Showing posts with label ಎಂಜಲವನೆ ಬಳಿದ ಶ್ರೀಹರಿ ರಾಜಿಸುವ ರಂಜಿಸುವ purandara vittala ENJALAVANE BALIDAA SRIHARI RAAJISUVA RANJISUVA. Show all posts
Showing posts with label ಎಂಜಲವನೆ ಬಳಿದ ಶ್ರೀಹರಿ ರಾಜಿಸುವ ರಂಜಿಸುವ purandara vittala ENJALAVANE BALIDAA SRIHARI RAAJISUVA RANJISUVA. Show all posts

Wednesday, 4 December 2019

ಎಂಜಲವನೆ ಬಳಿದ ಶ್ರೀಹರಿ ರಾಜಿಸುವ ರಂಜಿಸುವ purandara vittala ENJALAVANE BALIDAA SRIHARI RAAJISUVA RANJISUVA



CLCK ->  HOME           

RESTART MOBILE IF AUDIO IS NOT PLAYING

just scroll down for other devaranama 


ಎಂಜಲವನೆ ಬಳಿದ ಶ್ರೀಹರಿ

ರಾಜಿಸುವ ರಂಜಿಸುವ ರಾಜಸೂಯ ಯಾಗದಲ್ಲಿ

ಉಟ್ಟ ಪೀತಾಂಬರ ಟೊಂಕಕೆ ಕಟ್ಟಿ
ಕಟ್ಟಿದ್ದ ಸರಗಳ ಹಿಂದಕೆ ಸರಿಸಿ
ಸರಸರ ಎಲೆಗಳ ತೆಗೆದು ಬಿಸಾಕಿದ
ಕಟ್ಟ ಕಡೆಗೆ ತಾನೆ ಬಳಿದು ನಿಂತ

ಪೊರಕೆಯ ಪಿಡಿದು ಕಸವನೆ ಗುಡಿಸಿ
ಹೆಂಡಿಯ ನೀರೊಳು ಕಲಸಿ ಥಳಿಯ ಹಾಕಿ
ಸಾಲು ಸಾಲಾಗಿ ಮಣೆಗಳನ್ನಿಟ್ಟು ಎಲೆ ಹಾಕಿ
ರಂಗೋಲಿ ಕೊಳವಿಯ ಎಳೆದು ತಾ ನಿಂತ

ಎನ್ನ ಕೆಲಸಾಯ್ತೆoದ ಇನ್ನೇಕೆ ತಡವೆಂದ
ಇನ್ನೊಂದು ಪಂಕ್ತಿಯ ಕೂಡ ಹೇಳೆಂದ
ಘನ್ನಮಹಿಮ ಸಿರಿಪುರಂದರ ವಿಠಲನು
ಪುಣ್ಯಾತ್ಮರುಂಡ ಎಲೆಗಳನು ಬಳಿದು ನಿಂತ
***

Pallavi
Enjalavane baḷida Srīhari |
rājisuva ranjisuva Rājasūya yāgadalli ||

Charanam 1
Uṭṭa pītāmbara toṅkake kaṭṭi |
kaṭṭidda saragaḷa hindake sarisi |
sarasara elegaḷa tegedu bisākida |
kaṭṭa kaḍege tāne baḷidu ninta ||

Charanam 2
Porakeya piḍidu kasavane guḍisi |
heṇḍiya nīroḷu kalasi thaḷiya hāki |
sālu sālāgi maṇegaḷanniṭṭu ele hāki |
raṅgōli koḷaviya eḷedu tā ninta ||

Charanam 3
Enna kelasāytenda innéke taḍavenda |
innondu paṅktiya kūḍa hēḷenda |
ghannamahima Siripurandara Viṭhalanu |
puṇyātmaruṇḍa elegaḷanu baḷidu ninta ||
***

Pronunciation Guide:
ḷ: Retroflex 'l' (tongue curled back, as in Kannada).
ṇ: Retroflex 'n' (as in Guna).
ṭ / ḍ: Hard 't' and 'd' sounds (as in Tom or Dog).
ā / ī / ū: Long vowel sounds (aa, ee, oo).
Th / Ph: In the word Viṭhalanu or thaḷiya, the 'h' indicates an aspirated breathy sound.
***


