Showing posts with label ಗುರುವರ ದಯಮಾಡೈ ಹಯಮುಖ krishnavittala vadiraja stutih. Show all posts
Showing posts with label ಗುರುವರ ದಯಮಾಡೈ ಹಯಮುಖ krishnavittala vadiraja stutih. Show all posts

Monday, 2 August 2021

ಗುರುವರ ದಯಮಾಡೈ ಹಯಮುಖ ankita krishnavittala vadiraja stutih

ಗುರುವರ ದಯಮಾಡೈ ಹಯಮುಖ

ಪದಯುಗ ನಿಜ ಭಕ್ತಾಗ್ರಣೀ ಪ


ಚರಣವ ನಂಬಿದೆ ಮುಂದಿನ ಪರಿಸರ

ಸರಸರ ಸುರಿಸುತ ವರಗಳ ಕರುಣದಿ ಅ.ಪ


ನಿನ್ನನೆ ನಂಬಿದ ಅನ್ಯರವಲ್ಲದ

ಚಿಣ್ಣರ ಬಿಡುವರೆ ಘನ್ನಗುಣಾರ್ಣವ

ಸಣ್ಣವರೆನ್ನೆದೆ ಮನ್ನಿಸಿ ಕೈಪಿಡಿ

ಚಿನ್ಮಯ ನಂದನ ಅನ್ಯರ ಪೋಷಕನೆ 1


ದಾಸರ ದೋಷವಿನಾಶಗೈವುದು

ಕ್ಲೇಶವ ಭಾವೀಶ್ವಾಸ ನಿಯಾಮಕಗೆ

ವಾಸವ ಗುರುಶಿವ ಶೇಷಸುವಂದಿತ

ವಾಸಿಸಿ ಹೃದಯದಿ ಭಾಸಿಸು ಹರಿದಾರಿ 2


ಆರ್ರ್ತಿವಿದೂರ ಪರಾರ್ಥಕೆ ನೆಲಸಿಹ

ಖ್ಯಾತ ಕವೀಂದ್ರನೆ ಪ್ರೀತಿಯ ಬೇಡುವೆನು

ಮಾತೆಯ ತೆರಮುರವ್ರಾತವ ನೋಡದೆ

ನಾಥನೆ ನೀಡಿಸು ಆತ್ಮವಿಕಾಸವನು 3


ವಿe್ಞÁನಾಸಿಯ ದಾನವ ಗೈಯುತ

ದೀನನ ಮೌಢ್ಯದಿ ಶೂನ್ಯವಗೈಯುತ

ಪ್ರಾಜ್ಜನ ಮಾಡೈ ಪ್ರಾಜ್ಞಲಲಾಮನೆ

ಆe್ಞÁಧಾರಕ ನಿನ್ನ ಜನುಮ ಜನುಮದಲಿ4


ವೇದವ್ಯಾಸರ ಪಾದಾರಾಧಕ ಮೋದಮುನೀಂದ್ರರ

ಪ್ರೇಮವ ಪಡೆದಿಹನೆ ವೇದವ್ಯಾಸರ ಸೇವಿಪ ಭಾಗ್ಯವ

ಸಾದರದಿಂ ಕೊಡು ಕಾಮಿತ ಕೊಡುವವನೆ5


ಹಿರಿಯರ ಕರುಣದಿ ಕಿರಿಯರ ಸಾಧನೆ

ಶರಣನ ಭಾರವು ಸೇರಿದೆ ನಿಮ್ಮಡಿ

ಹರಣವ ವಪ್ಪಿಸಿ ಚರಣವ ಪಿಡಿದಿಹೆ

ಪೊರೆಯೈ ಮನತರ ಕುರುಡನು ನಾನಿಹೆ 6


ಮಿಥ್ಯಾಮತ ವಿಧ್ವಂಸನೆ ಗೈಯುವ

ಸದ್ಗ್ರಂಥಂಗಳದಾತನೆ ಬಾಗುವೆನು

ಪಾರ್ಥನಸಖ “ಶ್ರೀಕೃಷ್ಣವಿಠಲ”ನ

ಭಕ್ತಿತರಂಗವ ನೀಡುತ ಕಾಯುತ 7

****