Showing posts with label ಮುಪ್ಪು ಇಲ್ಲದ ಅಪ್ಪ ತಿರುಪತಿ vijaya vittala ankita suladi ಶ್ರೀನಿವಾಸ ಸುಳಾದಿ MUPPU ILLADA APPA TIRUPATI SRINIVASA STOTRA SULADI. Show all posts
Showing posts with label ಮುಪ್ಪು ಇಲ್ಲದ ಅಪ್ಪ ತಿರುಪತಿ vijaya vittala ankita suladi ಶ್ರೀನಿವಾಸ ಸುಳಾದಿ MUPPU ILLADA APPA TIRUPATI SRINIVASA STOTRA SULADI. Show all posts

Sunday, 8 December 2019

ಮುಪ್ಪು ಇಲ್ಲದ ಅಪ್ಪ ತಿರುಪತಿ vijaya vittala ankita suladi ಶ್ರೀನಿವಾಸ ಸುಳಾದಿ MUPPU ILLADA APPA TIRUPATI SRINIVASA STOTRA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ 

 ಶ್ರೀನಿವಾಸನ ಸ್ತೋತ್ರ ಸುಳಾದಿ 

 ರಾಗ ಮಲಯಮಾರುತ 

 ಧ್ರುವತಾಳ 

ಮುಪ್ಪು ಇಲ್ಲದ ಅಪ್ಪ ತಿರುಪತಿ ತಿಮ್ಮೊಪ್ಪ 
ಮುಪ್ಪು ಇಲ್ಲದ ತಾಯಿ ಅಲುಮೇಲು ಮಂಗಾಯಿ 
ಮುಪ್ಪು ಇಲ್ಲದ ಗುರು ಶ್ರೀಮದಾಚಾರ್ಯರು 
ಮುಪ್ಪು ಇಲ್ಲದ ಬಾಂಧವರು ಹರಿಭಕ್ತರು 
ಮುಪ್ಪು ಇಲ್ಲದ ಧನ ಹರಿನಾಮ ಸಾಧನ 
ಮುಪ್ಪು ಇಲ್ಲದ ಸದನ ದಿವ್ಯಾನಂತಾಸನ 
ಮುಪ್ಪೆ ಮುಪ್ಪೆ ಇಲ್ಲ ಎಮ್ಮ ಸೌಭಾಗ್ಯಕ್ಕೆ 
ಮುಪ್ಪುರದೊಳಗೆ ಹರಿದಾಸರಿಗೆ ಎಣಿಯೆ 
ಮುಪ್ಪುರವಗೆಲಿದ ಅನಘ ವಿಜಯವಿಟ್ಠಲರೇಯ 
ಅಪ್ಪಾ ಭಕ್ತರ ಒಡನಾಡುವದು ತಪ್ಪಾ ॥ 1 ॥

 ಮಟ್ಟತಾಳ 

ಉಡಲಿ ಉಣಲುಂಟು ಕೊಡಲು ಕೊಣಲುಂಟು 
ಅಡಗಾಣಿಪ ಭವಗಡಲಾಯಾಸವನು 
ಬಡದೆ ದಾಟಲಿವುಂಟು ಸಡಗರದಲಿ ದ - 
ಟ್ಟಡಿ ಹರಿನಾಮವ ಹಡಗವೆಂಬುದು ಕೈ -
ವಿಡಿದು ಸುಖವನ್ನು ಪಡೆದು ವಿಜಯವಿಟ್ಠ -
ಲೊಡಿಯನ ಪಾದವ ಬಿಡದೆ ನೆರೆನಂಬೆ 
ಕೆಡುವದು ವಿಪತ್ತು ॥ 2 ॥

