Showing posts with label ಎಂದಿಗಾದರು ಒಮ್ಮೆ ಕೊಡು ಕಂಡ್ಯ ಹರಿಯೆ shree krishna. Show all posts
Showing posts with label ಎಂದಿಗಾದರು ಒಮ್ಮೆ ಕೊಡು ಕಂಡ್ಯ ಹರಿಯೆ shree krishna. Show all posts

Wednesday, 1 September 2021

ಎಂದಿಗಾದರು ಒಮ್ಮೆ ಕೊಡು ಕಂಡ್ಯ ಹರಿಯೆ ankita shree krishna

 ..

ಎಂದಿಗಾದರು ಒಮ್ಮೆ ಕೊಡು ಕಂಡ್ಯ ಹರಿಯೆ ಪ


ಬೃಂದಾವನಪತಿ ದಯದಿಂದಲೆನಗೆ ಅ


ಫಲಭಾರಗಳಿಂದ ತಲೆವಾಗಿ ಶುಕಪಿಕಕಲಕಲದೊಳು ನಿನ್ನ ತುತಿಸಿ ತುಂಬೆಗಳಗಳರವದಿಂ ಪಾಡಿ ಅಪ್ಸರರಂತೆ ಪೂ-ಮಳೆಯಗರೆವ ತರುಲತೆಯ ಜನ್ಮವನು1


ಕೊಳಲ ಶೃತಿಯ ಕೇಳಿ ಸುಖದ ಸಂಭ್ರಮದಲಿಹೊಲಬು ತಪ್ಪಿ ತಾವು ಅರೆಗಣ್ಣು ಮುಚ್ಚಿನಳಿನಾಸನದಿ ಮೌನಗೊಂಡು ಪರಮ ಹಂಸಕುಲದಂತೆ ಧ್ಯಾನಿಪ ಹಂಸ ಜನ್ಮವನು 2


ನಖಗಳೆಂಬ ಸಂತತ ಪೂರ್ಣಚಂದ್ರನ್ನಅಕಳಂಕ ನವ ಚಂದ್ರಿಕೆಯನ್ನು ಸವಿದುಸುಖದ ಸುಗ್ಗಿಗಳಲ್ಲಿ ಸೊಕ್ಕಿ ಯೋಗಿಗಳಂತೆಅಖಿಳವ ಮರೆದ ಚಕೋರ ಜನ್ಮವನು3


ಭಾವಜನೈಯನ ಕಡುಚಲ್ವಿಕೆಯನ್ನುಭಾವಿಸಿ ನಿಡುಗಂಗಳಿಂದ ದಣಿದುಂಡುಗೋವಳೇರಂತೆ ಮನೆ ಮಕ್ಕಳ ಹಿಂಗಿ ನಿನ್ನ ಆವಾಗ ಈಕ್ಷಿಸುವ ಗೋವ್ಗಳ ಜನ್ಮವನ್ನು 4


ತೋಳದಂಡಿಗೆಮಾಡಿ ಹೀಲಿಯ ಚಾಮರವಮೇಲೆ ಎತ್ತಿದ ತಾವರೆ ಗೊಂಡೆಯಿಂದಓಲೈಸಿ ನಿನ್ನನು ಒಲಿಸಿ ಮುಕುತರಂತೆನಾಲೋಕ್ಯ ಸುಖವುಂಬ ಗೋಪರ ಜನ್ಮವನು5


ಕೊಳಲ ಧ್ವನಿಯ ಕೇಳಿ ಎದುರುಗೊಳ್ಳುತ ನಿನ್ನನಳಿನನಾಭಾ ಅವಧಾರೆಂದು ಪೊಗಳೇತಳಿಗೆ ಆರತಿಯೆತ್ತಿ ಲಕ್ಷ್ಮಿಯಂತೆ ನಿನ್ನಚೆಲುವ ಸವಿವಂಥ ಗೋಪೇರ ಜನ್ಮವನು 6


ಇಂದಿರೆಯರಸ ಬ್ರಹ್ಮೇಂದ್ರಾದಿ ವಂದಿತಎಂದು ಮೊಸರ ಕಡೆಯುತ್ತಲಿ ನಿನ್ನಅಂದಿನ ಶ್ರುತಿಯೋ ಉಪ್ಪವಡಿಪ ವ್ರಜ-ದಿಂದುಮುಖಿಯರ ಜನ್ಮವ ಸಿರಿಕೃಷ್ಣ7

***