Showing posts with label ಭೀಮಸೇನನೆ ಪೂರ್ಣಕಾಮನೆ vijaya vittala suladi ಭೀಮಾವತಾರ ಸುಳಾದಿ BHEEMASENANE PURNAKAAMANE BHEEMAVATAARA SULADI. Show all posts
Showing posts with label ಭೀಮಸೇನನೆ ಪೂರ್ಣಕಾಮನೆ vijaya vittala suladi ಭೀಮಾವತಾರ ಸುಳಾದಿ BHEEMASENANE PURNAKAAMANE BHEEMAVATAARA SULADI. Show all posts

Monday 9 December 2019

ಭೀಮಸೇನನೆ ಪೂರ್ಣಕಾಮನೆ vijaya vittala suladi ಭೀಮಾವತಾರ ಸುಳಾದಿ BHEEMASENANE PURNAKAAMANE BHEEMAVATAARA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ 

 ಭೀಮಾವತಾರ ಸುಳಾದಿ 

 ರಾಗ ನಾಟಿ 

 ಧ್ರುವತಾಳ 

ಭೀಮಸೇನನೆ ಪೂರ್ಣಕಾಮನೆ ಸುರಸಾರ್ವ -
ಭೌಮನೆ ಸತತ ಭೂಮಿ ಭಾರವ ಹರಣಾ
ಸೀಮಾರಹಿತ ಗುಣ ಮಹೋದಧಿಯೇ ನಿ -
ಷ್ಕಾಮ ಫಲವನೀವ ಭಾವಿ ಬೊಮ್ಮ
ಭೀಮಾವತಾರ ಸ್ಮೇರಾನನ 
ರಾಮ ರಾಜೇಶ್ವರ ರಣರಂಗ ಧೀರ
ಕೋಮಲ ಕಾಯ ಮೂಲಾವತಾರಾ ಭಿನ್ನ
ಸೋಮ ಕುಲೋದುಭವ ಪಾಂಡು ಕುವರ
ರೋಮ ರೋಮಾನಂತ ಸಿಂಹ ಸತ್ವಾಧಿಕ ಉ -
ತ್ತಮಾಂಗ ಮರುತ ಮರಕತ ಮಕುಟಧರ
ಕಾಮಿನಿಗೆ ಸೌಗಂಧಿಕ ಕುಸುಮವನಿತ್ತ
ಸಾಮ ವಿಖ್ಯಾತ ರಿಪು ಸಾಮಜ ಬಲವ -
ಯೋಮಕ್ಕೆ ತೆಗಿದಿಟ್ಟ ಎಲ್ಲರೊಳಗೆ ಧಿಟ್ಟ
ಶ್ರೀಮರುತನೆ ದ್ವಾಪರದ ಚರಿತ
ತಾಮಸ ಖಳರ ಗದೆಯಿಂದಪ್ಪಳಿಸಿ
ತಾಮಸ ಲೋಕಕ್ಕೆ ಕೆಡಹುವ ವೀರ್ಯ
ಕುಮತಿ ಕೀಚಕ ಕಿರ್ಮೀರ ಬಕ ಹಿಡಿಂ -
ಬ ಮಣಿಮಂತ ಮಾಗಧ ವೈರಿ
ಮಾಮನೋವಲ್ಲಭ ವಿಜಯವಿಟ್ಠಲ ಕೃಷ್ಣನ
ನಾಮವ ನೆನಿಪ ಪೂರ್ಣಾನಂದ ಮಹಿಮಾ ॥ 1 ॥ 

 ಮಟ್ಟತಾಳ 

ಗುರುವೆ ಮೂಲ ಗುರುವೆ, ಗುರುವೆ ಪರಮ ಗುರುವೆ
ಗುರುವೆ ಜಗದ್ಗುರುವೆ, ಗುರು ವಿಶ್ವ ಗುರುವೆ
ಗುರುವೆ ನಿತ್ಯ ಗುರುವೆ ಗುರುವೆ ಲಕ್ಷಣ ಗುರುವೆ
ಗುರುವೆ ಶಾಂತ ಗುರುವೆ ಗುರುವೆ ಎನ್ನ ಗುರುವೆ
ಗುರುಗಳಿಗೆ ಗುರುವೆ ಗುರುರಾಜವರ್ಯಾ
ಗುರುಕುಲೋತ್ತಂಗ ಗುರುಶಿರೋಮಣಿ
ಗುರುತಾದಾ ನಮ್ಮ ವಿಜಯವಿಟ್ಠಲನ್ನ 
ಗುರುಲಘು ಮೂರ್ತಿಯು ಗುರು ಎಣಿಪ ಗುರುವೆ ॥ 2 ॥ 

