Showing posts with label ಶ್ರೀರಾಮ ನಾಮ ಸ್ಮರಿಸೀಕ್ಷಕಾರಿ ಘೋರಾವತಾಪಗಳದಾಗಳದಾ gurumahipati. Show all posts
Showing posts with label ಶ್ರೀರಾಮ ನಾಮ ಸ್ಮರಿಸೀಕ್ಷಕಾರಿ ಘೋರಾವತಾಪಗಳದಾಗಳದಾ gurumahipati. Show all posts

Wednesday 1 September 2021

ಶ್ರೀರಾಮ ನಾಮ ಸ್ಮರಿಸೀಕ್ಷಕಾರಿ ಘೋರಾವತಾಪಗಳದಾಗಳದಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಶ್ರೀ ರಾಮನಾಮ ಸ್ಮರಿಸೀಕ್ಷಕಾರಿ ಘೋರಾವತಾಪಗಳದಾಗಳದಾ ಪುರಾರಿ ಆರಾದರೇನು ಜಪಿಸೀ ಜಪಸೀದ ಯೋಗಿ ಸಾರುವೆ ನೊಡಿ ಸುಖವಾ ಸುಖವನು ನೀಗಿ1 

ಸೋಕಲು ರಾಮಪದವಾ ಪದವನು ನೀಗಿ ತಾಕನ್ಯಳಾದಳರಿಯಾ ಅರಿಯಾದ ಹೋಗಿ ನೀ ಕೇಳಿ ಕೇಳಿ ಮರವೇ ಮರವೇನೋ ನೀನು ಲೋಕೇಶಗ್ಹೋಗುಶರಣಾ ಶರಣಾಗುವನು 2 

ಏನಿತ್ತಳಂದು ಶಬರಿ ಬರಿಯಹಣ್ಣಾ ತಾನುಂಡುಕೊಟ್ಟು ಭವವಾಭವವಾರಿಸಣ್ಣಾ ಅನಾಥಬಂದು ಮರಿಯಾಮರಿಯಾದಹೋಗಿ ಸ್ವಾನಂದಸಾಖ್ಯಗರೆವಾಗರೆವಾಗೊವಲ್ಲಿ 3 

ಇಂದಿರೆ ಸುದ್ದಿ ಸುಧಿಯಾ ಸುಧಿಯಾದಲಿಂದಾ ತಂದಾರೆಪದ್ಮಭವನಾ ಭವಸಾದರಿಂದಾ ಆದನೇವೆ ಕೊಟ್ಟುಕರದೀ ಕರದೀಶನಾಥಾ ಮುಂದಿನಭಾವ್ಯ ಹನುಮಾ ಹನುಮಾವಿಧಾತಾ4 

ರಾಮೆಂದುಕೂಗಿ ಗಿಳಿಯಾ ಗಿಳಿಯಾಗಣಿಕೆ ನೇಮದಲಿ ಮುಗುತಿಯಾ ಗತಿಯಾಬೇಕೆ ಪ್ರೇಮದಿ ಮಾನವರುತಾ ವರತಾತನೆಂದಾ ಕಾಮಾರ್ಥನೀವ ಚಲುವಾ ಚಲುವಾ ಮುಕುಂದಾ5 

ಸುಗ್ರೀವ ಬಂದು ಅಡಿಯಾ ಅಡಿಯಾಗಲೆಂದು ಶೀಘ್ರದಿಶೀಳಿತರುವಾ ತರುವಾಯಲಿಂದು ಅಗ್ರಜನೊತ್ತಿ ಅವನೀ ಅವನೀಯ ರಾಮಾ ನುಗ್ರಹ ಮಾಡದರಿಯಾದರಿಯಾಗು ವಾತ್ಮಾ6 

ಶುಭವಾಕ್ಯ ದೂರಿದನು ಜಾಣನು ಜಾಣನಾಗಿ ವಿಭೀಷಣಬಂದ ಕಣವೀಕ್ಷಣದಲಿ ಸಾಗಿ ವಿಭುಕೊಟ್ಟಲಂ ಕಾಶ್ರಯವಾಶ್ರಯವಾಗಿ ರಾಮಾ ಅಭಿವರ್ಣಿಸುದುರಸನಾ ರಸನದಿ ನೇಮಾ7 

ಶೇವೆಯನು ಮಾಡಿ ತಣಲೀತಣಲೀಯ ನೋಡಿ ತಾವರಿ ಕೈಯ್ಯಳೆಳದಾಲೆಳದಾದಯ ಮಾಡಿ ಭಾವಾರ್ಥಿಯಾದ ನರನಾ ನರನಾಥವೇಷಾ ಕಾವನುಲೋಕಜನ ಕಾಜನಕಾತ್ಮಜೇಶಾ 8 

ರಾಮಾಷ್ಟಕಾದ ಕವಿತಾ ಕವಿತಾನೆ ಆಗೀ ಶ್ರೀ ಮಹಿಪತಿ ವರದಾ ವರದಾತ ಯೋಗಿ ಕುಂದ ಗುರುತಾಗುರುತಾತ ಮಾಡಿ ನೇಮದಿ ಕಾವಕರುಣೀಕರುಣೀಯ ನೋಡಿ9

***