ಆವ ಸುಕೃತವುಈ ನಾರಿಯರು ಈಪರಿ ಸುಖಿಸುವುದು ಪ.
ಪಂಕಜನಾಭಗೆ ಶಂಖೋದಕವೆತ್ತಿಅಂಕದಲ್ಲಿಹೊ ಲಕುಮಿಯಅಂಕದಲ್ಲಿಹೊ ಲಕುಮಿಯ ನಲ್ಲಗೆಅಸಂಖ್ಯಸ್ತೋತ್ರವನೆ ಸ್ತುತಿ ಸೋರು 1
ದುರ್ಗಾದೇವಿಯ ರಮಣ ಭಾರ್ಗವಿರಾಮಗೆಶೀಘ್ರದಿ ಕೊಟ್ಟು ಕವಳವಶೀಘ್ರದಿ ಕೊಟ್ಟು ಕವಳವ ಗೋಗ್ರಾಸವಸ್ವರ್ಧುನಿ ಜನಕ ಕುಳಿತಾನೆ 2
ರಂಗವಲ್ಲಿ ಹಾಕಿದ ಶೃಂಗಾರದ ಮನೆಯೊಳು ಬಂಗಾರದ ಮಣಿಯ ಹರಿವಾಣಬಂಗಾರದ ಮಣಿಯ ಹರಿವಾಣ ಇದ್ದಲ್ಲೆರಂಗಯ್ಯ ಬಂದು ಕುಳಿತಾನೆ 3
ವೀತದೋಷನ ಮುಂದೆ ಮಾತಿನಮಧುರೆಯರು ಜಾತಿ ಮಾಣಿಕದ ಸಮೆಜಾತಿ ಮಾಣಿಕದ ಸಮೆ ತಂದಿಟ್ಟುಜ್ಯೋತಿಗಳ ಹಚ್ಚಿ ಎಡಬಲ 4
ಮಂದಗಮನೆಯರೆಲ್ಲ ಮಿಂದು ಮಡಿಯನುಟ್ಟುಇಂದಿರಾಪತಿಯ ಎಲೆಯಲಿಇಂದಿರಾಪತಿಯ ಎಲೆಯಲಿ ಬಡಿಸೋರುಕುಂದದೆ ಕೊಟ್ಟ ಸೌಭಾಗ್ಯ5
ಬಂದ ಜನರೆಲ್ಲ ಮಿಂದು ಮಡಿಯನುಟ್ಟುಇಂದಿರಾಪತಿಯ ಜೊತೆಯಾಗಿಇಂದಿರಾಪತಿಯ ಜೊತೆಯಾಗಿ ಊಟಕ್ಕೆಬಂದು ಕುಳಿತವರು ಕಡೆಯಿಲ್ಲ 6
ಉಪ್ಪು ಉಪ್ಪಿನಕಾಯಿ ಹಪ್ಪಳ ಸಂಡಿಗೆಒಪ್ಪುವ ಬುತ್ತಿ ಕಲಸನ್ನಒಪ್ಪುವ ಬುತ್ತಿ ಕಲಸನ್ನ ಬಡಿಸೋರುಸುಪ್ಪಾಣಿ ಮುತ್ತು ಉದುರುತ7
ಹೊನ್ನಹರಿವಾಣದಿ ಅನ್ನಭಕ್ಷ್ಯವ ತುಂಬಿಚೆನ್ನರಾಮೇಶನ ಎಡೆಯೊಳುಚೆನ್ನರಾಮೇಶನ ಎಡೆಯೊಳು ಬಡಿಸೋರುರನ್ನ ಮುತ್ತುಗಳು ಉದುರುತ8
****