Showing posts with label ಅರಳಿದ ಕೆಂದಾವರಿಯ hayavadana ankita suladi ಮಹಾತ್ಮೆ ಸುಳಾದಿ ARALIDA KENDAAVARIYA MAHATME SULADI. Show all posts
Showing posts with label ಅರಳಿದ ಕೆಂದಾವರಿಯ hayavadana ankita suladi ಮಹಾತ್ಮೆ ಸುಳಾದಿ ARALIDA KENDAAVARIYA MAHATME SULADI. Show all posts

Sunday, 8 December 2019

ಅರಳಿದ ಕೆಂದಾವರಿಯ hayavadana ankita suladi ಮಹಾತ್ಮೆ ಸುಳಾದಿ ARALIDA KENDAAVARIYA MAHATME SULADI

Audio by Mrs. Nandini Sripad

ಶ್ರೀ ವಾದಿರಾಜ  ವಿರಚಿತ  ಶ್ರೀವೆಂಕಟೇಶನು ಸ್ವಪ್ನದಲ್ಲಿ ತೋರಿದ ಮಹಾತ್ಮೆ ಸುಳಾದಿ 

 ರಾಗ ನೀಲಾಂಬರಿ 

 ಧ್ರುವತಾಳ 

ಅರಳಿದ ಕೆಂದಾವರಿಯ ಇರವ ಧಿಕ್ಕರಿಸುವ
ಗಿರಿಯ ತಿಮ್ಮರಾಯನ ಚರಣಗಳ ಕಂಡೆ ನಾ
ಅರುಣ ತಳದಲಿಪ್ಪ ಅಂಕುಶ ಧ್ವಜ ವಜ್ರಾದಿಂ
ಸುರುಚಿರ ರೇಖೆಗಳ ಸೊಬಗು ಕಂಡೆ ನಾ
ಬೆರಳ ಸಾಲ್ಗಳ ಮೇಲೆ ಬೇರೆ ತೋರುವ ಭಾ -
ಸುರ ನಖಾಮಣಿಗಳೆಸೆವ ಕಿರಣಗಳ ಕಂಡೆ ನಾ
ಕಿರಿಗೆಜ್ಜೆ ಕಡೆಯ ಪೆಂಡೆಯ ಪ್ರಭೆಯ ಕಂಡೆ 
ಎರಡು ರನ್ನದ ಕನ್ನಡಿಯ ತೆತ್ತಿಸಿದ ವೋಲು
ಮುರಹರನ ಮೋಹನದ ಜಾನು ದ್ವಯವ ಕಂಡೆ ನಾ
ಕರಿಯ ದಂತವ ಪೋಲ್ವ ಜಂಘೆಗಳ ಕಂಡೆ ನಾ
ಉರುಟು ಕದಳಿಯ ಕಂಭದಂತೆ ಉರುತರವಾದ ವರ್ತುಲ
ಹರಿಯ ಊರು ಪೀವರ ಕಂಡೆ ಕನಸಿನಲಿ
ವರ ಪೀತಾಂಬರ ಕಾಂಚಿ ಕಿಂಕಿಣಿ 
ಜಾಲಗಳಿಂದ ದಾಮ ಉಡಗಿ ಮೆರೆವ 
ಕರುಣಿ ವೆಂಕಟೇಶ್ವರನ ಕಟಿಯನ್ನು ಕಂಡೆ ನಾ
ಕಿರಿಡೊಳ್ಳಿನುದರದಿಂ ನಾಭಿ ತ್ರಿವಳಿ ರೇಖೆಯು ಇಂ -
ದಿರೆ ಅಪ್ಪಿಕೊಂಬ ಮಧ್ಯ ಚೆಲ್ವಿಕೆಯ ಕಂಡೆ ನಾ
ಸಿರಿದೇವಿ ಸಿರಿವತ್ಸ ಕೊರಳ ಕೌಸ್ತುಭ ಹಾರ
ಸರಸದಿಂದೋಲುವ ವಿಶಾಲುರುಸ್ಥಳವ ಕಂಡೆ ನಾ
ಭರದಿ ಮಿಂಚುವ ಉರು ಸ್ಥಳವ ಕಂಡೆ ನಾ
ಕರ ಚತುಷ್ಟದಲಿಪ್ಪ ಶಂಖ ಚಕ್ರಗದೆ ಪದ್ಮ
ವರ ಅಭಯಗಳ ಕಂಡೆ ಕರ್ಣಕುಂಡಲ ಪ್ರಭೆಯ
ತ್ರಿರೇಖೆಗಳಿಂದೊಪ್ಪುವ ಕಂಠ ಶಂಖದಂದದಿ
ವರ ವೆಂಕಟೇಶ್ವರನ ಕಂಧರವ ಕಂಡೆ ನಾ
ಉರಳುಗೂದಲು ಫಣಿ ಸಿಂಗಾಡಿಯಂತಿರ್ಪ ಪುರ್ಬು
ಸರಸಿಜನಯನ ಸುಕಪೋಲ
ಕೂರ್ಮನಂದದಿ ಗಲ್ಲ ಕುಂದ ಪಲ್ಗಳು ಬಿಂಬಾ -
ಧರ ಮಂದಸ್ಮಿತ ವದನ ಚಂಪಕ ನಾಸ ಕ -
ಸ್ತೂರಿ ನಾಮಗಳಿಂದೆಸೆವ ಸಿರಿ ಮೊಗವ ಕಂಡೆ ನಾ 
ಸಿರಿ ಹಯವದನಾ ಸಿರಿ ಶೇಷಗಿರಿ ಅರಸನ 
ಕಿರೀಟವನೆ ಕಂಡು ಕೃತಾರ್ಥನಾದೆ ॥ 1 ॥

