Showing posts with label ಜಯ ಮಂಗಳಂ ನಿತ್ಯ ಶುಭ ಮಂಗಳಂ ವೈಕುಂಠವಾಸನಿಗೆ ವಾಣೀಶಗ್ವಲಿದವಗೆ hayavadana. Show all posts
Showing posts with label ಜಯ ಮಂಗಳಂ ನಿತ್ಯ ಶುಭ ಮಂಗಳಂ ವೈಕುಂಠವಾಸನಿಗೆ ವಾಣೀಶಗ್ವಲಿದವಗೆ hayavadana. Show all posts

Wednesday, 1 September 2021

ಜಯ ಮಂಗಳಂ ನಿತ್ಯ ಶುಭ ಮಂಗಳಂ ವೈಕುಂಠವಾಸನಿಗೆ ವಾಣೀಶಗ್ವಲಿದವಗೆ ankita hayavadana

 ..


ಜಯ ಮಂಗಳಂ ನಿತ್ಯ ಶುಭ ಮಂಗಳಂ ಪ.


ವೈಕುಂಠವಾಸನಿಗೆ ವಾಣೀಶಗ್ವಲಿದವಗೆ


ಲೋಕದಲಿ ಪ್ರಹ್ಲಾದಗ್ವಲಿದ ಲಕ್ಷ್ಮೀಶಗೆ


ಪ್ರಾಕೃತದಲಿ ವಸುದೇವ ಪುತ್ರನೆಂದೆನಿಸಿ


ಜೋಕೇಲಿ ಗೋಕುಲಕೆ ಜಾರಿ ಬಂದವಗೆ 1


ಪುಟ್ಟ ಮಗುವಾದವಗೆ ಪೂತಣಿಯ ಕೆಡಹಿದಗೆ


ತೊಟ್ಟಿಲೊಳು ಮಲಗಿ ತೂಗಿಸಿಕೊಂಬಗೆ


ದುಷ್ಟ ಶಕಟನÀ ಮುರಿದು ತೃಣಾವರ್ತನೆಂಬ ದೈತ್ಯನ


ಮುಟ್ಟಿ ಪ್ರಾಣವ ತೆಗೆದ ಮುದ್ದುಕೃಷ್ಣನಿಗೆ 2


ಅಂಬೆಗಾಲಿಕ್ಕಿದಗೆ ಅಂಗಳದೊಳಾಡಿದಗೆ


ತುಂಬಿದಾ ಪಾಲುಗಳ ತಾನೆ ಸವಿದು


ಇಂಬಿಟ್ಟು ಬಾಲರಿಗೆ ಸವಿ ಇಕ್ಕಿ ಸವಿದವಗೆ


ಅಂಬುಜಾಕ್ಷ ನಮ್ಮ ಹಯವದನಗೆ 3

***