ಕಾಖಂಡಕಿ ಶ್ರೀ ಮಹಿಪತಿರಾಯರು
ಮಾಡಿ ನೀವು ಸತ್ಸಂಗ ನೋಡಿ ಘನ ಅಂತರಂಗ ಪ
ಸಾರಿದೂರಲಿಕ್ಕೆ ವೇದ ಅರರಿವದೆನಗಗಾಧ ದಾರಿದೋರಿಕುಡು ಬೋಧ ಗುರುಪ್ರಸಾದ 1
ಬದಿಲಿರಲಿಕ್ಕೆ ಖೂನ ಇದಕ್ಯಾಕುದ್ದರಿ ಜ್ಞಾನ ಛೇದಿಸಿ ಅನುಮಾನ ಭೇದಿಸಿರೊ ಪೂರ್ಣ 2
ಹಿಡಿಯಲಿಕ್ಕೆ ಸತ್ಸಂಗ ಓಡಿಬಾವ್ಹಾ ಶ್ರೀರಂಗ ಮಾಡಿ ಭವಭಯಭಂಗ ನೋಡುವ ಕೃಪಾಂಗ3
ಎಲ್ಲಕ್ಕೆ ಶಿಖಾಮಣಿ ಸುಲಭ ಈ ಸಾಧನಿ ಸೊಲ್ಲಿಗೆ ಮುಟ್ಟಿದ ಪ್ರಾಣಿ ಬಲ್ಲವ ಸುಜ್ಞಾನಿ 4
ಪಿಡಿದು ಸತ್ಸಂಗತಿ ಕಡಿದು ಹೋಯಿತು ಭ್ರಾಂತಿ ಪಡೆದ ಸುಖ ವಿಶ್ರಾಂತಿ ಮೂಢ ಮಹಿಪತಿ 5
***