..
ಮಂದ ಮಾನವ ತ್ವರಿತ ||
ವೃಂದಾರಕ ಸದ್ವಂಶಜರಿವರೆನುತ
ಮನದೊಳು ಭಾವಿಸುತ ಪ
ಗುರುಸುವೃತೀಂದ್ರರ ಕರಕಮಲದಿ ತಾನು
ತುರಿಯಾಶ್ರಮವನು |
ಧರಿಸುತ ಹರುಷದಿ ರಘುಕುಲಜನ ಚರಣ
ಆರಾಧಿಸಿ ಘನ್ನ ||
ಮರುತಾತಮ ಮರ್ಮಜ್ಞನು ತಾನಾಗಿ
ಮೆರೆದನು ಚೆನ್ನಾಗಿ1
ವರಹಜನದಿ ವಾಸರ ಒಲಿಮೆಯಲಿ
ಧರೆಯಲಿ ಚರಿಸುತಲಿ
ಪರವಾದಿಯ ಮತ-
ಜರಿಯುತ ವೈಷ್ಣವರ ಉದ್ಧರಿಸಿದ ಧೀರ
ನರನೆಂದಿವರನು ನಿಂದಿಸುವನೆ ದೈತ್ಯ
ನಾ ಪೇಳುವೆ ಸತ್ಯ 2
ಶ್ರೀಮನೋವಲ್ಲಭ ಶಾಮಸುಂದರ
ನಾಮವ ಪ್ರತಿದಿನ |
ನೇಮದಿ ಪಠಿಸುತ ಪ್ರೀಮದಿ ಶಿಷ್ಯರನ
ಸಲಹಿದ ಸಂಪನ್ನ |
ಧೀಮಜ್ಜನ ಸಂಸೇವಿತ ಸುವೃತೀಂದ್ರ
ಹೃತ್ಕುಮುದಕೆ ಚಂದ್ರ 3
***