ಪುರಂದರದಾಸರ ಈ ಅದ್ಭುತ ಕೀರ್ತನೆಯಲ್ಲಿ ಶ್ರೀಕೃಷ್ಣನ (ಹರಿಯ) ಭಕ್ತವತ್ಸಲತೆ ಮತ್ತು ಆತನ ವಿನಯವಂತಿಕೆಯನ್ನು ಅತ್ಯಂತ ಮನೋಜ್ಞವಾಗಿ ವರ್ಣಿಸಲಾಗಿದೆ. ಈ ಹಾಡಿನ ಸಾರಾಂಶ ಮತ್ತು ಭಾವಾರ್ಥ ಇಲ್ಲಿದೆ:

ಸಾರಾಂಶ (Summary)
ಪಾಂಡವರು ರಾಜಸೂಯ ಯಾಗವನ್ನು ಮಾಡಿದಾಗ, ಸಾಕ್ಷಾತ್ ಜಗದೊಡೆಯನಾದ ಶ್ರೀಕೃಷ್ಣನು ತನಗೆ ಯಾವುದೇ ದೊಡ್ಡ ಜವಾಬ್ದಾರಿ ಬೇಡವೆಂದು ಹೇಳಿ, ಬಂದ ಅತಿಥಿಗಳು ಊಟ ಮಾಡಿದ ನಂತರ ಉಳಿಯುವ 'ಎಂಜಲು ಎಲೆಗಳನ್ನು' ತೆಗೆಯುವ ಮತ್ತು ಆ ಜಾಗವನ್ನು ಸ್ವಚ್ಛಗೊಳಿಸುವ ಸೇವೆಯನ್ನು ಆರಿಸಿಕೊಳ್ಳುತ್ತಾನೆ. ದೇವರು ಕೇವಲ ಪ್ರಾರ್ಥನೆಗೆ ಮಾತ್ರವಲ್ಲ, ಸೇವೆಗೂ ಲಭ್ಯನಿದ್ದಾನೆ ಮತ್ತು ಭಕ್ತರಿಗಾಗಿ ಎಂತಹ ಕೀಳು ಎನ್ನಲಾಗುವ ಕೆಲಸವನ್ನೂ ಪ್ರೀತಿಯಿಂದ ಮಾಡುತ್ತಾನೆ ಎಂಬುದು ಈ ಕೀರ್ತನೆಯ ಸಾರ.

ಭಾವಾರ್ಥ (Paragraph-wise Meaning)
ಪಲ್ಲವಿ:

ಎಂಜಲವನೆ ಬಳಿದ ಶ್ರೀಹರಿ
ರಾಜಿಸುವ ರಂಜಿಸುವ ರಾಜಸೂಯ ಯಾಗದಲ್ಲಿ

ಭಾವಾರ್ಥ: ಪಾಂಡವರು ನಡೆಸಿದ ಭವ್ಯವಾದ 'ರಾಜಸೂಯ ಯಾಗ'ದಲ್ಲಿ, ಎಲ್ಲರೂ ನೋಡಿ ಬೆರಗಾಗುವಂತೆ ರಾರಾಜಿಸುತ್ತಿದ್ದ ಶ್ರೀಹರಿಯು, ಅಲ್ಲಿ ಉಂಡು ಹೋದವರ ಎಂಜಲು ಎಲೆಗಳನ್ನು ಎತ್ತಿ ಸ್ವಚ್ಛ ಮಾಡುವ ಕೆಲಸವನ್ನು ಮಾಡಿದನು. ಸಕಲ ಲೋಕಕ್ಕೂ ನಾಥನಾದವನು ಇಲ್ಲಿ ಸೇವಕನಂತೆ ದೀನನಾಗಿ ನಿಂತಿದ್ದಾನೆ.