 ತ್ರಿವಿಡಿತಾಳ 

ಅಚ್ಚುತನ್ನ ನಾಮಾ ಅಚ್ಚು ಹೊಯಿದಂತೆ 
ಅನಂತನ ನಾಮಾ ಕೊನಿ ನಾಲಿಗಿಯಲ್ಲಿ 
ಪಚ್ಚಿಸಿಕೊಂಡು ಆ ಪರಮಾನಂದದಿಂದಾ
ಕೆಚ್ಚೆದಿಯ ಯಮಭಟರ ಠಾವಿಗೆ 
ಕಿಚ್ಚು ಬೀರುತಲಿ ವೈಷ್ಣವರ ಸುಮತವೆಂಬೊ
ರಚ್ಚಿಯಾ ಬಿಡದೆ ಬಲು ಬಿಂಕಾದಲ್ಲೀ 
ವಾಚಸ್ಪತಿ ವಿಜಯವಿಟ್ಠಲನ ಭಕುತಿಗೆ 
ಚೊಚ್ಚಲ ಮಗನಾಗಿ ಚರಿಸು ಜಾಣನಾಗಿ ॥ 3 ॥

 ಅಟ್ಟತಾಳ 

ಈತನು ಈತನು ಈ ತನು ಪುಟ್ಟಿಸಿದ 
ಈ ತನು ಈತಗೆ ಸಂತರ್ಪಣೆ ಮಾಡಿ 
ಈತನ ಪೂಜಿಪ ದೂತರ ಬೆರದಾಡು 
ಈ ತನು ವೊಳಗಿದ್ದ ವಿಷಯಾದಿಗಳ ಬಿಟ್ಟು 
ಈ ತನು ನೆಚ್ಚದೆ ಇಷ್ಟಾರ್ಥನೀವ ಪು - 
ರಾತನ ವಿಜಯವಿಟ್ಠಲನ ಪಾದದಲಿ 
ಈ ತನು ವಿಡದು ವರಗಳ ಬೇಡೂ ॥ 4 ॥

 ಆದಿತಾಳ 

ಹರಿಸರ್ವೋತ್ತುಮ ನಹುದೆಂದು 
ಅರಮರೆ ಇಲ್ಲದಲೆ ಬಿರುದನು ವೊಹಿಸಿ 
ಉರಗನ ತುಳುಕಿ ತೊರೆಯದೆ ಬಿಂಕವ 
ಧರೆಯೊಳಗೆ ಡಂಗುರವನು ಸಾರಿ 
ಪರಮೇಶ್ವರ ವಿಜಯವಿಟ್ಠಲನ್ನ 
ಶರಣರಿಗೆ ಭಯಗಳು ಇಲ್ಲೆಂದು ॥ 5 ॥

 ಜತೆ 

ಮಾತುಮಾತಿಗೆ ತಿರುವೆಂಗಳೇಶಾ ಯೆನ್ನು 
ಭೂತಕೃತು ನಾಮಾ ವಿಜಯವಿಟ್ಠಲನ ಪಾದವ ಕಾಣೋ ॥
**********


ಶ್ರೀನಿವಾಸ ಸುಳಾದಿ srinivasa suladi

ಧ್ರುವ ತಾಳ

ಮುಪ್ಪು ಇಲ್ಲದ ಅಪ್ಪ ತಿರುಪತಿ ತಿಮ್ಮಪ್ಪ |
ಮುಪ್ಪು ಇಲ್ಲದ ತಾಯಿ ಅಲುಮೇಲು ಮಂಗಾಯಿ |
ಮುಪ್ಪ್ಪು ಇಲ್ಲದ ಗುರು ಶ್ರೀಮದಾಚಾರ್ಯರು |
ಮುಪ್ಪು ಇಲ್ಲದ ಬಾಂಧವರು ಹರಿಭಕ್ತರು |
ಮುಪ್ಪು ಇಲ್ಲದ ಧನ ಹರಿನಾಮ ಸಾಧನ |
ಮುಪ್ಪು ಇಲ್ಲದ ಸದನ ದಿವ್ಯಾನಂತಾಸನ |
ಮುಪ್ಪೇ ಮುಪ್ಪೇ ಇಲ್ಲ ಎಮ್ಮ ಸೌಭಾಗ್ಯಕ್ಕೆ |
ಮುಪ್ಪೂರದೊಳಗೆ ಹರಿದಾಸರಿಗೆ ಎಣೆಯೆ |
ಮುಪ್ಪುರವಗೆಲಿದ ಅನಘ ವಿಜಯವಿಟ್ಠಲರೇಯ |
ಅಪ್ಪಾ ಭಕ್ತರ ಒಡನಾಡುವದು ತಪ್ಪಾ || ೧ ||

