Showing posts with label ಭಕ್ತಿಪಥ ಸಲ್ಲಿಸೈ ಸತತ ಸುಖಿ ಮುರವೈರಿ ಸಂಸಾರ shyamasundara. Show all posts
Showing posts with label ಭಕ್ತಿಪಥ ಸಲ್ಲಿಸೈ ಸತತ ಸುಖಿ ಮುರವೈರಿ ಸಂಸಾರ shyamasundara. Show all posts

Wednesday, 1 September 2021

ಭಕ್ತಿಪಥ ಸಲ್ಲಿಸೈ ಸತತ ಸುಖಿ ಮುರವೈರಿ ಸಂಸಾರ ankita shyamasundara

 ..

ಭಕ್ತಿಪಥ ಸಲ್ಲಿಸೈ ಸತತ ಸುಖಿ ಮುರವೈರಿ | ಸಂಸಾರ

ಘೋರ ಭಯದೂರೋಡಿಸಿ ಹರಿಯೆ | ತ್ವತ್ವಾದ

ಸಂಸೇವಿಪ ಸೌಭಾಗ್ಯತ್ವರ ನೀಡೋ ಶ್ರೀಕಾಂತನ ಪ


ಅಪರಾಧ ನೋಡದಲೆ ಕೃಪೆಯಿಂದ ಕರಪಿಡಿಯೊ | ಪಾಪಾಂಧ

ಕೂಪದಲ್ಲಿ ತಪಿಸುತಲಿ ಬಲುಭವಣಿ ಪರಿಪರಿ ಅನುಭವಿಸುವೆ

ಗೋಪಾಲಾ ನೀ ಪಾರುಗೈಯುವದು 1


ಮಡದಿ ಸುತರಾ ಮೋಹಕಡಲಲಿ ಮುಳುಗಿ | ನಾ

ದಡವ ಸೇರದೆ | ಕಡೆಗೆ ಅಡಿದಾವರೆ ನಂಬಿದೆನೈ |

ಕಡೆಹಾಯಿಸೋ ದೇವನೆ ತಡಮಾಡದೆ ಜಡಜಾಂಬಕ ಶ್ರೀಹರೇ 2


ಶ್ರೀಶಾಮಸುಂದರನೆ | ಶಿಶುನಿಂಗೆ ಪಡೆದವರು

ಮೋಸದಿಂದ ಘಾತಿಸುವರೆ | ದಾಶರಥ ಭವಘುಸಣೆ

ತ್ವರಿತದಿ ಪರಿಹರಿಸುತ ಗೋವಿಂದನೆ ನೀನೋಡೊ ಸುಜ್ಞಾನವಾ 3

***