..
ಶ್ರುತಿರಾಸಿ ಸನ್ನುತ ಸತತ ಸದ್ಗುಣಪೂರ್ಣ
ಪ್ರಥಮಾಂಗ ಸಂಪೂಜ್ಯ ಶರ್ವಮಿತ್ರ ಪ
ಪ್ರತಿ ಪ್ರತಿ ಕ್ಷಣ ನಿನ್ನ ಪತಿತಪಾವನ ಪಾದ
ಕ್ಕತಿ ದೈನ್ಯದಲ್ಲೆರಗಿ ಮೊರೆ ಇಡುವೆ ಪೊರೆಯೆಂದು ಅ.ಪ.
ಕೋರಿದರೆ ಮನಕರಗಿ ಹಾರಿ ಬರುವಿಯೆಂದು
ನಾರದರೆ ಮೊದಲಾದ ನಿಜಭಕ್ತರೆಲ್ಲ
ಸಾರಿಹರು ಸರ್ವೇಶ ಸಾರತಮ ಸರ್ವರೊಳು
ಘೋರ ಭವದಿಂದೆನ್ನ ಪೊರೆ ಎನಲು ಬರೆಯಂತೆ 1
ಕೃಪೆಯಿಂದ ನೀ ನೋಡೆ ಬ್ರಹ್ಮಾಂಡ ದೋಷಗಳು
ಲುಪ್ತವಾಗುವುದಯ್ಯ ಒಂದೆ ಕ್ಷಣದಿ
ನಿಪುಣನಾಗುವನವನು ಇಹಪರ ನಿಧಿ ಒದಗಿ
ಅಪರಿಮಿತ ಸುಖ ಉಣುವ ಅಪ್ರತಿಮ ಕೀರ್ತಿಯು 2
ಶಿರಿ ವಿಧಿ ಶಿವ ಶಕ್ತ ಸುರರಿಂದ ಸಂಸೇವ್ಯ
ಜಯೇಶವಿಠಲ ಕೀರ್ತಿಪೂರ್ಣಾ
ಪರಿ ಪರಿ ದೋಷಗಳು ಪರಮ ಕೃಪೆ ವೀಕ್ಷಣದಿ
ಪರಿಹರಿಸಿ ಬೆರೆ ಎನ್ನ ಪರಭಕ್ತಿ ನಿಧಿ ಇತ್ತು 3
***