ಮೊದಲನೆಯ ಚರಣ:

ಉಟ್ಟ ಪೀತಾಂಬರ ಟೊಂಕಕೆ ಕಟ್ಟಿ
ಕಟ್ಟಿದ್ದ ಸರಗಳ ಹಿಂದಕೆ ಸರಿಸಿ
ಸರಸರ ಎಲೆಗಳ ತೆಗೆದು ಬಿಸಾಕಿದ
ಕಟ್ಟ ಕಡೆಗೆ ತಾನೆ ಬಳಿದು ನಿಂತ

ಭಾವಾರ್ಥ: ಕೆಲಸಕ್ಕೆ ಅಡ್ಡಿಯಾಗಬಾರದೆಂದು ತಾನು ಉಟ್ಟಿದ್ದ ರೇಷ್ಮೆ ಪೀತಾಂಬರವನ್ನು ಸೊಂಟಕ್ಕೆ ಬಿಗಿದು ಕಟ್ಟಿಕೊಂಡನು. ಎದೆಯ ಮೇಲಿದ್ದ ಹಾರಗಳು ಮುಂದೆ ಬಂದು ತೊಂದರೆ ಕೊಡಬಾರದೆಂದು ಅವುಗಳನ್ನು ಬೆನ್ನ ಹಿಂದೆ ಸರಿಸಿದನು. ಅತ್ಯಂತ ವೇಗವಾಗಿ (ಸರಸರನೆ) ಎಂಜಲು ಎಲೆಗಳನ್ನು ಎತ್ತಿ ಬಿಸಾಡಿದನು. ಕೊನೆಗೆ ಉಳಿದ ಗಲೀಜನ್ನೆಲ್ಲ ತಾನೇ ಸ್ವತಃ ಗುಡಿಸಿ ಸುಚಿ ಮಾಡಿದನು.

ಎರಡನೆಯ ಚರಣ:

ಪೊರಕೆಯ ಪಿಡಿದು ಕಸವನೆ ಗುಡಿಸಿ
ಹೆಂಡಿಯ ನೀರೊಳು ಕಲಸಿ ಥಳಿಯ ಹಾಕಿ
ಸಾಲು ಸಾಲಾಗಿ ಮಣೆಗಳನ್ನಿಟ್ಟು ಎಲೆ ಹಾಕಿ
ರಂಗೋಲಿ ಕೊಳವಿಯ ಎಳೆದು ತಾ ನಿಂತ

ಭಾವಾರ್ಥ: ದೇವನು ಕೈಯಲ್ಲಿ ಪೊರಕೆಯನ್ನು ಹಿಡಿದು ಕಸ ಗುಡಿಸಿದನು. ಗೋಮಯವನ್ನು (ಸಗಣಿ) ನೀರಿನಲ್ಲಿ ಬೆರೆಸಿ ನೆಲಕ್ಕೆ ಪ್ರೋಕ್ಷಣೆ ಮಾಡಿ (ಥಳಿ ಹಾಕಿ) ಶುದ್ಧಗೊಳಿಸಿದನು. ಮುಂದಿನ ಪಂಕ್ತಿಯ ಊಟಕ್ಕೆ ಸಾಲಾಗಿ ಮಣೆಗಳನ್ನು ಜೋಡಿಸಿ, ಎಲೆಗಳನ್ನು ಹಾಕಿದನು. ಅಷ್ಟೇ ಅಲ್ಲದೆ, ಅಂದವಾಗಿ ರಂಗೋಲಿಯನ್ನು ಹಾಕಿ ಎಲ್ಲ ಸಿದ್ಧತೆ ಮಾಡಿ ಸಂಭ್ರಮದಿಂದ ನಿಂತನು.

ಮೂರನೆಯ ಚರಣ:

ಎನ್ನ ಕೆಲಸಾಯ್ತೆoದ ಇನ್ನೇಕೆ ತಡವೆಂದ
ಇನ್ನೊಂದು ಪಂಕ್ತಿಯ ಕೂಡ ಹೇಳೆಂದ
ಘನ್ನಮಹಿಮ ಸಿರಿಪುರಂದರ ವಿಠಲನು
ಪುಣ್ಯಾತ್ಮರುಂಡ ಎಲೆಗಳನು ಬಳಿದು ನಿಂತ

ಭಾವಾರ್ಥ: ಒಂದು ಪಂಕ್ತಿಯ ಕೆಲಸ ಮುಗಿದ ತಕ್ಷಣ, "ನನ್ನ ಕೆಲಸ ಮುಗಿಯಿತು, ಮುಂದಿನ ಪಂಕ್ತಿ ಯಾವಾಗ? ತಡ ಮಾಡಬೇಡಿ, ಬೇಗ ಹೇಳಿ" ಎಂದು ಉತ್ಸಾಹದಿಂದ ಕೇಳಿದನು. ಮಹಾ ಮಹಿಮೆಯುಳ್ಳವನೂ, ಲಕ್ಷ್ಮೀಪತಿಯೂ ಆದ ಪುರಂದರ ವಿಠಲನು, ಆ ಯಾಗಕ್ಕೆ ಬಂದಿದ್ದ ಪುಣ್ಯಾತ್ಮರು ಉಂಡು ಬಿಟ್ಟ ಎಂಜಲು ಎಲೆಗಳನ್ನು ಎತ್ತುತ್ತಾ ಭಕ್ತರ ಸೇವೆಯಲ್ಲಿ ಮಗ್ನನಾದನು.

