Showing posts with label ಯಮದೂತರಿನ್ನೇನು ಮಾಡುವರು ಪೇಳೊರಮೆಯರಸ ರಘುನಾಥ ನಿನ್ನರಿಕೆಯುಳ್ಳವರಿಗೆ neleyadikeshava. Show all posts
Showing posts with label ಯಮದೂತರಿನ್ನೇನು ಮಾಡುವರು ಪೇಳೊರಮೆಯರಸ ರಘುನಾಥ ನಿನ್ನರಿಕೆಯುಳ್ಳವರಿಗೆ neleyadikeshava. Show all posts

Wednesday 1 September 2021

ಯಮದೂತರಿನ್ನೇನು ಮಾಡುವರು ಪೇಳೊರಮೆಯರಸ ರಘುನಾಥ ನಿನ್ನರಿಕೆಯುಳ್ಳವರಿಗೆ ankita neleyadikeshava

 ..

ಯಮದೂತರಿನ್ನೇನು ಮಾಡುವರು ಪೇಳೊರಮೆಯರಸ ರಘುನಾಥ ನಿನ್ನರಿಕೆಯುಳ್ಳವರಿಗೆ ಪ


ಮಂಡಲದೊಳಗೊಬ್ಬ ಜಾರಸ್ತ್ರೀಯಳು ತನ್ನಗಂಡನರಿಕೆಯಿಂದ ವ್ಯಭಿಚಾರಗೈಯೆಮಂಡಲ ಪತಿಯು ಶೋಧಿಸಿ ಹಿಡಿದೆಳೆ ತಂದುಭಂಡು ಮಾಡಲು ಬೆದರುವಳೆ ಕೇಳೆಲೊ ಹರಿ1


ಕಳವಿನ ಒಡವೆಯ ಒಡೆಯಗೆ ಪಾಲೀವಕಳಬಂಟ ಕನ್ನವ ಕೊರೆಯುತಿರೆಕಳವು ಮಾಡಿದನೆಂದು ಹಿಡಿದೆಳೆತಂದರೆತಳವಾರನೇನು ಮಾಡುವನು ಕೇಳೆಲೊ ಹರಿ 2


ಮನವಚನದಲಿ ಮಾಡಿದ ಪುಣ್ಯ ಪಾಪಗಳನಿನಗರ್ಪಿಸುವೆ ಕಾಲಕಾಲದಲಿಘನ ಕೃಪಾಂಬುಧಿ ಕಾಗಿನೆಲೆಯಾದಿಕೇಶವಎನಗೆ ಆರೇನು ಮಾಡುವರು ಕೇಳೆಲೊ ಹರಿ 3

***