Showing posts with label ಬಾರೋ ಗುರು ರಾಘವೇಂದ್ರ ಸದ್ಗುಣಸಾಂದ್ರ prahladavarada shreehari vittala. Show all posts
Showing posts with label ಬಾರೋ ಗುರು ರಾಘವೇಂದ್ರ ಸದ್ಗುಣಸಾಂದ್ರ prahladavarada shreehari vittala. Show all posts

Wednesday, 1 September 2021

ಬಾರೋ ಗುರು ರಾಘವೇಂದ್ರ ಸದ್ಗುಣಸಾಂದ್ರ ankita prahladavarada shreehari vittala

 ಶ್ರೀ ಪ್ರಹ್ಲಾದವರದ ಹರಿವಿಠ್ಠಲರು 

ಹೆಸರು : ಶ್ರೀ ರಾಘವೇಂದ್ರರಾಯರು., ಬೆಂಗಳೂರು

ಅಂಕಿತ : ಪ್ರಹ್ಲಾದ ವರದ ಶ್ರೀ ಹರಿ ವಿಠ್ಠಲ

ಶ್ರೀ ರಾಯರ ಸ್ತೋತ್ರ ಪದ...

ರಾಗ : ದರ್ಬಾರಿ        ತಾಳ : ಆದಿ


ಬಾರೋ ಗುರು ರಾಘವೇಂದ್ರ -

ಸದ್ಗುಣಸಾಂದ್ರ ।। ಪಲ್ಲವಿ ।।


ಭಾವಜನಯ್ಯನ ಭಾವದಿ ಭಜಿಸುವ ।

ಕೋವಿದರರಸನೇ ಕಾಯೋ -

ದೇವನ ದೂತ ।। ಚರಣ ।।


ಸುಧೀಂದ್ರ ಯತಿವರ -

ಕರಕಮಲಜಕಂಜ ।

ಕುಧರಜ ತಟ ವಾಸ -

ಪರಮೇತೇಜ: ಪುಂಜ ।। ಚರಣ ।।


ಪ್ರಹ್ಲಾದ ವರದ ಶ್ರೀ-

ಹರಿ ವಿಠ್ಠಲಗೆ ಪ್ರೀಯ ।

ಆಹ್ಲಾದವೆಮಗಿತ್ತು ನಿರುತ 

ಪೊರೆಯೋ ಜೀಯ್ಯಾ ।। ಚರಣ ।।

***

ರಾಗ: [ಹಮಿರ್ ಕಲ್ಯಾಣಿ] ತಾಳ: [ಮಿಶ್ರ ನಡೆ]

ಬಾರೊ ಗುರು ರಾಘವೇಂದ್ರ ಸದ್ಗುಣಸಾಂದ್ರ

ಭಾವಜನಯ್ಯನ ಭಾವದಿ ಭಜಿಸುವ

ಕೋವಿದರರಸನೆ ಕಾಯೊ ದೇವನದೂತ 1

ಸುಧೀಂದ್ರಯತಿವರ ಕರಕಮಲಜ ಕಂಜ

ಕುಧರಜತಟವಾಸ ಪರಮತೇಜಃಪುಂಜ 2

ಪ್ರಹ್ಲಾದವರದಶ್ರೀಹರಿವಿಠಲಗೆ ಪ್ರೀಯ

ಆಹ್ಲಾದವೆಮಗಿತ್ತು ನಿರುತಪೊರೆಯೊ ಜೀಯಾ 3

***