similar by vadirajaru
ಕಾಂಭೋಜ ಆದಿ ತಾಳ
ಆದಿ ವರಾಹನ ಚೆಲುವ ಪಾದವ ಕಾಣದೆ ಕಣ್ಣು
ವೇದನೆಯಾಗಿವಳ ಬಾಧಿಸುತಲಿದೆ ಎನ್ನ ||ಪ||
ಆದಿ ವರಾಹನ ಚೆಲುವ ಪಾದವ ಕಾಣದೆ ಕಣ್ಣು
ವೇದನೆಯಾಗಿವಳ ಬಾಧಿಸುತಲಿದೆ ಎನ್ನ ||ಪ||
ಈ ಧರಣಿ ಮುಳುಗೆ ಶುಕ್ಲ ನದಿಯ ದಕ್ಷಿಣದಲ್ಲಿದ್ದ
ಮೇದಿನಿ ಕೋರೆದಾಡೆಲೆತ್ತಿದಂಥ ||ಅ||
ಅಷ್ತ ಸ್ವಯಂವ್ಯಕ್ತ ಶ್ರೀಮುಷ್ಟ ಅಷ್ಟಾಕ್ಷರ ಮಂತ್ರವನ್ನು
ಇಷ್ಟು ಮಾತ್ರ ತಿಳಿದವರೆಷ್ಟು ಪುಣ್ಯ ಮಾಡಿದರೊ
ನಷ್ಟ ಬಾರದಂತೆ ಮನದಿಷ್ಟರ್ಥವ ಕೊಟ್ಟು ಕಾಯ್ವ ನಮ್ಮ
ಅಷ್ಟ ದಿಕ್ಕಿಗೆ ಒಡೆಯವನೊಬ್ಬ ||
ನಿತ್ಯ ಪುಷ್ಕರಿಣಿ ಸುತ್ತು ಹದಿನಾರು ತೀರ್ಥ
ನಿತ್ಯ ಸೇವೆಯಾಗಿರುವ ಪ್ರತ್ಯೇಕ ಅಶ್ವಥವಿರಲು
ಅರ್ಥಿ ನೋಡ ಬಂದಾರೆಂದು ಶ್ರುತ್ಯರ್ಥ ಕೊಂಡಾಡುತಿರೆ
ಅತ್ಯಂತ ಅಕ್ಕರೆಯಿಂದಲಿ ||
ಸತ್ಯ ಲೋಕದ ಬ್ರಹ್ಮನು ಭೃತ್ಯರನ್ನು ಕೂಡಿಕೊಂಡು
ವಿಸ್ತಾರದಿ ನಿಂತು ಕೈಯನೆತ್ತಿ ಮುಗಿವರೆಂತೆಂದು
ರತ್ನದ ಭೂಷಣಗಳು ಮುತ್ತಿನೋಲೆ ಮೂಗುತಿಯು
ಮುತ್ತೈದೆ ಅಂಬುಜವಲ್ಲಿಗೆ ಕೊಟ್ಟ ||
ಅಲ್ಲಲ್ಲಿ ಪುಣ್ಯ ತೀರ್ಥವು ಅಲ್ಲಲ್ಲಿ ಸ್ನಾನ ದಾನವು
ಅಲ್ಲಲ್ಲಿ ಜಪ ತಪವು ಅಲ್ಲಲ್ಲಿ ದೇವತಾರ್ಚನೆ
ಅಲ್ಲಲ್ಲಿ ಗಂಧರ್ವರ ಗಾನ ಅಲ್ಲಲ್ಲಿ ಮಧ್ವಮತಸ್ತೋಮ
ಅಲ್ಲಲ್ಲಿ ನಂದನವನ ಅಲ್ಲಲ್ಲಿ ಮಲ್ಲಿಗೆ ಹೂವಿನ ವನ
ಅಲ್ಲಿ ವರಾಹ ಅಂಬುಜವಲ್ಲಿಯು ಝಲ್ಲಿಕಾ ವನದಲ್ಲಿದ್ದರು ||
ದಂಡಕಾರಣ್ಯಭೂಮಿಲಿ ತೊಂಡಮಂಡಲದೊಳಗೆ
ಹಿಂಡು ಹಿಂಡು ಅಟ್ಟಡಿಂದ ದಂಡಕಾಸುರಪಡೆಯ
ಖಂಡಿಸಿ ದೈತ್ಯರನೆಲ್ಲ ತುಂಡು ತುಂಡು ಮಾಡಿದನು-
ದ್ದಂಡ ಶ್ವೇತವರಾಹನು ||
ಕಂಡು ಭಜಿಸಿರೊ ಗಜಗಂಡು ಸುಯಜ್ಞಮೂರುತಿ
ಕೊಂಡಾಡಿದ ಭಜಕರ ಮಂಡೆ ಪೂ ಬಾಡದೆಂದೆಂದು
ಪುಂಡರೀಕ ಸ್ವಾಮಿ ತಾನು ಉಂಡು ಮಿಕ್ಕ ಪ್ರಸಾದವ ಪ್ರ-
ಚಂಡ ಹನುಮಂತಗೆ ಕೊಟ್ಟ ||
ಭಾರವು ಹಾರುವೊ ವೇಳೆ ಗರುಡೋತ್ತಮನು ಬಂದು ಬೇಗ
ಗುರುಮಂತ್ರ ಉಪದೇಶ ಹರಿಸ್ಮರಣೆಯಿಂದಲಿ
ನರಬಾಧೆಗಳು ಬಾರದೆಂದು ಶ್ರೀ-
ಹರಿಪಾದ ತಿರುಪತಿ ಉತ್ತರ ಶೇಷವರದ
ಪುರಂದರ ವಿಠಲನ ಚರಣ ಕಮಲದಲಿ ಓಲಾಡಿದಿಯೆಂದು ||
***
pallavi
Adi varAhana celuva pAdava kANade kaNNu vEdaneyAgi vaLa bAdhisutalide enna
