Showing posts with label ಆತ್ಮನಿವೇದನಾಸ್ತುತಿಗಳು ಸನ್ನುತ ವನಜಭವಾನುತ ramadasa.a. Show all posts
Showing posts with label ಆತ್ಮನಿವೇದನಾಸ್ತುತಿಗಳು ಸನ್ನುತ ವನಜಭವಾನುತ ramadasa.a. Show all posts

Sunday 5 September 2021

ಆತ್ಮನಿವೇದನಾಸ್ತುತಿಗಳು ಸನ್ನುತ ವನಜಭವಾನುತ ankita ramadasa.a

 ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa

ಆತ್ಮನಿವೇದನಾಸ್ತುತಿಗಳು ಸನ್ನುತ ವನಜಭವಾನುತ ಪ 


ಮುನಿಜನವಂದಿತ ಅನಘ ವಿರಾಜಿತ ಅ.ಪ ಭಕುತಿಯಲ್ಲವೆ ಜೀಯ ಮುಕುತಿಗೊಂಡಿಹನಯ್ಯ ವಿಕಳನಾ ಮುನಿಗೇಯ ಸುಕವಿಪೂಜಿತಕಾಯ 1 

ಮರೆಯಬೇಡವೋ ಯನ್ನ ಗರುಡಗಮನ ನಿನ್ನ ಚರಣ ಸೇವಕರನ್ನ ನಿರುತನೆನೆವೆ ಮುನ್ನ 2 

ನಡುಗಡಲಿನೊಳಿಹೆ ತಡಬಡಿಸುತಲಿಹೆ ಪಿಡಿಯಲು ತೃಣವಿಲ್ಲ ನುಡಿವರು ಗತಿಯಿಲ್ಲ 3 

ತಾಮಸನಯ್ಯ ಬೇಡ ನೀ ಮನಸೋಲಬೇಡ ಪಾಮರ ವರದನೆ | ರಾಮದಾಸಾರ್ಚಿತನೆ4 

ಮಾಂಗಿರಿವರವಾಸ ರಂಗನಾಥನೆ ಶ್ರೀಶಾ ಹಿಂಗದೆ ಯನ್ನಂತರಂಗದೆ ನಿಲೊ ಈಶಾ 5

***