Showing posts with label ಸಡಗರದಲಿ ಬಂದಾ ಶ್ರೀ ರಾಘವೇಂದ್ರ lakumeesha. Show all posts
Showing posts with label ಸಡಗರದಲಿ ಬಂದಾ ಶ್ರೀ ರಾಘವೇಂದ್ರ lakumeesha. Show all posts

Monday, 6 September 2021

ಸಡಗರದಲಿ ಬಂದಾ ಶ್ರೀ ರಾಘವೇಂದ್ರ ankita lakumeesha

 ankita ಲಕುಮೀಶ 

ರಾಗ: [ಕುಂತಲವರಾಳಿ] ತಾಳ: [ಆದಿ] 


ಸಡಗರದಲಿ ಬಂದಾ ಶ್ರೀ ರಾಘವೇಂದ್ರ 


ಸಡಗರದಲಿ ಬಂದಾ ಒಡೆಯ ರಾಘವೇಂದ್ರ

ದೃಢಭಕುತಿಲಿ ತನ್ನಡಿ ಭಜಿಪರ ಭವ

ಕಡಲ ದಾಟಿಸುವ ನಾವಿಕ ತಾನೆಂದು  ಅ ಪ


ಒಂದನೇ ಯುಗದಿ ಗೋವಿಂದನಾಜ್ಞೆಯಿಂದ

ಬಂದಾ ಕಯಾದುಗರ್ಭದಿಂದ ಪ್ರಹ್ಲಾದನೆನಸಿ

ನಂದನಂದನಪಾದ ಒಂದೇ ಮನದಿ ಭಜಿಸೆ 

ತಂದೆ ಕೋಪದಿಂದ ಕಂದಗೆ ಇಂತೆಂದನು 

ಅಂದು ನಿನ್ನ ಕಿರಿತಂದೆಯ ಕೊಂದ ಹಂದಿರೂಪಿ ಹರಿ 

ಎಂದು ನಿಂದಿಸಲು ತಂದೆಗೆ ನರಹರಿಯ ಅಂದು 

ಸ್ತಂಭದಿ ತೋರಿ ವಂದಿಸಿ ನಲಿದಾನಂದದಾಯಕನೆ  1

ರವಿತೇಜದಿ ಈತ ಭುವಿಯೊಳಗೆ ಜನಿಸಿ

ಸುವ್ಯಾಸರಾಜನೆನಿಸಿ ಪವನೇಶರಾ ಒಲಿಸಿ 

ಸುವರ್ಣ ರತ್ನಮಯ ಸಿಂಹಾಸನೇರಿ ಮೆರದು

ಅವನೀಪತಿಗೆ ಬಂದ ಕುಹಯೋಗವ ತರಿದು

ಭಾವಜನಯ್ಯನ ಭಾವಭಕುತಿಲಡಿದಾವರೆ ಭಜಿಸುತ

ಅದ್ವೈತಾಹಿಗೆ ಗೋವಕಾವನ ವಾಹನನೆನಸಿಸುತ 

ಪಾವನಚಂದ್ರಿಕೆ ಕೋವಿದರಿಗೆ ಸುಶ್ರಾವ್ಯದಿ ಪೇಳುತ  2

ಸುಂದರವಾದ ಮಂತ್ರಮಂದೀರದಲ್ಲಿ ರಾಘವೇಂದ್ರಮುನಿನಾಮ-

ದಿಂದ ವಿರಾಜಿಸುತ ತಂದೆ ಲಕುಮೀಶನಾನಂದದಿ ಪಾಡುತ

ವಂದಾರುನೂರುವರ್ಷ ಬೃಂದಾವನದಿ ಇದ್ದು

ಬಂದ ಭಕ್ತರ ದೋಷವೃಂದವ ಕಳೆಯುತ ವಂದಿಪ

ವಂಧ್ಯಗೆ ಕಂದರ ಕೊಡುತಲಿ ಸುಂದರ ಕಂಗಳ

ಅಂಧಕರಿಗೆ ಇತ್ತು ಒಂದುನವಸ್ಯಂದನನಂದನನರ್ಚಿಸಿ

ಮಂದಜಾಸನಮತ ಛಂದದಿ ಸಾರುತ  3

***