಗೆ

ಸಾರ ತತ್ವವ ಪೇಳ್ದಿ

ಶರಣ್ಹೊಕ್ಕ ಜನರಪಾರ ದುಃಖವ ಶೀಳ್ದಿ

ಮೊರೆಯ ಕೇಳ್ದಿ

ಧೀರ ಕದರುಂಡಲಗಿ ಹನುಮಯ್ಯ

ಸೇರಿದೆನೊ ನಿನ್ನಂಘ್ರಿ ಕಮಲವ

ಗಾರು ಮಾಡದೆ ಸಲಹೊ

ಕರುಣವಾರಿಧಿ ನೀಯೆನ್ನನೀಗಲೆ 3

****