ಕೃತಿಕಾರರು-ಜಗನ್ನಾಥದಾಸರು
ರಾಗ - ಮೋಹನ (ಜೀವನಪುರಿ) ಅಟತಾಳ(ದೀಪಚಂದ)
ಶಂಭೋ ಸುರಗಂಗಾಧರನೆ ಪಾಲಿ-
ಸಂಬಾರಮಣ ಲಿಂಗ ||ಪ||
ನಂಬಿದವರಘ ಕಾದಂಬಿನಿಪವನ ಹೇ-
ರಂಬಜನಕ ಕರುಣಾಂಬುಧಿ ಗುರುವರ ||ಅ.ಪ||
ಇಳಿದೇರ ಇಂದುಮುಖ ಈಪ್ಸಿತ ಫಲ
ಸಲಿಸುವ ಘನತ್ರಿಶೂಲಿ
ಸಲೆ ನಂಬಿದೆನೋ ಹಾಲಾಹಲ ಕಂಠ , ಎನ್ನ ನೀ
ಸಲಹೋ ಸಂತತ ರೌಪ್ಯಾಚಲವಾಸ ವರ ಪಂಪಾ-
ನಿಲಯ ನಿರ್ಜರ ಸೇವಿತಾನಲ
ನಳಿನಸಖ ಸೋಮೇಕ್ಷಣನೆ ಬಾಂ-
ದಳ ಪುರಾಂತಕ ನಿಜ ಶರಣ ವ-
ತ್ಸಲ ವೃಷಾರೋಹಣ ವಿಬುಧವರ ||೧||
ಮಾರಾರಿ ಮಹದೇವ ನಿನ್ನಯ ಪಾದ
ವಾರಿಜ ದಳಯುಗ್ಮವ
ಸಾರಿದೆ ಸತತ ಸರೋರುಹೇಕ್ಷಣನ ಹೃ-
ದ್ವಾರಿಜದಲಿ ತೋರೋ ಗಾರು ಮಾಡದಲೆನ್ನ
ಆರುಮೊಗನಯ್ಯ ಅಮಿತಗುಣಗಣ
ವಾರಿನಿಧಿ ವಿಘತಾಘ ವ್ಯಾಳಾ
ಗಾರವಿತ್ತ ಪವಿತ್ರ ಸುಭಗ ಶ-
ರೀರ ದುರಿತಾರಣ್ಯ ಪಾವಕ ||೨||
ಧೃತ ಡಮರುಗ ಸಾರಂಗ ನಿನ್ನಯ ಪಾದ
ಶತಪತ್ರಾರ್ಚಿಪರ ಸಂಗ
ಸತತ ಪಾಲಿಸೊ ಜಗನ್ನಾಥವಿಠಲನ ಸಂ-
ಸ್ತುತಿಸುವ ನೆರೆಧೀರ ಕ್ಷಿತಿಧರ ಧೃತಧನ್ವಿ
ಶತಮುಖನ ಜೈಸಿದನ ಪುತ್ರನ
ಪಿತನ ಜನಕನ ಕೈಲಿ ಕೊಲಿಸಿದೆ
ಅತುಳಭುಜಬಲ ಭೂತಪತಿ ಪಾ-
ರ್ವತಿ ಮುಖಾಬ್ಜೋದಯ ದಿವಾಕರ||೩||
***
ರಾಗ - ಮೋಹನ (ಜೀವನಪುರಿ) ಅಟತಾಳ(ದೀಪಚಂದ)
ಶಂಭೋ ಸುರಗಂಗಾಧರನೆ ಪಾಲಿ-
ಸಂಬಾರಮಣ ಲಿಂಗ ||ಪ||
ನಂಬಿದವರಘ ಕಾದಂಬಿನಿಪವನ ಹೇ-
ರಂಬಜನಕ ಕರುಣಾಂಬುಧಿ ಗುರುವರ ||ಅ.ಪ||
ಇಳಿದೇರ ಇಂದುಮುಖ ಈಪ್ಸಿತ ಫಲ
ಸಲಿಸುವ ಘನತ್ರಿಶೂಲಿ
ಸಲೆ ನಂಬಿದೆನೋ ಹಾಲಾಹಲ ಕಂಠ , ಎನ್ನ ನೀ
ಸಲಹೋ ಸಂತತ ರೌಪ್ಯಾಚಲವಾಸ ವರ ಪಂಪಾ-
ನಿಲಯ ನಿರ್ಜರ ಸೇವಿತಾನಲ
ನಳಿನಸಖ ಸೋಮೇಕ್ಷಣನೆ ಬಾಂ-
ದಳ ಪುರಾಂತಕ ನಿಜ ಶರಣ ವ-
ತ್ಸಲ ವೃಷಾರೋಹಣ ವಿಬುಧವರ ||೧||
ಮಾರಾರಿ ಮಹದೇವ ನಿನ್ನಯ ಪಾದ
ವಾರಿಜ ದಳಯುಗ್ಮವ
ಸಾರಿದೆ ಸತತ ಸರೋರುಹೇಕ್ಷಣನ ಹೃ-
ದ್ವಾರಿಜದಲಿ ತೋರೋ ಗಾರು ಮಾಡದಲೆನ್ನ
ಆರುಮೊಗನಯ್ಯ ಅಮಿತಗುಣಗಣ
ವಾರಿನಿಧಿ ವಿಘತಾಘ ವ್ಯಾಳಾ
ಗಾರವಿತ್ತ ಪವಿತ್ರ ಸುಭಗ ಶ-
ರೀರ ದುರಿತಾರಣ್ಯ ಪಾವಕ ||೨||
ಧೃತ ಡಮರುಗ ಸಾರಂಗ ನಿನ್ನಯ ಪಾದ
ಶತಪತ್ರಾರ್ಚಿಪರ ಸಂಗ
ಸತತ ಪಾಲಿಸೊ ಜಗನ್ನಾಥವಿಠಲನ ಸಂ-
