RSS song
ದೇಶ ದೇಶ ದೇಶ ದೇಶ ದೇಶ ನನ್ನದು
ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು ||ಪ||
ಹರಿಹರಿಯುವ ನೀರಕಣ ಮೇಲ್ನಗುವ ಬಾನಂಗಣ
ಹಸಿರಾಗಿಹ ಮಣ್ಣಕಣ ಹಾರಾಡುವ ಹಕ್ಕಿಗಣ
ಹೊಳೆಹೊಳೆಯುವ ಚುಕ್ಕಿಗಣ ಎಲ್ಲ ನನ್ನದು
ಎಲ್ಲ ನನ್ನದು, ಎಲ್ಲ ನನ್ನದು ||೧||
ನಗೆ ಚೆಲ್ಲುವ ಮಲ್ಲಿಗೆಯ ಹೂದಳವು ನನ್ನದು
ಬಗೆಬಗೆಯ ತೆಂಗುಬಾಳೆ ಕಡಲಾಗಿಹ ಕಾಡಹೊಳೆ
ಬೆಳೆದು ನಿಂತ ವನಸಿರಿಯು, ಕಂಗೊಳಿಪ ಬೃಂದಾವನ
ಎಲ್ಲ ನನ್ನದು, ಎಲ್ಲ ನನ್ನದು ||೨||
ನರಹರಿಯ ಪಾಂಚಜನ್ಯ, ವಾಲ್ಮೀಕಿ ರಾಮಾಯಣ
ವೇದಗಳ ಉದ್ಘೋಷ ಮಂತ್ರ ತಂತ್ರ ಆವಾಸ
ಕಿವಿಯ ಮೊರೆವ ಮೇಘದೂತ ಕರುಳ ಕೊರೆವ ಕುರುಕ್ಷೇತ್ರ
ಎಲ್ಲ ನನ್ನದು, ಎಲ್ಲ ನನ್ನದು ||೩||
ವ್ಯಾಸ ಭಾಸ ಕಾಳಿದಾಸ ಬುದ್ಧ ಬಸವ ಕನಕದಾಸ
ರಾಮಕೃಷ್ಣ ಪರಮಹಂಸ ಮಧುಕೇಶವ ನೀಲಹಂಸ
ತಾಯಿ ಮಡಿಲ ಮುಗುಳುನಗೆ ಕೋಟಿ ತುಟಿಯ ಮಂದಹಾಸ
ಎಲ್ಲ ನನ್ನದು, ಎಲ್ಲ ನನ್ನದು ||೪||
***
dESa dESa dESa dESa dESa nannadu
siMdhu kaNive kailAsa giriyu nannadu ||pa||
harihariyuva nIrakaNa mElnaguva bAnaMgaNa
hasirAgiha maNNakaNa hArADuva hakkigaNa
hoLehoLeyuva cukkigaNa ella nannadu
ella nannadu, ella nannadu ||1||
nage celluva malligeya hUdaLavu nannadu
bagebageya teMgubALe kaDalAgiha kADahoLe
beLedu niMta vanasiriyu, kaMgoLipa bRuMdAvana
ella nannadu, ella nannadu ||2||
narahariya pAMcajanya, vAlmIki rAmAyaNa
vEdagaLa udGOSha maMtrataMtra AvAsa
kiviya moreva mEGadUta karuLa koreva kurukShEtra
ella nannadu, ella nannadu ||3||
vyAsa BAsa kALidAsa buddha basava kanakadAsa
rAmakRuShNa paramahaMsa madhukESava nIlahaMsa
tAyi maDila muguLunage kOTi tuTiya maMdahAsa
ella nannadu, ella nannadu ||4|
***
ದೇಶ ದೇಶ ದೇಶ ದೇಶ ದೇಶ ನನ್ನದು
ಸಿಂಧು ಕಣಿವೆ ಕೈಲಾಸ ಗಿರಿಯು ನನ್ನದು || ಪ ||
ಹರಿಹರಿಯುವ ನೀರಕಣ ಮೇಲ್ನಗುವ ಬಾನಂಗಣ
ಹಸಿರಾಗಿಹ ಮಣ್ಣಕಣ ಹಾರಾಡುವ ಹಕ್ಕಿಗಣ
ಹೊಳೆಹೊಳೆಯುವ ಚುಕ್ಕಿಗಣ ಎಲ್ಲ ನನ್ನದು
ಎಲ್ಲ ನನ್ನದು, ಎಲ್ಲ ನನ್ನದು || ೧ ||
ನಗೆ ಚೆಲ್ಲುವ ಮಲ್ಲಿಗೆಯ ಹೂದಳವು ನನ್ನದು
ಬಗೆಬಗೆಯ ತೆಂಗುಬಾಳೆ ಕಡಲಾಗಿಹ ಕಾಡಹೊಳೆ
ಬೆಳೆದು ನಿಂತ ವನಸಿರಿಯು, ಕಂಗೊಳಿಪ ಬೃಂದಾವನ
ಎಲ್ಲ ನನ್ನದು, ಎಲ್ಲ ನನ್ನದು || ೨ ||
ನರಹರಿಯ ಪಾಂಚಜನ್ಯ ವಾಲ್ಮೀಕಿಯ ರಾಮಾಯಣ
ವೇದಗಳ ಉದ್ಘೋಷ ಮಂತ್ರತAತ್ರ ಆವಾಸ
ಕಿವಿಯ ಮೊರೆವ ಮೇಘದೂತ ಕರುಳ ಕೊರೆವ ಕುರುಕ್ಷೇತ್ರ
ಎಲ್ಲ ನನ್ನದು, ಎಲ್ಲ ನನ್ನದು || ೩ ||
ವ್ಯಾಸ ಭಾಸ ಕಾಳಿದಾಸ ಬುದ್ಧ ಬಸವ ಕನಕದಾಸ
ರಾಮಕೃಷ್ಣ ಪರಮಹಂಸ ಮಧುಕೇಶವ ನೀಲಹಂಸ
ತಾಯಿ ಮಡಿಲ ಮುಗುಳುನಗೆ ಕೋಟಿ ತುಟಿಯ ಮಂದಹಾಸ
***