ಮಟ್ಟೆ ತಾಳ
ಉಡಲು ಉಣಲುಂಟು ಕೊಡಲು ಕೊಳಲುಂಟು |
ಅಡಗಾಣಿಪ ಭಾವಕಡಲಾಯಾಸವನು |
ಬಡದೆ ದಾಟಾಲಿಉಂಟು ಸಡಗರದಲಿ ದ – |
ಟ್ಟಡಿ ಹರಿನಾಮವ ಹಡಗವೆಂಬುದು ಕೈ – |
ವಿಡಿದು ಸುಖವನ್ನು ಪಡೆದು ವಿಜಯವಿಟ್ಠ – |
ಲೊಡೆಯನಪಾದವ ಬಿಡದೆ ನೆರೆನಂಬೇ ಕೆಡುವದು ವಿಪತ್ತು || ೨ ||

ತ್ರಿವಿಡ ತಾಳ
ಅಚ್ಚುತನ್ನ ನಾಮಾ ಅಚ್ಚು ಹೋಯಿದಂತೆ |
ಅನಂತನ ನಾಮಾ ಕೊನೆ ನಾಲಿಗೆಯಲ್ಲಿ |
ಪಚ್ಚಿಸಿಕೊಂಡು ಆ ಪರಮಾನಂದದಿಂದ |
ಕೆಚ್ಚೆದೆಯ ಯಮಭಟರ ಠಾವಿಗೆ |
ಕಿಚ್ಚುಬೀರುತಲಿ ವೈಷ್ಣವರ ಸುಮತವೆಂಬೋ |
ರಚ್ಚೆಯ ಬಿಡದೆ ಬಲು ಬಿಂಕಾದಲ್ಲೀ |
ವಾಚಸ್ಪತಿ ವಿಜಯವಿಟ್ಠಲನ ಭಕುತಿಗೆ |
ಚೊಚ್ಚಲಮಗನಾಗಿ ಚರಿಸು ಜಾಣನಾಗಿ || ೩ ||

ಅಟ್ಟೆ ತಾಳ
ಈತನು ಈತನು ಈ ತನು ಪುಟ್ಟಿಸಿದ |
ಈ ತನು ಈತಗೆ ಸಂತರ್ಪಣೆ ಮಾಡಿ |
ಈತನ ಪೂಜಿಪ ದೂತರ ಬೆರೆದಾಡು |
ಈ ತನುವಿನೊಳಗಿದ್ದ ವಿಷಯಾದಿಗಳ ಬಿಟ್ಟು |
ಈ ತನು ನೆಚ್ಚದೆ ಇಷ್ಟಾರ್ಥವೀವ ಪು – |
ರಾತನ ವಿಜಯವಿಟ್ಠಲನ ಪಾದದಲಿ |
ಈ ತನು ವಿಡಿದು ವರಗಳ ಬೇಡೋ || ೪ ||

ಆದಿ ತಾಳ
ಹರಿಸರ್ವೋತ್ತಮನಹುದೆಂದು |
ಅರಮರೆ ಇಲ್ಲದಲೆ ಬಿರುದನು ವಹಿಸಿ |
ಉರಗನ ತುಳುಕಿ ತೊರೆಯದೇ ಬಿಂಕವ |
ಧರೆಯೊಳಗೆ ಡಂಗುರವನು ಸಾರಿ |
ಪರಮೇಶ್ವರ ವಿಜಯವಿಟ್ಠಲನ್ನ |
ಶರಣರಿಗೆ ಭಯಗಳು ಇಲ್ಲೆಂದು || ೫ ||