 ತ್ರಿವಿಡಿತಾಳ 

ವಿಷದ ಲಡ್ಡಿಗಿ ಸವಿದು ದಕ್ಕಿಸಿಕೊಂಡ ಮಹಬಲ ಎನ್ನ
ವಶವೇ ಪೊಗಳಲು ನಿನ್ನ ಅಸಮ ಶೌರ್ಯ
ವಸುಧಿಯೊಳಗೆ ನಿನ್ನ ಪೆಸರೇ ಅನ್ಯರಿಗೆ ಕ -
ರ್ಕಶವಾಗಿದೆ ನೋಡು ಅಸುಗ ದೈವಾ
ಕುಶಲ ಮತಿಯಲಿ ಅರ್ಚಿಸಿದ ಜನಕೆ ಪೀ -
ಯೂಷ ಪಾನಕ್ಕಧಿಕ ಸಂತಸವಾಗೋದು
ಬೆಸಸ ಬಲ್ಲೆನೆ ರಕ್ಕಸರೆದೆ ಶೂಲನೇ
ಹಸನಾಗಿ ಎನ್ನ ಪಾಲಿಸಬೇಕೊ ಜೀವೇಶ
ಅಸುರಧ್ವಂಸಿ ನಮ್ಮ ವಿಜಯವಿಟ್ಠಲನಂಘ್ರಿ 
ಎಸಳು ಬಿಡದೆ ನೆನೆಸುವ ವೃಕೋದರಾ ॥ 3 ॥ 

 ಅಟ್ಟತಾಳ 

ರೋಷದಿಂದಲಿ ದುಃಶ್ಶಾಸನ್ನ ಸಂಗಡ
ನೀ ಸಮರದಿ ವೀರ ವೇಷವ ಧರಿಸಿ ದು -
ರ್ಮೋಷದ ಗುಣ ಕುಲನಾಶಿಕ ಕರ್ಮಿಯ
ಬೀಸಿ ಗದೆಯಿಂದ ಲೇಸಾಗಿ ಹೊಡೆದಪ್ಪ -
ಳೀಸಿ ನೆಲಕೆ ಬೀಳಲೀಸಿದ ಈಗವನ ಭಂ -
ಗೀಸಿ ಮುಂದುರವಣಿಸಿ ಅಂದಿನ ಮಾತೆ -
ಣೀಸಿ ಕೋಪಗಡಿ ಸಂತೋಷದ ಕೇಳಿಕೆ
ಈ ಸಮಸ್ತರು ಒಪ್ಪಿಸಿ ಕೊಟ್ಟರು ನಿನ್ನಾ -
ಬೀಸರಕ್ಕೆ ಒಬ್ಬ ಆಶೆಯಾಗುವನಲ್ಲ
ದೇಶವೆಲ್ಲಿದೊ ರಾಣಿವಾಸವೆಲ್ಲಿದೊ ಬಹು
ಕೋಶವೆಲ್ಲಿದೊ ವಾದ್ಯಘೋಷವೆಲ್ಲಿದೊ ಇಂದು
ದ್ವೇಷಿಗ ಮಾರಿಗೆ ಗ್ರಾಸವಾಗು ಪೋಗು
ಈ ಸಮಯದಲ್ಲಿ ಬಿಡಿಸುವರಾರೆಂತೊ
ವಾಸುದೇವ ಕೃಷ್ಣ ವಿಜಯವಿಟ್ಠಲನಂಘ್ರಿ 
ದಾಸನು ಅವನ ಆಭಾಸ ಮಾಡುತಲಿಪ್ಪ ॥ 4 ॥ 

