..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಮನವೆ ಮಾನ್ಯನ ಮನ್ನಿಸು ಶ್ರೀವ್ಯಾಸ
ಮುನಿಗೆ ಒಲಿದಿಹ ವಾಯು ನಾ ಪ
ಪ್ರತಿ ಸಂಚರ ಕಾಲದಿ ಅವಿಲೀನ
ಮತಿಯುಳ್ಳ ದೇವನಿವನು
ಸುತ ಜಯಾದೇವಿಗೀತ ತನ್ನ ಸರಿ
ಚತುರಾಸ್ಯ ದೇಹದೊಳಿಹ 1
ಚತುರವಿಂಶತಿ ತತ್ವಕೆ ಅಭಿಮಾನಿ
ಶ್ರುತಿಗಳರಿಯದ ಗುಣಗಳ
ಮತಿಯುಳ್ಳ ಸೂತ್ರನಾಮ ಹರಿರೂಪ
ಮಿತಿ ಇಲ್ಲದಲೆ ಕಾಂಬನೊ 2
ಯತಿಯಾಗಿ ಬಂದು ಹರಿಯ ಕಾರ್ಯಗಳ
ಕೃತಿಸಿ ತಾ ನಿಂದು ವ್ಯಾಸ
ವ್ರತಿಯಿಂದ ಮಾಡಿಸಿದ ಈತಗೆ
ಪತಿ ವಾಸುದೇವವಿಠಲ3
***