ಗಮನಿಸಿ: ಈ ಕೀರ್ತನೆಯು ದೇವರಲ್ಲಿ ಅಹಂಕಾರವಿಲ್ಲ ಎಂಬುವುದನ್ನು ಮತ್ತು ಭಕ್ತಿಯ ಮುಂದೆ 'ಸೇವೆ'ಯೇ ದೊಡ್ಡದು ಎಂಬುವುದನ್ನು ನಮಗೆ ಕಲಿಸಿಕೊಡುತ್ತದೆ.
***

This beautiful composition by Purandara Dasa illustrates the extreme humility and "Bhaktavatsalyata" (love for devotees) of Lord Sri Krishna. It describes a scene from the Rajasuya Yaga performed by the Pandavas.

Summary
In this song, the poet marvels at how the Supreme Lord of the universe, Sri Krishna, took upon himself the most humble task during the Pandavas' grand sacrifice. While other kings and sages took on dignified roles, Krishna chose to clear the leftover food leaves (Enjala) and clean the dining area. The poem highlights that God is not just a ruler to be feared, but a companion who finds joy in serving His devotees, proving that no service is "lowly" when done with love.

Stanza-wise Meaning
Pallavi
Enjalavane balida Srihari
Rajisuva ranjisuva Rajasuya yagadalli

Meaning: In the magnificent and glowing Rajasuya Yaga (sacrifice), Sri Hari (Krishna) busied himself by clearing the leftovers of the guests. The Lord, who shines with divine brilliance, delighted everyone by performing this humble manual service.

Stanza 1
Utta peethambara tonkake katti
Kattidda saragala hindake sarisi
Sarasara elegala tegedu bisakida
Katta kadege tane balidu ninta

Meaning: To prepare for the work, Krishna tucked his golden silk garment (Peethambara) tightly around his waist. He pushed his long ornamental necklaces to his back so they wouldn't obstruct his movement. Then, he quickly (sara-sara) picked up the used dining leaves and discarded them. Finally, he stayed back to personally scrub and wipe the floor clean.

Stanza 2
Porakeya pididu kasavane gudisi
Hendiya neerolu kalasi thaliya haaki
Saalu saalagi manegalannittu ele haaki
Rangoli kolaviya eledu tha ninta

Meaning: He held a broom and swept away the dust. He mixed cow dung (hendi) with water and sprinkled it on the ground to purify the area (a traditional ritual cleaning). He then neatly arranged rows of wooden planks (manegalannittu) for the next batch of guests, laid out fresh dining leaves, and even drew beautiful decorative patterns (Rangoli) with a tube to make the place inviting.

Stanza 3
Enna kelasaythenda inneke tadavenda
Innondu panktiya kooda helenda
Ghannamahima Siripurandara Vithalanu
Punyatmarunda elegalanu balidu ninta

Meaning: As soon as he finished, he enthusiastically asked, "My work here is done, why the delay now? Tell the next row (pankti) of guests to come in!" The great and glorious Purandara Vithala, the Lord of Lakshmi, stood there ready and eager, clearing the leaves used by the noble souls who had gathered for the sacrifice.