 ಆದಿತಾಳ 

ಪದತಳದಿಂದ ವರಿಸಿ ಕದನದಲ್ಲಿ ವೈರಿಯ
ಬದಿ ಬಗಲನು ತಿವಿದು ವದನದೊಳಗೆ ಉಗುಳಿ
ರದನವ ಮುರಿದು ಕುಟ್ಟಿ ಮೇಲೊದದು ಅಟ್ಟಹಾ -
ಸದಲಿ ಎದಿಯ ಮೇಲೆ ಕುಣಿದು ಉದರವನ್ನೇ 
ಬಗೆದು ಮಿದಡು ಕರಳು ತೆಗೆದು ಭೂಮಿಗೆ ಈಡಾ -
ಡಿದನು ಅರ್ಥಿಯಲ್ಲಿ ಸುದತೆ ನೋಡುತಿರೆ
ಅದುಭೂತ ಚರಿತ ಅವನ 
ರುಧಿರವ ಪಿಡಿದು ಸುರಿದಂತೆ ಸರ್ವರು ನೋಡಲು 
ಸದಮಲ ದೇವಿಯ ಹೃದಯ ತಾಪವೆ ಕಳೆದು 
ಪದೋಪದಿಗಾನಂದ ಉದಧಿಯೊಳಗೆ ಸೂಸೆ 
ಎದುರಾರೀತಗೆ ತ್ರಿದಶರೊಳಗೆ ಇಲ್ಲ 
ಕದನ ಮಧ್ಯದಲ್ಲಿ ಮೌನದಲ್ಲಿ ಎಲ್ಲರೂ ಇರೆ 
ಹೃದಯ ನಿರ್ಮಲ ನಮ್ಮ ವಿಜಯವಿಟ್ಠಲ ಗರ್ಪಿ -
ಸಿದ ತನ್ನ ಸಾಹಸವ ಮುದದಿಂದ ನಲಿಯುತಾ ॥ 5 ॥ 

 ಜತೆ 

ಅರಿ ಭಯಂಕರ ಭೀಮ ವಿಜಯವಿಟ್ಠಲ 
ನರಹರಿ ಮನಮೆಚ್ಚಿ ನಡೆದಾ ಭೀಮಾವತಾರಾ ॥ 

 ಲಘುಟಿಪ್ಪಣಿ : 
 ಹರಿದಾಸರತ್ನಂ ಶ್ರೀಗೋಪಾಲದಾಸರು 

 ಧ್ರುವತಾಳದ ನುಡಿ : 

 ಭೀಮಸೇನನೆ = ಯಾವಾತನಲ್ಲಿ ಋಗಾದಿ ಪ್ರಮಾಣಗಳು ಪೂರ್ಣಗಳಾಗಿದ್ದಾವೋ ಆತನು ಭೀಮನೆಂದು ಹೇಳಲ್ಪಟ್ಟಿದ್ದಾನೆ. ಸರ್ವನಿಯಾಮಕನಾದ ವಿಷ್ಣುವಿನಿಂದ ಸಹಿತನಾದ್ದರಿಂದ ' ಸೇನ ' - ಒಟ್ಟಾರೆ ಹೀಗೆ ' ಭೀಮಸೇನ ' ಶಬ್ದಾರ್ಥ (ತಾ.ನಿ - 12 - 54)
 ರಾಮ = ಮನೋಹರ ;
 ಮೂಲಾವತಾರಭಿನ್ನ = ಮೂಲರೂಪ ಹಾಗೂ ಅವತಾರ ರೂಪಗಳಲ್ಲಿ ಭೇದವಿಲ್ಲದವ ;
 ಉತ್ತಮಾಂಗ = ಪ್ರತಿ ಅವಯವಗಳಲ್ಲೂ ಸಲ್ಲಕ್ಷಣ ವಿಶಿಷ್ಟ ;
 ರಿಪುಸಾಮಜ ಬಲವ = ಶತ್ರುಗಳಾದ ಕೌರವರ ಆನೆಗಳ ಸಮೂಹಗಳನ್ನು ; 

