ಕಾಖಂಡಕಿ ಶ್ರೀ ಕೃಷ್ಣದಾಸರು
ಕೇಳಿರೋ ಕೇಳಿರೋ ಆನಂದ ನುಡಿಗಳ | ಜಾಳಿಲಿ ದೋಷವ ಹರಿನಾಮ ನೆನೆಯುತ | ಕೇಳಿ ಕೇಳಿ ಕೇಳಿ ಕೇಳಿ ಪ
ಯುಗದಂತಿಲಿ ಸರ್ವ ಮತವೆಲ್ಲ ಕೆಡಲಾಗಿ | ಜಗದೋದ್ಧಾರ ಜಗದೀಶ ಬರು ತಾನೆ 1
ಸ್ವ ಶಕ್ತಿ ಕುದುರೆಯ ನೇರಿ ರಾವುತನಾಗಿ | ಅಸಮ ಪೊನ್ನೀಟೆಯ ಹಿಡಕೊಂಡು ಬರುತಾನೆ2
ನಾಕು ವೇದಗಳೆಂಬಾ ಕುದುರೆಯ ಕಾಲವು | ಬೇಕಾದ ಅವಯವ ಆರು ಶಾಸ್ತ್ರಗಳಿವೆ3
ಮೂರು ಪೌರಾಣ ಶೃಂಗಾರಾಭರಣವು | ಶರಣವತ್ಸಲನೆಂಬ ಕಡಿವಾಣ ಕುದುರೆಗೆ4
ಬೋಧ ಹಕ್ಕರಿಕೆಯು | ಭಾವಿಸೆ ಭೂ ಭಾಗವೆಂಬುದು ಪಾವುಡವು5
ಈ ಪರಿಯಿಂದಲಿ ಭೋರ್ಗರೆವುತ ಬರೆ | ತಾಪವಡಗಿ ಸುಖ ತಂಗಾಳಿ ಬಂದೀತು 6
ತಾಯಿಯ ಧ್ವನಿ ಕೇಳಿ ಮಕ್ಕಳು ಬಹುಪರಿ | ಬಾಯ ದೆರವುತಲಿ ಜನಜಡಿ ಬಹುದು7
ಅವರಿ-ಗಭಯ ಕೊಟ್ಟು ಅಧರ್ಮವೇ ಕಿತ್ತಿ ಯವನರ ಹಂತಿಯ ಕಟ್ಟಿ ತಾ ತುಳಿಸುವ 8
ಹೊಟ್ಟವ ಹಾರಿಸಿ ಘಟ್ಟಿ ತಾ ಉಳಹುವ | ಸೃಷ್ಟಿಲಿ ಧರ್ಮ ಸಂ-ಸ್ಥಾಪನೆ ಮಾಡುವಾ 9
ಮೊದಲಂತೆ ಜಗವನು ಸುಖದಲಿ ಇಡುವನು | ಮುದದಿಂದ ಸಾರಿದ ಗುರುವರ ಮಹಿಪತಿ 10
***