Note: This song is a powerful reminder that in the eyes of the Divine, service (Seva) offered with humility is the highest form of worship, and God is always ready to serve those who love Him.
***


Rajisuva ranjisuva rajasuya yagadalli | 
Enjalavane baleda shri hari || p ||

Utta pitambara tonkakke katti | kattida saragala hindake sarisi || 
sarasara elegala tegedu bisaakida | katta kadege taanu baledu ninta || 1 ||

Porakeya pididu kasavane gudisi | saganeya neerolu kalisi thaliya haaki ||
Saalu saalaagi maneyittu ele haaki | rangoli kolaviya eledu ta ninta || 2 ||

Enna kelasaaitenda inneke tadavenda | innondu panktiya kooda helenda || ghanna mahima shri purandara vithalanu | punyatmaru unda elegalanu tegedu ninta ||3||
***

ಎಂಜಲು ಎಲೆಯ ಬಳೆದಾ ಶ್ರೀಹರಿ 
ರಾಜಿಸುವ ರಂಜಿಸುವ ರಾಜಸೂಯ ಯಾಗದಲ್ಲಿ| ಉಟ್ಟಪೀತಾಂಬರ ಟೊಂಕಕೆ ಕಟ್ಟಿ ಕಟ್ಟಿದ ಸರಗಳ ಹಿಂದಕ್ಕೆ ಸರಿಸಿ ಸರ ಎಲೆಗಳ ತೆಗೆದು ಬಿಸಾಕಿದ 
ಕಟ್ಟ ಕಡೆಯ ಎಲೆ ಬಳೆದು ತಾನಿಂತಾ||
 ಪೊರಕೆಯ ಪಿಡಿದು ಕಸವನೆಗುಡಿಸಿ 
ಸಗಣಿಯ ನೀರಲಿ ಕಲಿಸಿ ಥಳಿಯ ಹಾಕಿ 
ಸಾಲು ಸಾಲಾಗಿ ಮಣೆಗಳ ಇಟ್ಟು ಎಲೆ ಹಾಕಿ 
ರಂಗೋಲಿ ಕೊಳವೆಯಾ ಎಳೆದು ತಾ ನಿಂತಾ
ತನ್ನ ಕೆಲಸ ಆಯಿತೆಂದ ಇನ್ನೇಕೆ ತಡವೆಂದ ಇನ್ನೊಂದು ಪಂಕ್ತಿಯ ಕೂಡ ಹೇಳಿದ
 ಘನ ಮಹಿಮೆ ಶ್ರೀ ಪುರಂದರ ವಿಠಲ ಪುಣ್ಯಾತ್ಮರು ಉಂಡ ಎಲೆ  ಬಳೆದಾ||