 ಮಟ್ಟತಾಳದ ನುಡಿ : 

 ತಾಮಸ ಲೋಕಕ್ಕೆ = ಕಗ್ಗತ್ತಲೆಯಿಂದ ತುಂಬಿದ ಲೋಕವಾದ ಅಂಧಃತಮಸ್ಸಿಗೆ ;
 ಗುರು - ಲಘು ಮೂರ್ತಿಯ = ಮಹತ್ತು ಹಾಗೂ ಅಣುರುಪಗಳನ್ನು ;
 ಗುರು ಎಣಿಪ = ವಿಶೇಷವಾಗಿ ಚಿಂತಿಸುವ ; 

 ತ್ರಿವಿಡಿತಾಳದ ನುಡಿ : 

 ಅಸುಗ = ಜೀವಾಂತರ್ಯಾಮಿ ;
 ಎಸಳು = ರೇಖೋಪರೇಖೆ ವಿಭಾಗಗಳನ್ನು ; 

 ಅಟ್ಟತಾಳದ ನುಡಿ : 

 ದುರ್ಮೋಷ ಗುಣ = ಸಹಿಸಿಕೊಳ್ಳಲು ಅಶಕ್ಯವಾದ ಗುಣ ;
 ಭಂಗಿಸಿ = ಸೋಲಿಸಿ ;
 ಮುಂದುರವಣಿಸಿ = ನಿಷ್ಠುರವಾಗಿ ಬೈದು ;
 ಕೋಪಗಡಿ = ಕೋಪದ ಎಲ್ಲೆ ;
 ಬೀಸರಕ್ಕೆ = ನಾಶಕ್ಕೆ ;
 ಆಸೆ = ದಿಕ್ಕು , ಆಸರೆ , ನೆರವು ;
 ಆಭಾಸ = ಧಿಕ್ಕಾರ ; 

 ಆದಿತಾಳದ ನುಡಿ : 

 ರದನವ = ಹಲ್ಲನ್ನು ;
 ಮಿದಡು ಕರಳು = ಮೃದುವಾದ ಕರಳು ;
 ಅರ್ಥಿಯಲಿ = ಪ್ರೀತಿಯಲಿ ;
 ಸುದತೆ = ಸರ್ವ ಲಕ್ಷಣಭರಿತಳಾದ ದ್ರೌಪದೀದೇವಿ;
 ರುಧಿರವ = ರಕ್ತವನ್ನು ;
 ಸೂಸೆ = ಉಕ್ಕಿ ಹೊರಚೆಲ್ಲಲು ;