 ಮಠ್ಯತಾಳ 

ಇಂದಿನಾ ಶುಭದಿನಾ ಗೋವಿಂದನ ಕಂಡ ಕಾರಣಾ
ಹಿಂದಣ ಪಾಪವು ಬೆಂದು ಹೋಯಿತೈ 
ತಂದೆ ಹಯವದನನ ಒಲಿಮೆಯಿಂದ 
ಇಂದಿನಾ ಶುಭದಿನಾ ॥ 2 ॥

 ತ್ರಿಪುಟತಾಳ 

ಪಾಪಕಂಜೆನೋ ನಾ ಸಂತಾಪಕಂಜೆನೋ ನಾನು
ಅಪತ್ತಿಗಂಜೆ ಯಮನ ಬಾಧೆಗಂಜೆ
ಶ್ರೀಪತಿ ಹಯವದನನ ಪಾದ ಪದುಮದ 
ನೆನವೆ ಇದ್ದರೆ ಸಾಕು
ಅಪತ್ತಿಗಂಜೆ ಯಮನ ಬಾಧಿಗಂಜೆ ॥ 3 ॥

 ರೂಪಕತಾಳ 

ಗುರು ಭಕ್ತಿ ಬೇಕು ಹಿರಿಯರ ಕರುಣವಿರಬೇಕು
ಹರಿಕಥೆಗಳ ನಿತ್ಯ ಕೇಳುತಲೆ ಇರಬೇಕು
ವಿರಕುತಿ ಬೇಕು ವಿಷ್ಣುನಾರಾಧನೆ ಬೇಕು
ವರಮಂತ್ರ ಜಪಬೇಕು ತಪಬೇಕು ಮುಕ್ತಿ ಸಾಧನಕೆ ಪರಿಪರಿಯ ವ್ರತ ಬೇಕು ಸಿರಿ ಹಯವದನನ್ನ 
ಪರಮಾನುಗ್ರಹ ಬೇಕು ವಿಷಯ ನಿಗ್ರಹಬೇಕು ॥ 4 ॥

 ಝಂಪೆತಾಳ 

ಹರಿ ಸುಗುಣ ಸಾಕಾರ ಸಕಲ ಸುರರೊಡೆಯ ನಿ -
ರ್ಜರರೆಲ್ಲ ಹರಿಯ ಕಿಂಕರರೆಂದರಿಯಬೇಕು
ಮರಣ ಜನನಾದಿ ದೋಷಕತಿದೂರನೆಂಬ ಈ
ಸ್ಮರಣೆ ಸಂತತಬೇಕು ದುರಾಚಾರ ಬಿಡಬೇಕು
ಸಿರಿ ಹಯವದನ ಶ್ರೀ ಶೇಷಗಿರಿಯರಸನಾ
ಸ್ಮರಣೆ ಇದ್ದವನೆ ಸಂಸಾರಭಯ ಉತ್ತರಿಸುವ ॥ 5 ॥

 ಅಟ್ಟತಾಳ 

ಗಾತ್ರವ ಬಳಲಿಸಿ ಶ್ರೋತ್ರಾದಿ ಕೇಳುತ
ಯಾತ್ರಿಯ ಮಾಡು ವೆಂಕಟಪತಿ ಮೂರ್ತಿಯ
ನೇತ್ರದಿ ನೋಡು ಕಾಮಿತಾರ್ಥವ ಕೊಡುವ ಸ -
ದ್ಭಕ್ತರ ಕಂಡು ಸರ್ವೋತ್ತಮನ ನಂಬೂ
ದೈತ್ಯ ಪೌಂಡ್ರಿಕನ ಮತವ ಮೆಚ್ಚಿ ಕೆಡಬೇಡ
ಚಿತ್ರವಿಚಿತ್ರ ಹಯವದನನ್ನ ನೀ ವೊಲಿಸಿಕೋ ವೊಲಿಸಿಕೋ 
ಯಾತ್ರಿಯ ಮಾಡು ವೆಂಕಟ ಮೂರ್ತಿಯ ॥ 6 ॥