ಶ್ರೀಹರಿಯಲ್ಲಿ ಉಕ್ಕಿ ಬರುವ ಭಕ್ತ ವಾತ್ಸಲ್ಯ, ಭಕ್ತಪರಾಧೀನತೆ ಇಲ್ಲಿ ವರ್ಣಿತ. ಅದು ದಾಸ ವರೇಣ್ಯ ಪುರಂದರ ದಾಸರ ಮಾತಿನ ಸೊಬಗಿನಲ್ಲಿ!
ಅದು ಕೃಷ್ಣನ ಆಜ್ಞೆಯಂತೆ ದೈತ್ಯ ಶಿಲ್ಪಿ ಮಯ ನಿರ್ಮಿತ ದಿವ್ಯ ಭವನ. ವಿಚಿತ್ರ ರತ್ನಗಳಿಂದ ನಿರ್ಮಿತ. ಸೂರ್ಯಕಾಂತಿ ಸಮಪ್ರಭ ಸಭೆಯನ್ನು ತುಂಬಿತ್ತು.
 ಶ್ರೀ ಕೃಷ್ಣನ ನಾಯಕತ್ವ. ಕೃಷ್ಣನ ಭಕ್ತರಾದ ಪಾಂಡವರ ಸಿರಿಸಂಪದದ, ಭಕ್ತಿ  ಶ್ರದ್ಧೆಯ, ಧರ್ಮದ ಉನ್ನತಿಯ ವೈಭವದ ಮೆರವಣಿಗೆ.
ಕೌರವರನ್ನು ಸೇರಿಸಿ ಜಗದ ಸಕಲ ರಾಜರ, ರಾಜರಾಜರ ಉಪಸ್ಥಿತಿ ಅಲ್ಲಿಯ ಸಂಭ್ರಮ ಸಡಗರ ವೈಭವ ವರ್ಣನಾತೀತ. 
ಯಾಕೆ?
ಜಗದೊಡೆಯ ಸಿರಿ ರಮಣ ಶ್ರೀ ಕೃಷ್ಣ ನಿದ್ದಾನಲ್ಲವೇ!
ಮೂರು ಲೋಕದಿ ಬರುವ ಸುರ ನರ ಜನಸಾಗರ.  ಎಲ್ಲವೂ ಸುವ್ಯವಸ್ಥಿತ. ಯಾವುದರ ಕೊರತೆ ಅಲ್ಲಿಲ್ಲ.
ಅದಕ್ಕಾಗಿ ದಾಸರ ಮಾತು ರಂಜಿಸುವ ರಾರಾಜಿಸುವ ರಾಜಸೂಯ ಯಾಗ.
ಲಕ್ಷೋಪಲಕ್ಷ ಜನರ ಭೂರಿ ಭೋಜನ. ಪಂಕ್ತಿಯ ಮೇಲೆ ಪಂಕ್ತಿ. ಅದರ ಮೇಲೆ ಮತ್ತೊಂದು ಪಂಕ್ತಿ. ಅದರ ಮೇಲೆ ಮಗದೊಂದು.  ಇಂತು ಬೆಳೆಯುತ್ತಿತ್ತು. ಮುಗಿಯುತ್ತಿರಲಿಲ್ಲ.
ಇಷ್ಟು ಜನ ಸಮುದ್ರದ ಎಂಜಲ ಎಲೆ ಬಳೆದು ಮತ್ತೆ ಮುಂದಿನವರಿಗೆ ಹೊಸ ಬಾಳೆ ಎಲೆ ಹಾಕಿ ಊಟಕ್ಕೆ ಕೂಡಿಸಬೇಕು. ಬಹು ಕ್ಲಿಷ್ಟಕರ ಕಾರ್ಯ. ಎಲ್ಲಿ ಕಷ್ಟವೋ ಅಲ್ಲಿ ಇಷ್ಟ ದೈವ ಶ್ರೀ ಕೃಷ್ಣ.
ಅಸಾಧ್ಯ ಸಾಧ್ಯ ಮಾಡುವ ಅಚಿಂತ್ಯ ಅದ್ಭುತ ಶಕ್ತಿಯ ದೊರೆ ಶ್ರೀ ಕೃಷ್ಣ. ಅದು ಆತನಿಗೆ ಲೀಲೆ ಆತ ಭಕ್ತ ವತ್ಸಲ ಭಕ್ತರ ಕೆಲಸ ಯಾವುದೇ ಇರಲಿ ಅದು ಎಂಜಲು ಎಲೆ ಬಳೆಯುವುದಾಗಲಿ ಕುದುರೆಗಳ ಮೈ ತೊಳೆಯುವುದಾಗಲಿ ಕೃಷ್ಣ ಸದಾ ಸಿದ್ಧ.
