Showing posts with label ಪಾಲಿಸೋ ಪಾರ್ವತಿ ರಮಣಾ ನಿನ್ನಪಾಲಿಗೆ ಬಂದೆನೊ ಪಾಲಿಸೆನ್ನದೆ gopati vittala. Show all posts
Showing posts with label ಪಾಲಿಸೋ ಪಾರ್ವತಿ ರಮಣಾ ನಿನ್ನಪಾಲಿಗೆ ಬಂದೆನೊ ಪಾಲಿಸೆನ್ನದೆ gopati vittala. Show all posts

Thursday, 5 August 2021

ಪಾಲಿಸೋ ಪಾರ್ವತಿ ರಮಣಾ ನಿನ್ನಪಾಲಿಗೆ ಬಂದೆನೊ ಪಾಲಿಸೆನ್ನದೆ ankita gopati vittala

    ..

ರುದ್ರದೇವರು

ಪಾಲಿಸೊ ಪಾರ್ವತಿ ರಮಣಾ ನಿನ್ನಪಾಲಿಗೆ ಬಂದೆನೊ ಪಾಲಿಸೆನ್ನದೆ ಪ


ವೇದವೇದಾಂತ ಪುರಾಣಗಳೆಲ್ಲನೀದಯಾಳುವೆಂದು ಪೊಗಳುತಿರೆಹಾದಿಬೀದಿ ದೇವತೆಗಳಿಗೆರಗಿ ನಾಖೇದಬಟ್ಟು ನಿನ್ನ ಮೊರೆ ಹೊಕ್ಕೆ ಮಹದೇವ 1

ತುಂಗಾ ಕುಮದ್ವತಿ ಸಂಗಮೇಶ್ವರ ನಿನ್ನಕಂಗಳಿಂದಲಿ ನೋಡೂ ಕರುಣದಿಂದಕಂಗೆಟ್ಟು ಕಳವಳಿಸುತಿರೆ ನೀ ನೋಡಿಭಂಗಪಡಿಸಿದರೇನು ಭಾಗ್ಯವು ಬರುವದು 2

ಆಪತ್ತು ಕಳೆದು ಸಂಪತ್ತು ನೀಡಿ ನಿನ್ನರೂಪವ ತೋರಿಸೋ ತ್ವರಿತದಲಿಗೋಪತಿಕೃಷ್ಣವಿಠಲನೆಲ್ಲ ಲೋಕವವ್ಯಾಪಿಸಿರಲು ಸಂದೇಹ ವ್ಯಾತಕಯ್ಯಾ 3

****