sung as purandara vittala ankita
to check ankita - mohana vittala?
ಜಂಗಮರು ನಾವು ಜಗದೊಳು ||ಪ||
ಜಂಗಮರು ನಾವು ಲಿಂಗಾಂಗಿಗಳು
ಮಂಗಳವಂತರು ಭವಿಗಳೆಂತೆಂಬಿರಿ ||ಅ||
ಹರಗುರು ದೈವ ಕೇಶವ ನಮ್ಮ ಮನೆದೈವ
ವರದ ಮೋಹನ ಗುರುಶಾಂತೇಶ
ಹರಗುರು ದ್ರೋಹ ಮಾಡಿದ ಪರವಾದಿಯು
ರೌರವ ನರಕದಿ ಮುಳುಗುವುದೆ ಸಿದ್ಧ ||
ವಿಭೂತಿ ನಮಗುಂಟು ವಿಶ್ವೇಶ ನಮಗುಂಟು
ಶೋಭನ ನಾಮ ಮುದ್ರೆಗಳುಂಟು
ಶ್ರೀ ಭಾಗೀರತಿಯಗಣಿತ ಮಜ್ಜನವುಂಟು
ಸೌಭಾಗ್ಯವೀವ ಮಹಂತನ ಮಠದವರು ||
ವಿರಕ್ತರು ನಾವು ಶೀಲವಂತರು ನಾವು
ವೀರಭದ್ರಪ್ರಿಯ ಭಕ್ತರು ನಾವು
ಕಾರಣಕರ್ತ ಪುರಂದರವಿಠಲನ
ಕಾರುಣ್ಯಕೆ ಮುಖ್ಯಪಾತ್ರರು ನಾವು||
***
ರಾಗ ನಾದನಾಮಕ್ರಿಯೆ ಏಕತಾಳ (raga, taala may differ in audio)
ಮಧ್ಯಮಾವತಿ ರಾಗ, ಅಟ್ಟ ತಾಳ
pallavi
jangamaru nAvu jagadoLu
anupallavi
jangamaru nAvu lingAngigaLu mangaLavantaru bhavigaLentembiri
caraNam 1
hara guru daiva kEshava namma manadaiva varada mOhana gurushAndEsha
hara guru drOha mADida paravAdiyu raurava narakadi muLuguvude siddha
caraNam 2
vibhUti namaguNTu vishvEsha namaguNTu shObhana nAma mudregaLuNTu
shrI bhAgIratiya gaNita majjanavuNTu saubhAgyavIva mahantana madhadavaru
caraNam 3
viraktaru nAvu shIlavantaru nAvu vIrabhadra priya bhaktaru nAvu
kAraNa karta shrI purandara viTTalana kAruNyake mukhya pAtravu nAvu
***
ಜಂಗಮರು ನಾವು | ನೀವೇ ಕೇಳಿ ||ಪಲ್ಲವಿ||
ಜಂಗಮರು ನಾವು ಲಿಂಗಾಂಗಿಗಳು
ಮಂಗಳವಂತರ | ಭವಿಗಳೆಂಬಿರಿ ಬರಿದೆ ||ಅನು||
ಶಿವಗುರುದೈವ ಕೇಶವ ನಮ್ಮ ಮನೆದೈವ
ವರದ ಮೋಹನ ನಮ್ಮ ಗುರುಶಾಂತೇಶ
ಶಿವ ಗುರುದ್ರೋಹಮಾಡಿದ ಪರವಾದಿಗೆ
ರವರವ ನರಕದೊಳುರುಳುವದೇ ಗತಿ ||೧||
ವಿಭೂತಿ ನಮಗುಂಟು | ವಿಶ್ವೇಶ ನಮಗುಂಟು
ಶೋಭನ ಮುದ್ರೆಯು ನಮಗುಂಟು |
ಶ್ರೀ ಭಾಗೀರಥಿ ಅಗ್ನಿಮಜ್ಜನ ನಮಗುಂಟು
ಸೌಭಾಗ್ಯವೀವ ಮಹಂತಿನ ಮಠದವರು ||೨||
ವಿರಕ್ತರು ನಾವು | ಶೀಲವಂತರು ನಾವು
ವೀರಭದ್ರನ ಪ್ರಿಯ ಪ್ರಿಯ ಭಕ್ತರಾವು
ಕಾರಣಕರ್ತ ಶ್ರೀ ಪುರಂದರ ವಿಠಲನ
ಕಾರುಣ್ಯಕೆ ಮುಖ್ಯಪಾತ್ರರು ನಾವು ||೩||
***