ಕೃಷ್ಣ ಜನಸಾಗರವ ಆಕರ್ಷಿಸಿದ. ಒಳಗೆ ಕರೆದೊಯ್ದ. ಅಕ್ಷಯ ಭೋಜನ ಶಾಲೆ ಮಣೆ ಹಾಕಿದ ಎಲೆ ಹಾಕಿದ ರಂಗೋಲಿ ಕೊಳವೆ ಎಳೆದ  ಮಣೆಯ ಮೇಲೆ ಕೂಡಿಸಿದ ದಿವ್ಯ ಭೋಜನ ಉಂಡವರು ಸಂತೃಪ್ತರು. ಪುಣ್ಯವಂತರು. ಉಂಡರು. ಹರಸಿದರು. ನೆನೆಸಿದರು. ಹೊರಟರು. ಕೊನೆ ಕಾಣದ ಸಾಲು ಸಾಲು ಎಂಜಲು‌ಎಲೆಗಳು.
ಕೃಷ್ಣ ನೋಡಿದ ಮುಗುಳು ನಕ್ಕ ಪೀತಾಂಬರ ಮೇಲೆತ್ತಿ ಸೊಂಟಕ್ಕೆ ಕಟ್ಟಿದ ಕೊರಳ ಅಲಂಕರಿಸಿದ ಸರಗಳ ಹಿಂದೆ ಸರಿಸಿದ ತನ್ನ ಮುಂದಿನ ಕಾರ್ಯಕ್ಕೆ ಕಿರಿಕಿರಿ ಬೇಡ ಎಂದ ಬಗ್ಗಿದಾ ತಗ್ಗಿದ ಬಾಗಿದ. ಎರಡೂ ಅಂಗೈಗಳ ನೆಲಕ್ಕೆ ಹಚ್ಚಿದ. ಎಂಜಲು  ಬಳೆದ. ಎಂಜಲ ಎಲೆಗಳ ಬಳಿದ.
ದೇವಲೋಕಕ್ಕೆ ಅಚ್ಚರಿ. ಏನಿದು ವಿಚಿತ್ರ! ಕೋಟಿ ಕೋಟಿ ಭೃತ್ಯರು ಇರಲು  ಸಾಟಿ ಇಲ್ಲದ ಶ್ರೀಹರಿ ತಾನೇ ಎಂಜಲ ಎಲೆ ಬಳಿದ. ಮತ್ತೆ ಪೊರಕೆ ಹೊರಕ್ಕೆ ಹಿಡಿದ ಕಸವು ಬಳೆದ ಸಗಣಿಯ ನೀರಲ್ಲಿ ಕಲಿಸಿದ  ಥಳಿಯ  ಹೊಡೆದ.  ದೋಷ ದೂರ ಎಲ್ಲ ಶುದ್ಧ ಮಾಡಿದ. ಗುಣಪರಿಪೂರ್ಣ ಮತ್ತೆ ಮಣೆ ಹಾಕಿದ. ಎಲೆ ಹಾಕಿದ. ರಂಗೋಲಿ ಕೊಳವೆ ಎಳೆದ. ಟೊಂಕದ ಮೇಲೆ ಕೈ ಇಟ್ಟ. ನಿಂತ. ಮುಂದಿನ ಪಂಕ್ತಿಯ ಜನರ ಕಳಿಸು ಬೇಗ ಎಂದಾ. 
ಇದೆಲ್ಲಾ ಅನಾಯಾಸದ ಲೀಲೆ ಕೃಷ್ಣನಿಗೆ.
ಇದು ದಾಸರ ಹಾಡಿನ ಒಂದು ಸಾಮಾನ್ಯ ಅರ್ಥ ದಾಸರಾದರು ಅಸಮಾನ್ಯರು ಅವರ ಮಾತಿನ ತಥ್ಯ ತಿಳಿಯಬೇಕು. 
ಹೀಗೂ ಇರಬಹುದೇ ಎಂದು ಒಂದು ಪ್ರಯತ್ನ-
ಜೀವನವೇ ಒಂದು ಯಜ್ಞ. ಮರಣ ಅವಭೃತ ಸ್ನಾನ.  ಶಾಸ್ತ್ರದ ಮಾತು.
ರಾಜಿಸುವ ರಂಜಿಸುವ ರಾಜಸೂಯಾಗ = ಜೀವನ ಸಂಸಾರ.
ರಾಜಸೂಯಯಾಗದಲ್ಲಿ ಎಲ್ಲರನ್ನೂ ಗೆಲ್ಲುವ ಕಷ್ಟವಿದೆ. ವೈಭವವಿದೆ. ಸುಖ ಸಂತೋಷವಿದೆ.
ಸಂಸಾರವೂ ಹಾಗೇ. ಸುಖ ದುಃಖಗಳ ಮಿಶ್ರಣ.
ಎಂಜಲು ಎಲೆಗಳನ್ನು ತೆಗೆಯುವುದು,ಬಿಸಾಕು ವುದು = ಪ್ರಳಯ.
ಊಟ ಆಯಿತು. ಎಲೆ ಕೆಲಸ ಮುಗಿಯಿತು. ಬಾಳೆಲೆ ಹಾಸಿ ಉಂಡು ಬೀಸಿ ಒಗೆದಾಂಗ ಜೀವನ.
ಜೀವ ಸೃಷ್ಟಿಗೆ ಬಂದ ಶರೀರ ತಂದ ಸಾಧನೆ ಮುಗಿಸಿದ. ಮತ್ತೇಕೆ ಶರೀರ? 