ಜತೆ
ಮಾತುಮಾತಿಗೆ ತಿರುವೆಂಗಳೇಶ ಎನ್ನು |
ಭೂತಕೃತು ವಿಜಯವಿಟ್ಠಲನ ಪಾದವ ಕಾಣೋ || ೬ ||
**********

sri rama sulaadi ramayana
ಧ್ರುವತಾಳ
ರಾಜ ರಾಜ ರಮಣಿ ರಾಜಶೇಖರ ವಿನುತಾ
ರಾಜ ತೇಜೋನಿಧಿ ರಾಜಾಧೀಶಾ
ರಾಜ ಹಂಸ ನಯನ ರಾಜಶೇಖರ ವಿ
ರಾಜಿತ ಕೀರ್ತಿ ಗಜ ರಾಜವರದಾ
ರಾಜ ವದನಾ ರಿಪು ರಾಜಮಸ್ತಕ ಶೂಲಾ
ರಾಜ ರಾಜೋತ್ತಮ ರಾಜವಿನುತಾ
ರಜೀವದೊಳಗಿದ್ದ ರಾಜೀವನ ಪಾಲಿಸಿದ
ರಾಜ ಮಾರ್ತಾಂಡ ದ್ವಿಜರಾಜ ಗಮನಾ
ರಾಜ ರಾಜರು ನಿನ್ನ ರಾಜಿಸುವ ಚರಣ
ರಾಜೀವದಲ್ಲಿ ವಾಲಗ ಮಾಳ್ಪರೂ
ರಾಜ ರಾಜಾಗ್ರಗಣ್ಯ ರಾಜಾಭಿಷೇಕಕ್ಕೆ
ರಾಜ ನೀನಲ್ಲದೆ ರಾಜರುಂಟೇ
ರಾಜಗಂಭೀರ ಅಪರಾಜಿತನಾಮ ನಮ್ಮ
ವಿಜಯ ವಿಠ್ಠಲ ರಂಗರಾಜ
ರಾಜ ಸಮುದ್ರರಾಜ ಶಯನನೇ ||1||

ಮಟ್ಟತಾಳ
ದಶಶಿರನೆಂಬುವನು ಅಸಮ ವೀರನಾಗಿ
ಬಿಸಿನಿಧಿ ಮಧ್ಯದಲ್ಲಿ ತ್ರಿದಶರ ಶೆರೆ ಇಡಲು
ದಶದಿಕ್ಕಿನ ಒಳಗೆ ಪೆಸರಾಗಿ ಪಸರಿಸುತ
ಪಶುಪನ ವರದಿಂದ ಕುಸಿಯದಲಿರುತಿರೇ
ಅಸುರನ ಉಪಹತಿಗೆ ವಸುಧಿಭಾರವಾಗೆ
ಬಿಸಿಜಭವ ಸುಮನಸರೆಲ್ಲರು ಪೋಗಿ
ಬಿಸಿಜದಳನಯನ ವಸುಧಿ ಸಂರಕ್ಷಕನೇ
ಅಸುರರ ಶಿಕ್ಷಕನೆ ಅಸಮಯ ಬಂದಿದೆ
ದೆಶೆಗೆಟ್ಟವರ ಪಾಲಿಸಬೇಕೆಂದೆನುತ
ಶಿಶುಗಳೊದರಿದಂತೆ ಎಸದು ಮೊರೆಯಿಡಲು
ವೃಷಭನಾಮಕದೇವ ವಿಜಯ ವಿಠ್ಠಲರೇಯನ
ಬಿಸಿಜ ಚರಣದಲ್ಲಿ ಹಸನಾಗಿ ಬಿನ್ನೈಸೇ ||2||