🙏ಶ್ರೀಕೃಷ್ಣಾರ್ಪಣಮಸ್ತು🙏
*******
ಶ್ರೀ ವಿಜಯದಾಸಾರ್ಯ ವಿರಚಿತ  ಭೀಮಾವತಾರ ಸುಳಾದಿ 

ರಾಗ ನಾಟ   ಧ್ರುವತಾಳ 

ಭೀಮಸೇನನೆ ಪೂರ್ಣಕಾಮನೆ ಸುರಸಾರ್ವ -
ಭೌಮನೆ ಸತತ ಭೂಮಿಭಾರವ ಹರಣಾ
ಸೀಮಾರಹಿತ ಗುಣ ಮಹೋದಧಿಯೇ ನಿ -
ಷ್ಕಾಮ ಫಲವನೀವ ಭಾವಿ ಬೊಮ್ಮ
ಭೀಮಾವತಾರ ಸ್ಮೇರಾನನ 
ರಾಮ ರಾಜೇಶ್ವರ ರಣರಂಗ ಧೀರ
ಕೋಮಲ ಕಾಯ ಮೂಲಾವತಾರ ಭಿನ್ನ
ಸೋಮ ಕುಲೋದುಭವ ಪಾಂಡು ಕುವರ
ರೋಮ ರೋಮಾನಂತ ಸಿಂಹ ಸತ್ವಧಿಕ ಉ -
ತ್ತಮಾಂಗ ಮರುತ ಮರಕತ ಮಕುಟಧರಾ
ಕಾಮಿನಿಗೆ ಸೌಗಂಧಿಕ ಕುಸುಮವನಿತ್ತ
ಸಾಮ ವಿಖ್ಯಾತರಿಪು ಸಾಮಜ ಬಲವ -
ಯೋಮಕ್ಕೆ ತೆಗಿದಿಟ್ಟ ಎಲ್ಲರೊಳಗೆ ಧಿಟ್ಟ
ಶ್ರೀ ಮರುತನ ದ್ವಾಪರದ ಚರಿತ
ತಾಮಸ ಖಳರ ಗದೆಯಿಂದಪ್ಪಳಿಸಿ
ತಾಮಸ ಲೋಕಕ್ಕೆ ಕೆಡಹುವ ವೀರ್ಯಾ
ಕುಮತಿ ಕೀಚಕ ಕಿರ್ಮೀರ ಬಕ ಹಿಡಿಂ -
ಬ ಮಣಿಯ ಮಾಗಧ ವೈರಿ
ಮಾಮನೋವಲ್ಲಭ ವಿಜಯವಿಠ್ಠಲ ಕೃಷ್ಣನ
ನಾಮವನೆನಿಪ ಪೂರ್ಣಾನಂದ ಮಹಿಮಾ ॥ 1 ॥

 ಮಟ್ಟತಾಳ 

ಗುರುವೆ ಮೂಲ ಗುರುವೆ, ಗುರುವೆ ಪರಮ ಗುರುವೆ
ಗುರುವೆ ಜಗದ್ಗುರುವೆ, ಗುರು ವಿಶ್ವ ಗುರುವೆ
ಗುರುವೆ ನಿತ್ಯ ಗುರುವೆ ಗುರುವೆ ಲಕ್ಷಣ ಗುರುವೆ
ಗುರುವೆ ಶಾಂತ ಗುರುವೆ ಗುರುವೆ ಎನ್ನ ಗುರುವೆ
ಗುರುಗಳಿಗೆ ಗುರುವೆ ಗುರುರಾಜವರ್ಯಾ
ಗುರುಕುಲೋತ್ತಂಗ ಗುರುಶಿರೋಮಣಿ
ಗುರುದಾತ ನಮ್ಮ ವಿಜಯವಿಠ್ಠಲನ್ನ 
ಗುರುಲಘು ಮೂರ್ತಿಯ ಗುರು ಎಣಿಪ ಗುರುವೇ ॥ 2 ॥

 ತ್ರಿವಿಡಿತಾಳ 

ವಿಷದ ಲಡ್ಡಿಗಿ ಸವಿದು ದಕ್ಕಿಸಿಕೊಂಡ ಮಹಬಲ ಎನ್ನ
ವಶವೇ ಪೊಗಳಲು ನಿನ್ನ ಅಸಮಶೌರ್ಯ
ವಸುಧಿಯೊಳಗೆ ನಿನ್ನ ಪೆಸರೇ ಅನ್ಯರಿಗೆ ಕ -
ರ್ಕಶವಾಗಿದೆ ನೋಡ ಅಸಂಗ ದೈವಾ
ಕುಶಲ ಮತಿಯಲಿ ಅರ್ಚಿಸಿದ ಜನಕೆ ಪೀ -
ಯುಷ ಪಾನವಧಿಕ ಸಂತಸವಾಗೋದು
ಬೆಸಸ ಬಲ್ಲೆನೆ ರಕ್ಕಸರೆದೆ ಶೂಲನೇ
ಹಸನಾಗಿ ಎನ್ನ ಪಾಲಿಪ ಬೇಕೋ ಜೀವೇಶ
ಅಸುರಧ್ವಂಸಿ ನಮ್ಮ ವಿಜಯವಿಠಲನಂಘ್ರಿ 
ಎಸಳು ಬಿಡದೆ ನೆನೆಯುವ ವೃಕೋದರಾ ॥ 3 ॥