 ಹರಿ ಪ್ರಳಯ ತಂದ. ಸಕಲ ಪ್ರಕೃತಿ ನಿರ್ಮಿತ ಬಾಳೆ ಎಲೆಗಳ, ಶರೀರಗಲ ಎಂಜಲಯಗಳ ತೆಗೆದ, ಕೆಲಸ ಮುಗಿದ ಶರೀರಗಳ ಕಿತ್ತಿ ಎತ್ತಿ ಬಿಸಾಕಿದ. ಪಡೆ ದೇಹವನ್ನೂ ಬಿಡಲಿಲ್ಲ. ಅವರವರ ಗತಿ ಅವರವರಿಗೆ ಕೊಟ್ಟ. ಇದೇ ಪ್ರಳಯದ ಉದ್ದೇಶ.
ಎಂಜಲು ಬಳಿದ ಮೇಲೆ ಗೋಮಯದಿಂದ ನೆಲವ ಶುದ್ಧಿ ಮಾಡಿದ.
ಪ್ರಳಯದಲ್ಲಿ ಎಲ್ಲವನ್ನು ನುಂಗಿ ನೀರು ಕುಡಿದ.
 ಪೊರಕೆ‌ ಪಿಡಿದ. ಕಸಗೂಡಿಸಿದ. ತೃಣ ಬಿಡದೆ ಪ್ರಕೃತಿಯ 24 ತತ್ವಗಳನ್ನೂ ಮೂಲತತ್ವದಲ್ಲಿ ಲೀನ ಮಾಡಿದ. ತನ್ನ ರಮಣೀಯ ಕೈಯಲ್ಲಿ ಕೊಟ್ಟ.
 ನಿರ್ಮಲ ಮಾಡಿದ.
ರಾತ್ರಿ ಕಳೆಯಿತು. 
ಬೆಳಗು ಆರಂಭ. 
ಹರಿಯ ಸೃಷ್ಟಿಯ ಪ್ರಾರಂಭ.
ಮಣೆ ಹಾಕಿ ಜೀವಿಗಳ ಕರೆತಂದ.  ಜೀವಿಗಳಿಗೆ ಹುಟ್ಟಿನ ಹಿನ್ನೆಲೆ ಕೊಟ್ಟ. ಎಲೆ ಹಾಕಿದ. 
ಸ್ಥೂಲ ದೇಹ ಕೊಟ್ಟ. 
ರಂಗೋಲಿ ಕೊಳವೆ ಎಳೆದ. 
ಹಣೆಬರಹ ಬರೆದ. ಭೋಜನ ಉಣಿಸಿದ.
 ಮೂರು ರೀತಿಯ ಹಿಂದಿನ ಇಂದಿನ ಮುಂದಿನ ಕರ್ಮಗಳ ಉಣಬಡಿಸಿದ. 
ರುಚಿ, ಅರುಚಿ, ಸಿಹಿ ಕಹಿ ಹುಳಿ ಮಧುರ ಎಲ್ಲ ರೀತಿಯ ಕರ್ಮಗಳ ಉಣಿಸಿದ. 
ಅವರವರ ಸಾಧನೆ ಅವರವರಿಗೆ ಎಂದ. ಮಹಾಯುಗಾಂತ. ಸಾಧನೆ ಅಂತ. 
ಸಾಧನೆಗೆ ತಕ್ಕಂತೆ ಗತಿ ಕೊಟ್ಟ. ಅವರ ಸ್ಥಿರವಾಗಿ ಇಟ್ಟ.
ಆಯಿತಲ್ಲ. ತಿಂದಾಯಿತು. ಉಂಡಾಯಿತು. ಸಾಧನೆ ಮುಗಿಯಿತು. ಸ್ವಚ್ಛವಾಯಿತು ಜಗ. ಖಾಲಿಯಾಯಿತು. ಮತ್ತೇಕೆ ತಡ? 
ಮುಂದಿನ ಫ್ರೆಶ್ ಬ್ಯಾಚ್ ಬರಲಿ‌ಎಂದ. 
ಇದು ಸೃಷ್ಟಿ, ಸ್ತಿಥಿ, ಲಯ. ಅನಾಯಸವಾಗಿ ಅನಾಯಾಸವಾಗಿ ಲೀಲಯಾ ಮುಗಿಸಿದ. ಟೊಂಕದ ಮೇಲೆ ಕೈ ಇಟ್ಟ. ನಿಂತ. ಅಷ್ಟ ಕರ್ತೃತ್ವದ  ಪ್ರಭು ಶ್ರೀಹರಿ ಜಗದ ದೊರಿ. 
ಡಾ ವಿಜಯೇಂದ್ರ ದೇಸಾಯಿ.
ಶ್ರೀ ಕೃಷ್ಣಾರ್ಪಣಮಸ್ತು
***


just scroll down for other devaranama