Showing posts with label ಉತ್ತಮೋತ್ತಮ ದೇವ ನೀನಿರಲಿಕ್ಕೆ mahipati. Show all posts
Showing posts with label ಉತ್ತಮೋತ್ತಮ ದೇವ ನೀನಿರಲಿಕ್ಕೆ mahipati. Show all posts

Thursday, 12 December 2019

ಉತ್ತಮೋತ್ತಮ ದೇವ ನೀನಿರಲಿಕ್ಕೆ ankita mahipati

ಬಾಗೇಶ್ರೀ ರಾಗ ಝಂಪೆತಾಳ

ಉತ್ತಮೋತ್ತಮ ದೇವ ನೀನಿರಲಿಕ್ಕೆ
ಮತ್ತೆ ಅನ್ಯದೇವನಾರಿಸಲೇತಕೆ ||ಧ್ರುವ||

ಸತ್ಯಸನಾತನನೆಂದು ಶ್ರುತಿ ಸಾರುತಿರಲಿಕ್ಕೆ
ಚಿತ್ತ ಚಂಚಲವಾಗುವ ಸಂದೇಹವ್ಯಾತಕೆ
ಎತ್ತ ನೋಡಿದರತ್ತ ಪ್ರತ್ಯಕ್ಷ ನೀದೋರಲಿಕ್ಕೆ
ಮತ್ತೆ ಆಹ್ವಾನ ವಿಸರ್ಜನವೇತಕೆ ||೧||

ವಾಸವಾಗಿ ಎನ್ನಾತ್ಮದೊಳು ನೀನೆ ಇರಲಿಕ್ಕೆ
ದೇಶದೇಶವನೆ ಶೋಧಿಸುವದೇತಕೆ
ವಾಸುದೇವನೆ ನೀನೆ ಎನ್ನ ಈಶನಾಗಿರಲಿಕ್ಕೆ
ಸೋಸಿಲನೇಕ ವೇಷದೋರುವದೇತಕೆ ||೨||

ಭಾನುಕೋಟಿತೇಜ ಎನ್ನೊಡೆಯನಾಗಿರಲಿಕ್ಕೆ
ಬಿನುಗುದೈವದ್ಹಂಗು ತಾ ಇನ್ನೊಂದೇತಕೆ
ಮನದ ಮಂಗಳಾಗಿ ನೀ ಮಹಿಪತಿಗೆ ಭಾಸುತಿರಲಿಕ್ಕೆ
ಅನುಭವಕೆ ಅನುಮಾನಬಡುವದೇತಕೆ ||೩||
****

ಉತ್ತಮೋತ್ತಮ ದೈವ ನಿತ್ಯನೀನಾಗಿರಲಿಕ್ಕೆ ಮತ್ತೆ ಅನ್ಯ ದೈವನಾರಿಸಲ್ಯಾತಕೆ P

ಸತ್ಯಸನಾತನನೆಂದು ಶ್ರುತಿಸಾರುತಿರಲಿಕ್ಕೆ ಎತ್ತ ನೋಡಿದರತ್ತ ಪ್ರತ್ಯಕ್ಷ ನೀ ದೋರಲಿಕ್ಕೆ ಮತ್ತೆ ಆವ್ಹಾನ ವಿಸರ್ಜನವ್ಯಾತಕೆ 1 
ವಾಸವಾಗಿ ಎನ್ನಾತ್ಮದೊಳು ನೀನೆ ಇರಲಿಕ್ಕೆ ವಾಸುವೇವನೆ ನೀನೆ ಎನ್ನ ಈಶನಾಗಿರಲಿಕ್ಕೆ ಸೋಶಿಲೆ ಅನೇಕ ವೇಷ ದೋರುವದ್ಯಾತಕೆ 2 
ಭಾನುಕೋಟಿತೇಜ ಎನ್ನೊಡಿಯನಾಗಿರಲಿಕ್ಕೆ ಬಿನುಗುದೈವದ್ಹಂಗು ತಾಇನ್ನೊಂದು ಯಾತಕೆ ಮನದ ಮಂಗಳಾಗಿ ನೀ ಮಹಿಪತಿಗೆ ಭಾಸುತಿರಲಿಕ್ಕೆ ಅನುಭವಕ್ಕನುಮಾನ ಮಾಡುವುದ್ಯಾತಕೆ3
***