Showing posts with label ತಿಳಿದು ವಿಚಾರಿಸು ವಿಶ್ವದಲ್ಲಿ ಹಲವು ಜೀವಿಗಳೊಂದೆ vijaya vittala. Show all posts
Showing posts with label ತಿಳಿದು ವಿಚಾರಿಸು ವಿಶ್ವದಲ್ಲಿ ಹಲವು ಜೀವಿಗಳೊಂದೆ vijaya vittala. Show all posts

Wednesday, 16 October 2019

ತಿಳಿದು ವಿಚಾರಿಸು ವಿಶ್ವದಲ್ಲಿ ಹಲವು ಜೀವಿಗಳೊಂದೆ ankita vijaya vittala

ತಿಳಿದು ವಿಚಾರಿಸು ವಿಶ್ವದಲ್ಲಿ
ಹಲವು ಜೀವಿಗಳೊಂದೆ ಪ್ರಕಾರ ಚರಿಸುವದು ಪ

ಇರವು ನೊಣ ಪೋದರೆ ಏನಾದರೂ ಕ್ಲೇಶ
ಬರುವುದೇ ಪ್ರತ್ಯಕ್ಷ ನೋಡಿದರು
ಭರದಿಂದ ಆಲಿಸು ದೇಹ ಮಾತುರ ಬ್ಯಾರೆ
ಇರುವದಲ್ಲದೆ ಒಳಗೆ ಚೇತನಾಡುವದೊಂದೆ 1

ಕೂಡಿಕೊಂಡವು ತಮ್ಮತಮ್ಮೊಳಗೆ ಭೂತಗಳು
ಆಡಲೇನದು ಪೂರ್ವದ ನಿರ್ಮಾಣ
ನಾಡೊಳಾಗಿದ್ದನಿತೆ ಸಮ್ಮಂಧವಲ್ಲದೆ
ಬೀಡು ತೊರದಾಮ್ಯಲೆ ಬಿಂಕವೆತ್ತಣದೊ 2

ಹರಿಮಾಯದಿಂದಲಿ ನಾನು ನನ್ನದು ಎಂಬ
ಗರುವಿಕೆ ಪುಟ್ಟುವದು ಮೋಹ ಪೆಚ್ಚಿ
ನಿರಯದೊಳಿಳಿಯದೆ ವಿಜಯವಿಠ್ಠಲನ
ಸ್ಮರಣೆಯಲಿ ಕುಣಿದಾಡು ಎಲ್ಲ ಸಮನ ನೋಡು3
**********