Showing posts with label ಸತ್ಯಂಬೋಧರ ಸ್ಮರಣೆ ನಿತ್ಯಮಾಡು bhupati vittala satyabodha teertha stutih. Show all posts
Showing posts with label ಸತ್ಯಂಬೋಧರ ಸ್ಮರಣೆ ನಿತ್ಯಮಾಡು bhupati vittala satyabodha teertha stutih. Show all posts

Thursday, 26 December 2019

ಸತ್ಯಂಬೋಧರ ಸ್ಮರಣೆ ನಿತ್ಯಮಾಡು ankita bhupati vittala satyabodha teertha stutih

#ಸವಣೂರು #ತಪೋನಿಧಿ #ಶ್ರೀ #ಸತ್ಯಬೋಧತೀರ್ಥ

ಸತ್ಯಂಬೋಧರ ಸ್ಮರಣೆ ನಿತ್ಯಮಾಡು ಅತ್ಯಂತ ಕರುಣಾಳು ಮಾನವಂತ ||ಪ

ಸತ್ಯಬೋಧರ ಸ್ಮರಣೆ ನಿತ್ಯದಲಿ ಮಾಡಿದರೆ' ವಿಷ್ಣು ಸರ್ವೋತ್ತಮದ ಜ್ಞಾನ ಪ್ರಾಪ್ತಿಕಷ್ಟಗಳ ಪರಿಹರಿಸಿ ಇಷ್ಟಾರ್ಥಗಳ ಕೊಟ್ಟುಭಕ್ತಿ ವೈರಾಗ್ಯ ಭಾಗ್ಯವನು ಕೊಡುವಾ 1

ಸತ್ಯಪ್ರಿಯತೀರ್ಥರ ಕರಕಮಲದಿಂ ಜನಿಸಿಉತ್ತರಾದಿಮಠದ ವೈಭವವ ಬೆಳಿಸಿ ವಿಷ್ಣು ಸರ್ವೋತ್ತಮತ್ವದ ತತ್ವಜಯಭೇರಿಎತ್ತ ನೋಡಿದರತ್ತ ಸತ್ಯಬೋಧರಕೀರ್ತಿ 2

ಪಾಪಿಷ್ಠರಿಂದ ಆಪತ್ತು ಜೀವಕೆಬಂತುಸಂಚಾರ ಕೆಲಕಾಲ ಸಂಕಟಮಯವಾಯ್ತುಶಾಪಾನುಗ್ರಹಶಕ್ತರಾದ ಶ್ರೀಪಾದರುಭೂಪತಿ'ಠ್ಠಲನ ಅಪರೋಕ್ಷ ಪಡೆದವರು 3
***********