anupallavi
I dharaNi muLuge shukla nadiya dakSiNadallidda mEdini kOredADelettidantha
caraNam 1
aSta svayamvyakta shrImuSNa aSTAkSara mantravanu iSTu mAtra tiLidavareSTu puNya
mADidaro naSTa bAradante manadiSTArttava koTTu kAiva namma aSTa dikkige oDeyavanobba
caraNam 2
nitya puSkariNi suttu hadinAru tIrtta nitya sEveyAgiruva pratyEka ashvattaviralu
arthi nODa bandArendu shrtyartha koNDADutire atyanta akkareyindali
caraNam 3
satya lOkada brahmanu bhrutyaranu kUDikoNDu vistAradi nintu kaiyanetti mugivarendu
ratnada bhUSaNagaLu muttinOle mUkutiyu muttaide ambujavallige koTTa
caraNam 4
allalli puNya tIrttavu allalli snAna dAnavu allalli japa tapavu allalli dEvatArcane allalli gandharva gAna allalli
madhvamata stOma allalli nandanavana allalli mallige hUvina vana alli varAha ambujavalliyu jhallikA vanadalliddaru
caraNam 5
daNDakAraNya bhUmili toNDamaNDaladoLage hiNDu hiNDu aTTi banda daNDakAsura
paDeya khaNDisi daityaranella tuNDu tuNDu mADidanu daNDa shvEta varAhanu
caraNam 6
kaNDu bhajisiro gajagaNDu su-yagjnya mUruti koNDADida bhajakara maNDe pU
bADadendendu puNDarIka svAmi tAnu unDu mikka prasAdava pracaNDa hanumantage koTTa
caraNam 7
bhAravu hAruvo vELe garuDOttamanu bandu bEga guru mantra upadEsha hari smaraNeyindali narabAdhegaLu
bAradendu shrI haripAda tirupati uttara shESavarada purandara viTTalana caraNa kamaladali OlADideyendu
***