 ಅಟ್ಟತಾಳ 

ರೋಷದಿಂದಲಿ ದುಃಶ್ಶಾಸನ್ನ ಸಂಗಡ
ನೀ ಸಮರದಿ ವೀರ ವೇಷವ ಧರಿಸಿ ದು -
ರ್ದೋಷ ಗುಣ ಕುಲನಾಶಿಕ ಕರ್ಮಿಯಾ
ಬೀಸಿ ಗದೆಯಿಂದ ಲೇಸಾಗಿ ಹೊಡೆದಪ್ಪ -
ಳೀಸಿ ನೆಲಕೆ ಬೀಳಲೀಸಿದ ಈಗವನ ಭಂ -
ಗಿಸಿ ಮುಂದುರವಣಿಸಿ ಅಂದಿನ ಮಾತೆ -
ಣಿಸಿ ಕೋಪಗಡಿ ಸಂತೋಷದ ಕೇಳಿಕೆ
ಈ ಸಮಸ್ತರು ಒಪ್ಪಿಸಿ ಕೊಟ್ಟರು ನಿನ್ನ
ಬೀಸರಕ್ಕೆ ಒಬ್ಬ ಆಶೆಯಾಗುವನಲ್ಲ
ದೇಶವೆಲ್ಲಿದೊ ರಾಣಿವಾಸವೆಲ್ಲಿದೊ ಬಹು
ಕೋಶವೆಲ್ಲಿದೊ ವಾದ್ಯಘೋಷವೆಲ್ಲಿದೊ ಇಂದು
ದ್ವೇಷಿಗ ಮಾರಿಗೆ ಗ್ರಾಸವಾಗು ಪೋಗು
ಈ ಸಮಯದಲ್ಲಿ ಬಿಡಿಸುವರಾರೆಂತೊ
ವಾಸುದೇವ ಕೃಷ್ಣ ವಿಜಯವಿಠ್ಠಲನಂಘ್ರಿ 
ದಾಸನು ಅವನ ಆಭಾಸ ಮಾಡುತಲಿಪ್ಪ ॥ 4 ॥

 ಆದಿತಾಳ 

ಪದತಳದಿಂದ ಒರೆಸಿ ಕದನದಲ್ಲಿ ವೈರಿಯ
ಬದಿ ಬಗಲನು ತಿವಿದು ವದನದೊಳಗೆ ಉಗಳಿ
ರದನವ ಮುರಿದು ಕುಟ್ಟಿ ಮ್ಯಾಲೊದದು ಅಟ್ಟಹಾಸದಲಿ
ಎದಿಯ ಮೇಲೆ ಕುಣಿದು ಉದರವನ್ನೇ ಬಗೆದು
ಮಿದಡು ಕರಳು ತೆಗೆದು ಭೂಮಿಗೆ ಈಡಾ -
ಡಿದನು ಅರ್ಥಿಯಲ್ಲಿ ಸುದತೆ ನೋಡುತಿರೆ
ಅದುಭುತ ಚರಿತ ಅವನ ರುಧಿರವ ಪಿಡಿದು ಸು -
ರಿದ ಸರ್ವರು ನೋಡಲು ಸದಮಲ ದೇವಿಯ
ಹೃದಯ ತಾಪವೆ ಕಳೆದು ಪದೋಪದಿಗಾನಂದ
ಉದಧಿಯೊಳಗೆ ಸೂಸೆ ಎದಿರಾರೀತಗೆ
ತ್ರಿದಶರೊಳಗೆ ಇಲ್ಲ ಕದನ ಮಧ್ಯದಲ್ಲಿ ಮೌ -
ನದಲ್ಲಿ ಎಲ್ಲರೂ ಇರೆ ಹೃದಯನಿರ್ಮಳ 
ನಮ್ಮ ವಿಜಯವಿಠ್ಠಲ ಗರ್ಪಿ -
ಸಿದ ತನ್ನ ಸಹಸದ ಮುದದಿಂದ ನಲಿಯುತಾ ॥ 5 ॥

 ಜತೆ 

ಅರಿ ಭಯಂಕರ ಭೀಮ ವಿಜಯವಿಠ್ಠಲ 
ನರಹರಿ ಮನಮೆಚ್ಚಿ ನಡೆದಾ ಭೀಮಾವತಾರಾ ॥
********