 ತ್ರಿಪುಟತಾಳ 

ಶ್ರೀನಾಥ ಪ್ರಭುವೆತ್ತ ಹೀನ ಯೋನಿಗಳಲ್ಲಿ
ನಾನಾ ಕ್ಲೇಶಗಳುಂಬೋ ಹೀನ ಜೀವನೆತ್ತ
ಭಾನು ಮಂಡಲವೆತ್ತ ಶ್ವಾನನಬ್ಬರವೆತ್ತ
ಮಾನವ ಹರಿಯೆ ತಾನೆಂಬೊದಕ್ಕೆ
ದಾನವಕುಲವೈರಿ ಸಿರಿ ಹಯವದನ 
ಶ್ರೀನಿವಾಸನ ದಾಸದಾಸನೆಂದೆನಿಸೋ ॥ 7 ॥

 ರೂಪಕತಾಳ 

ಹನುಮಂತನ ನೋಡು ತನ ತನುಮನಧನ ಹರಿಗೊಪ್ಪಿಸಿ
ನೆನೆವ ಪ್ರಹ್ಲಾದನ್ನ ನೋಡು ತಪ ಮಾಡುವ
ಮುನಿ ಜನರ ಕಂಡು ನಿನ್ನಯ ಮನದ ಭ್ರಾಂತಿಯ ಬಿಡು
ಚಿನುಮಯ ಮೂರುತಿ ಹಯವದನನ ಪಾದ -
ವನಜ ಯುಗ್ಮವ ನಂಬೊ ಸಕಲ ಸುಖಕ್ಕಿಂಬೊ ॥ 8 ॥

 ಆದಿತಾಳ 

ಕಲ್ಯಾಣವೀವ ನಮ್ಮ ಶ್ರೀವಲ್ಲಭನ ಸೇವಿಸಿ ಸಾ -
ವಿಲ್ಲದ ಮುಕ್ತಿಯ ಬೇಡಿಕೊಳ್ಳಿರೋ ಜನದಿಂದ ನೋ -
ವಿಲ್ಲದತಿ ಸುಖಿಸಲು ಬಲ್ಲಂಥ ಕೋವಿದರು ನೀ -
ವೆಲ್ಲ ಕ್ಷುದ್ರವ ಬಿಟ್ಟು ದಾವಲ್ಲಿಗೆ ಪೋಗದಲೇವೆ
ದಿಲ್ಲಿ ರಾಯನ ಕಂಡು ಪುಲ್ಲನು ಬೇಡುವರೇನೊ
ತಲ್ಲೆಯೂರಿ ತಪಸ್ಸು ಇದ್ದಲ್ಲಿ ಸಾಧಿಸಿಕೊಳ್ಳಿರೊ
ಕ್ಷುಲ್ಲಕರೆಂಜಲ ಮೆದ್ದು ಬಾಳುವರ ನೋಡಿ ಲಕ್ಷ್ಮೀ -
ವಲ್ಲಭನಲ್ಲದೆ ಬೇರೆ ಫಲ್ಲದಾಸೆ 
ಸಲ್ಲದು ಪೂಗೊಲ್ಲನಯ್ಯ ವೆಂಕಟೇಶ 
ಚಲುವ ಹಯವದನ ಪಾದಪಲ್ಲವ ನೆಂಬೊ ಹಂಚಿಗೆ 
ಹಲ್ಲು ತೆರದಂದದಿ ಮತ್ತೆಲ್ಲೆಲ್ಲೇನು ಫಲವಿಲ್ಲಾ ॥ 9 ॥

 ಜತೆ 

ತಿರುಮಲರಾಯನ ತ್ರಿವಿಕ್ರಮರಾಯನ
ಸಿರಿ ಹಯವದನನ್ನ ಚರಣವೆ ಗತಿಯೆನ್ನು ॥
***

pallavi

aralidha kendAvareya irava dhiKarisuva
giriya thiMayAyana charanagala kande nA
arunathaladaliPa ankusha dhvaja vajRadhi
suruchira rEkhegala sobaga kande nA
berala sAlgala mEle bEre bEre thOruva
bhAsura nakHamanigala kiranagala kandenA
kariya danthada pOlva janGhegala kande nA
eradu raNada kaNadiya tHetHisadavolu
muraharana mOhanadha jAnudvayava kande nA
vurutu kadhaliya kambadanthe varthulhavAda
hariya pIvara thodegala kande kanasinali
vara pIthambara kAnchi kinkinhi jAlagalindha
mereva vEnkatEshana katiya kande nA
kirudolinudharadha nAbhiya thrivaliya
indireyaPikombha madhyadha cheluva kande nA
siridEvi sirivatsa korala kousthubha hAra
saradhim minchuva vishAlurasthalava kande nA
thrirEkhegalindhoPuva shnakhadandadha
karuni venkatEshana kandharda kande nA
karachathushtayadhaLi shankha charka gadhe padhuma
vara abhayagala kande karnakundalava kande nA
sarasa bimbAdhara susmitha nAsaputadha
kasturi nAmadha sarasijanayanagalindeseva sirimogava kande nA
kurulukUdhalu pHala singAdiyanthiPa purbu
kUrmanandhadhi gala chubukAgradhim
siriyarasa hayavadhana shEshagiri arasana kirItava
paripariya sobaga nA kandu krutHarthanAdhe nA
***