Showing posts with label ನಂಬಿ ಚೊಕ್ಕಟಿಂಬು ಪಡೆಯಿರೈ prasannavenkata. Show all posts
Showing posts with label ನಂಬಿ ಚೊಕ್ಕಟಿಂಬು ಪಡೆಯಿರೈ prasannavenkata. Show all posts

Tuesday, 12 November 2019

ನಂಬಿ ಚೊಕ್ಕಟಿಂಬು ಪಡೆಯಿರೈ ankita prasannavenkata

by ಪ್ರಸನ್ನವೆಂಕಟದಾಸರು
ನಂಬಿ ಚೊಕ್ಕಟಿಂಬು ಪಡೆಯಿರೈ ಪ.

ಇಂಬುಪಡೆದು ಹರಿಯಚರಣಅಂಬುಜಬಂಡುಂಡು ಮಿಕ್ಕಹಂಬಲವ ಉಳಿದುಭೂರಿಸಂಭ್ರ್ರಮಿಸುವವರಕೇಳಿಅ.ಪ.

ಹರಿವ ಮನವಕಟ್ಟಿವಿೂರಿಬರುವ ದುರಿತಕಂಜದೆ ಸುತ್ತಿರುವ ಮಾಯಾಪಾಶ ಹರಿವ ಹರುವನಾಲಿಸಿಗುರುವಿನಾಜ್ಞಾದಂತೆ ಪುಣ್ಯದುರುಹು ಬಲ್ಲ ಪ್ರೇಕ್ಷಕಲ್ಪತರುವ ಪಿಡಿದು ನಷ್ಟ ಕಳೇವರವು ತನ್ನದಲ್ಲವೆಂದು 1

ಆವಾಗೆ ಸಚ್ಛಾಸ್ತ್ರ ಶ್ರವಣಭಾವಗುಟ್ಟುಕೇಳಿಭಕುತಿಠಾವುಗಂಡು ಹಸಿವು ತೃಷೆಯಕಾವಘಸಣೆಯಸಾವಿಗ್ಹೊಂದದಂತೆ ಸಾಧುಸೇವ್ಯಗರುಡಗಮನನಂಘ್ರಿಸೇವೆಗಧ್ಯಕ್ಷಿತರಾಗಿ ನೀವೀಗ ವೈರಾಗ್ಯ ಬಲಿದು 2

ಕ್ಷುದ್ರಭೋಗಬಯಸದೆ ದಾರಿದ್ರ ಭೀತನಾಗದೆ ಸಮುದ್ರಭವನನೆಂದು ಶ್ರೀಮುದ್ರಾಭರಣದಭದ್ರ ಭಾಗವತನು ಆಭದ್ರ ಬುದ್ಧಿಯಲ್ಲಿ ಕೂಡಿಚಿದ್ರೂಪ ಪ್ರಸನ್ನವೆಂಕಟಾದ್ರಿ ಭೋಗಶಯನನೆಂದು 3
********