Showing posts with label ಎಲ್ಲಿರುವೆ ತಂದೆ ಬಾರೊ ಮಾರುತಿ prananatha vittala. Show all posts
Showing posts with label ಎಲ್ಲಿರುವೆ ತಂದೆ ಬಾರೊ ಮಾರುತಿ prananatha vittala. Show all posts

Thursday, 5 August 2021

ಎಲ್ಲಿರುವೆ ತಂದೆ ಬಾರೊ ಮಾರುತಿ ankita prananatha vittala


kruti by bagepalli shesha dasaru ಬಾಗೇಪಲ್ಲಿ ಶೇಷದಾಸರು


ಎಲ್ಲಿರುವೆ ತಂದೆ ಬಾರೊ ಮಾರುತಿ ಪ


ಎಲ್ಲೆಲ್ಲಿನೋಡಿದರು ಅಲ್ಲಿ ನಿನ್ನ ಕೀರುತಿ

ಅಲ್ಲಿನಿನ್ನಕೂಡಿರುವ ನಿತ್ಯಾಶ್ರೀಪತಿಅ.ಪ


ವಾರಿಧಿಯ ಹಾರಿ ನೀ ಸೇರಿ ತ್ವರದಿ ಲಂಕೆಯ

ಕ್ರೂರರನ್ನು ಕೊಂದು ಕುರುಹ ತಂದ ಮಹರಾಯ 1


ದುರುಳ ಕುರುಪನನ್ನು ಕೊಂದು ತರಳೆಯಮಾನ

ಹರುಷದಿಂದ ಪೊರೆದು ನೀ ಮೆರೆದ್ಯೊ ಸುಮ್ಮಾನ 2


ಯತಿಯ ರೂಪವ ಧರಿಸಿ ನೀ ಸಿರಿಪತಿಯ ಪಾದವ

ಹಿತದಿ ಸತತ ಭಜಿಸಿ ಶೇಷ ವಿಠ್ಠಲನ ಮೋದಿಸಿದಿ 3

***