Showing posts with label ಲೌಕಿಕ ಏತಕ್ಕೆ ನಮಗೆ krishnavittala. Show all posts
Showing posts with label ಲೌಕಿಕ ಏತಕ್ಕೆ ನಮಗೆ krishnavittala. Show all posts

Monday, 2 August 2021

ಲೌಕಿಕ ಏತಕ್ಕೆ ನಮಗೆ ankita krishnavittala

ಲೌಕಿಕ ಏತಕ್ಕೆ ನಮಗೆ ಪ


ಲೋಕೇಶ ಕೃಷ್ಣನ್ನ ಮರಿಸಿ ಕೆಡಿಸುವಂಥ ಅ.ಪ.


ಸುಳ್ಳು ಹೇಳಲಿಬೇಕು ಕಳ್ಳನಾಗಲಿಬೇಕು

ಮೆಲ್ಲನೆ ಸವಿಮಾತು ಆಡಿನಟಿಸಬೇಕು

ಪುಲ್ಲನಾಭನ ಬಿಟ್ಟು ಹುಲ್ಲುಮಾನವನನ್ನು

ನಲ್ಲ ನೆಂದೆರಗುತ ಕಾಲ ಕಳಿಸುವಂಥ 1


ಗಡ್ಡ ಬೋಳಿಸಬೇಕು ದುಡ್ಡುಗಳಿಸಬೇಕು

ಬಡ್ಡಿಗೆ ಕೊಡಬೇಕು ದೊಡ್ಡ ಮನೆಯ ಕಟ್ಟಿ

ಅಡ್ಡಿಯಿಲ್ಲದೆ ಮೆರೆದು ದೊಡ್ಡವನಾಗಬೇಕು

ಹೆಡ್ಡಮಂದಿಯಲಿರಿಸಿ ಗೊಡ್ಡು ದೇಹವ ಮಾಳ್ವ 2


ಸತಿಸುತ ಧನಗಳನೆ ಗತಿ ದೈವನೆನಬೇಕು

ಹಿತದಿಂದ ದುಡಿಯುತ ಸತಿಯರಿಗಿಡಬೇಕು

ಗತಿದಾಯಕ ನಮ್ಮ “ಶ್ರೀ ಕೃಷ್ಣವಿಠಲ”ನ್ನ

ಶಾಸ್ತ್ರನೇತ್ರದಿ ನೋಡೆ ಪುರಸೊತ್ತು ಕೊಡದಂಥ 3

***