ಜೋ ಜೋ ಜೋ ಶ್ರೀ ರಾಘವೇಂದ್ರರ ಜೋಗುಳ ಪದ
ಜೋ ಜೋಜೋ ಜೋ ಜೋ ಜೋ
ಗುರು ರಾಘವೇಂದ್ರಾಜೋ ಜೋ
ಶುಭಗುಣಸಾಂದ್ರ ಯತೀಂದ್ರಾ ಪ
ನರಹರಿಯೊಲಿಸಿದ ಬಾಲ ಪ್ರಲ್ಹಾದಸಿರಿಕೃಷ್ಣನರ್ಚಕ
ವ್ಯಾಸ ಯತೀಂದ್ರ ಜೋ ಜೋ 1
ಗುರು ಮಧ್ವಮತವನುದ್ಧರಿಸಿದ ಮಹಿಮಾಸಿರಿ
ರಾಮ ಸೇವಕ ಗುರು ಸಾರ್ವಭೌಮ ಜೋ ಜೋ 2
ತಂದೆ ಸಿರಿವಿಠಲನ ಆಜ್ಞೆಯಿಂ ಬಂದೂನಿಂದೆ
ವೃಂದಾವನದಿ ನಿಜ ಭಕ್ತ ಬಂಧು ಜೋ ಜೋ 3
***************