ರೂಪಕ ತಾಳ
ಮೂರು ಗುಣರಹಿತ ಮೂರುತಿ ಈತನು
ಕಾರುಣ್ಯವನ್ನು ಇನ್ನಾರು ಬಲ್ಲವರಿಲ್ಲ
ವಾರಿಜಾದ್ಯರ ಸಾರೆಗರದು ಶ
ರೀರವ ತಡವರಿಸಿ ತಾರತಮ್ಯದಿಂದ
ಭಾರ ಎನ್ನದು ಎಂದು ಭರವಸವ ಇತ್ತು
ಕ್ರೂರನಿಂದಲಿ ಬಂದ ಭಾರ ಇಳಿಸುವೆನೆಂದು
ಧಾರುಣಿಯೊಳಗಿತ್ತ ಈರೈದುರಥದವನು
ನಾರಾಯಣನು ಕುಮಾರನಾಗಲೆಂದೂ
ಆರಾಧನೆಯ ಮಾಡೆ ಶ್ರೀರಾಮನೆಂದೆಂಬವ
ತಾರವನ್ನು ಧರಿಸಿದ ರಮಾರಮಣನು
ಚಾರುಗುಣ ನಿಲಯ ವಿಜಯ ವಿಠ್ಠಲರೇಯಾ
ಸಾರಿದವರ ಮನೋಹಾರವ ತೋರುತ್ತಾ ||3||

ಝಂಪಿತಾಳ
ಮುನಿಪ ಕೌಶಿಕನ ಯಾಗವಕಾಯಿದು ತಾಟಿಕಿ
ದನುಜಿಯ ಮುರಿದು ನಿಜಾನುಜನ ಕೂಡ
ಜನಕನಾ ಪುರಕೆ ಗಮನವಾಗಿ ಪೋಗುತ್ತ
ಮುನಿಯಾಂಗನೆಯ ಶಾಪವನ್ನೆ ತೊಡದು
ಅನಲಾಕ್ಷನ ಧನುಸು ಮುರಿದು ಇಕ್ಕಡಿಮಾಡಿ
ಜನಕರಾಯನ ನಂದಿನಿಯ ನೆರದೂ
ಅನುವರದೊಳಗೆ ಭೃಗುತನುಜನ್ನ ಪೊಕ್ಕಳಲಿ
ದನುಜ ಸೇರಿರಲು ಬಾಣದಲಿ ಸದದೂ
ತನಗೆ ತಾನೇ ಲೀಲಿ ತೋರಿದ ಮಹದೈವವಾ
ತನೆ ಕಾಣೋ ಗೋಹಿತ ವಿಜಯ ವಿಠ್ಠಲರಾಮ ||4||

ತ್ರಿವಿಡಿತಾಳ
ಪಿತನ ಮಾತನು ಮನ್ನಿಸಿ ಸತಿಸಹಿತ ಭಾಗೀ
ರಥಿಯ ದಾಟುತಲಿ ಭಕುತಗೊಲಿದೂ
ಅತಿಶಯವಾದ ಪರ್ವತ ಚಿತ್ರಕೂಟದಲಿ
ಯತಿಗಳಿಂದಲಿ ಪೂಜಿತನಾಗುತ
ಮತಿಹೀನನಾಗಿ ಬಾಳುತಲಿದ್ದ ಕಾಕನ್ನ
ಗತಲೋಚನನ ಮಾಡಿ ಕ್ಷಿತಿಗಟ್ಟಿದೇ
ಹಿತವಾಗಿ ಬಂದ ಭರತಗೆ ಹಾವುಗೆ ಕೊಟ್ಟು
ವ್ರತವಧರಿಸಿದ ಉನ್ನತ ಮಹಿಮಾ
ಪಥಚಾರನಾಗಿ ಶೋಭಿಸುತ ದಂಡಕಾರಣ್ಯ
ಯತಿಪುಂಗವ ಕುಂಬಸುತನ ಕಂಡೂ
ಪ್ರತಿರಥ ನಾಮಾ ವಿಜಯ ವಿಠ್ಠಲ ರಘು
ಪತಿ ನೀನೆ ಉತ್ಪತ್ತಿ ಸ್ಥಿತಿ ಲಯಕರ್ತನೇ||5||

