Showing posts with label ಮನ್ನಿಸೆನ್ನ ಮನ್ಮಥಜನಕ ಮಧು ಸೂ-ದನ್ನ ಮಂದರೋದ್ಧಾರ shree krishna. Show all posts
Showing posts with label ಮನ್ನಿಸೆನ್ನ ಮನ್ಮಥಜನಕ ಮಧು ಸೂ-ದನ್ನ ಮಂದರೋದ್ಧಾರ shree krishna. Show all posts

Wednesday, 1 September 2021

ಮನ್ನಿಸೆನ್ನ ಮನ್ಮಥಜನಕ ಮಧು ಸೂ-ದನ್ನ ಮಂದರೋದ್ಧಾರ ankita shree krishna

 ..

ಮನ್ನಿಸೆನ್ನ ಮನ್ಮಥಜನಕ ಮಧು ಸೂ-ದನ್ನ ಮಂದರೋದ್ಧಾರ 


ನಿನ್ನ ನಂಬಿದೆ ನಿರಂತರದಿ ನೀನಿಹಪರದಲಿ ಕಾಯಯ್ಯ ಅ


ಶ್ರೀರಂಗ ಖಗ ತುರಂಗ ಜಗದಂತÀರಂಗವಿಧಿ ಕುರಂಗಧರ ನಮಿತ ಸಾರಂಗಪರಿಪಾಲ ಸುಗುಣಜಾಲ ಲಕುಮಿಲೋಲಕೃಪಾರಸತರಾಂಗಿತಾಪಾಂಗ ದುರಿತಭಂಗಧsÀೃತರಥಾಂಗ ಶುಭಾಂಗ 1


ಕಾರುಣ್ಯನಿಧಿ ಶರಣ್ಯವತ್ಸಲ ಲೋಕಶರಣ್ಯ ದೇವವರಣ್ಯ ಘನಶ್ಯಾಮ ಚರಣ ಕಮಲಕ್ಕೆ ಶರಣು ಹೊಕ್ಕೆ ತಾಮಸವ್ಯಾಕೆಸಲಹೊ ಶ್ರೀಧರ ಯದುವೀರ ದುರಿತದೂರವೇದಸಾರ ಗಂಭೀರ 2


ಸನಂದನಾದಿ ಮುನಿಪ್ರಿಯ ಸಚ್ಚಿದಾನಂದನಂದತನಯ ಏನೆಂದು ಪೇಳ್ವೆ ನಿನ್ನ ಮಾಯಾಮರೆಯಲರಿಯೆ ಯುಧಿಷ್ಠಿರ ಧನಂಜಯಸಹಾಯ ಶ್ರೀಕೃಷ್ಣರಾಯ ಸಹೃದಯಗೇಯ ನಮೋ ನಮೋ ಜೀಯ3

***