ಅಟ್ಟತಾಳ
ಮೋಸದ ಅಸುರಿಯ ಮೂಗುಕೊಯ್ದು ಖರ
ದೂಷಣಾದ್ಯರನ್ನು ಕೊಂದು ಗೌತುಮೆಯಲ್ಲಿ
ವಾಸವಾಗಿದ್ದ ಮಾರೀಚ ಮಾಯಾ ಮೃಗ
ವೇಷವಾಗಿ ಬರೆ ಕೊಂದು ಮಾರ್ಗದಲ್ಲಿ
ಘಾಸಿಯಾಗಿದ್ದ ವಿಹಂಗನ ಮನ್ನಿಸಿ
ದ್ವೇಷಿ ಕಬಂಧನ ಕಡಿದು ಶಬರಿಯ
ಮೀಸಲ ಭಕುತಿಗೆ ಹಣ್ಣುಸವಿದು ಸಂ
ತೋಷದಿಂದಲಿ ತುಂಗಾ ತೀರದಲ್ಲಿ ಪವ
ನಾ ಸೂನು ಎರೆಗಲು ಎತ್ತಿ ಮಾತಾಡಿ ದಿ
ನೇಶ ತನುಜಗೆ ಅಭಯವನ್ನು ಇತ್ತು
ಬೀಸಿಡಗದೆ ಕಾಲಲಿ ದುಂಧುಮಾರನ್ನ
ನೀ ಸವರಿದೆ ಏಳುತಾಳುವ ಒಮ್ಮೆಲೆ
ಸಾಸಿರನಾಮವೇ ವಿಜಯ ವಿಠ್ಠಲ ನರ
ವೇಷವ ಧರಿಸಿದ ವೈಕುಂಠವಾಸ ||6||

ಆದಿತಾಳ
ಭೀತಿ ಶೂನ್ಯನಾದ ಪುರಹೂತ ಮಗನ ಕೊಂದು ರವಿ
ಜಾತಗೆ ಪಟ್ಟವಗಟ್ಟಿ ಪ್ರೀತಿದೂತ ವಾಯುಜನ್ನ
ಸೀತೆ ಬಳಿಗೆ ಕಳುಹೇ ಪೋಗಿ
ಮಾತು ತಂದು ಪೇಳಿದಾತಗೆ ವರವನಿತ್ತು
ಕೋತಿ ಕರಡಿ ಸಹಿತವಾಗಿ ಸೇತುವೆ ಬಿಗಿಸಿ ಬಂದ
ನೀತ ವಿಭೀಷಣನ ಕೂಡ ಕಾತುರದಿಂದಲಿ ದಾಟಿ
ಧೂತ ರಾವಣಾದಿಗಳ ಯಾತನೆಗೆ ಬೀಳ್ಕೋಡಿಸಿ
ಪ್ರೀತಿಯಾಸ್ಪದನಾದತಿದಾತ ವಿಭೀಷಣಗೆ ಪ್ರ
ದ್ಯೋತ ಶಶಿ ಉಳ್ಳನಕ ಭೂತಳದೊಳಗೆ ಲಂಕೆ
ಯ ತಪ್ಪದಂತೆ ಆಳೆಂದಾತಗೆ ಪಟ್ಟವಗಟ್ಟಿ
ಸೀತೆ ಸಹಿತ ಬಂದು ಸಾಕೇತಪುರದಲ್ಲಿ ನಿಂದು
ಧಾತಾದಿಗಳ ಮನಕೆ ಪ್ರೀತಿ ಬಡಿಸಿ ಸೆರೆಯ ಬಿಡಿಸಿ
ಸೀತೆಯರಸ ವಿಜಯ ವಿಠ್ಠಲಭೂತ
ನಾಥನಿಂದ ಬಂದ ಮಾತು ಮನ್ನಿಸಿದ ಮಹಾತ್ಮಾ ||7||

ಜತೆ
ಸಾರ್ವಭೌಮನೆ ರಾಮ ದುರುಳ ದೈತ್ಯವಿರಾಮಾ
ಸರ್ವಯೋಗಿ ವಿನಿಶ್ರುತಾ ವಿಜಯ ವಿಠ್ಠಲ ||8||
*********