ಸ್ತುತಿಸುವ ನೆರೆಧೀರ ಕ್ಷಿತಿಧರ ಧೃತಧನ್ವಿ
ಶತಮುಖನ ಜೈಸಿದನ ಪುತ್ರನ
ಪಿತನ ಜನಕನ ಕೈಲಿ ಕೊಲಿಸಿದೆ
ಅತುಳಭುಜಬಲ ಭೂತಪತಿ ಪಾ-
ರ್ವತಿ ಮುಖಾಬ್ಜೋದಯ ದಿವಾಕರ||೩||
***
pallavi
shambhO suragangAdharana pAlaisambA ramaNanne linga
anupallavi
nambidavaragha kAdambini pavana hEramba janaka karuNAmbudhi guruvara
caraNam 1
eLidEra indumauLi Ipsita phala salisuva ghana trishUlI sale nambidenO hAlAhala
kaNtha enna nI salahO satata raupyAcalavAsa vara pampAnilaya nirjara sEvitAnala naLina
sakha sOmEkSaNanE bAndaLa purAntaka nija sharaNa vatsala vrSArOhaNa vibudhavara
caraNam 2
mArAri mahadEva ninnaya pAda vArijadaLa yugmava sAride satata sarOruhEkSaNana
hrdvArijadali tOrO gAru mADadalenna Aru moganayya amita guNagaNa vArinidhi vigatAgha
vyALA gAravitta pavitra shubhaga sharIra duritAraNya pAvaka
caraNam 3
dhrata Damaruga sAranga ninnaya pAda shata patrArtipara sanga satata pAlisu
jagannAtha viThalana samstutisuva nere dhIra kSitidhara dhrata dhanvi shata mukhana
jeyisidana putrana pitana janakana kaili koLiside atuLa bhujabala bhUtapati pArvati
mukhAbhjOdara divAkara
***
ಶಂಭೋ ಸುರಗಂಗಾಧರನೆ ಪಾಲಿಸಂಬಾರಮಣ ಲಿಂಗ ||pa||
ರಂಭ ಜನಕ ಕರುಣಾಂಬುಧಿ ಗುರುವರ ||a.pa||
ಮುರಾರಿ ಮಹದೇವ ನಿನ್ನಯ ಪಾದ
ವಾರಿಜದಳಯುಗವ
ಸಾರಿದೆ ಸತತ ಸರೋರುಹೇಕ್ಷಣ ಹೃ
ದ್ವಾರಿಜದೊಳು ತೋರು ಗಾರುಮಾಡದಲೆನ್ನ
ಅಮಿತ ಗುಣಗುಣ
ವಾರಿನಿಧಿ ವಿಗತಾಘ ವ್ಯಾಳಾ
ಗಾರ ವಿತ್ತಪ ಮಿತ್ರ ಸುಭಗ ಶ
ಪಾವಕ ||1||
ಇಂದು ಮೌಳೀ ಈಪ್ಸಿತಫಲ
ಸಲಿಸುವ ಘನತ್ರಿಶೂಲೀ
ಸಲೆ ನಂಬಿದೆನೊ ಹಾಲಾ ಹಲಕಂಠ ಎನ್ನ ನೀ
ಸಲಹೋ ಸಂತತ ರೌಪ್ಯಾಚಲವಾಸ ವರಪಂಪಾ
ನಿರ್ಜರ ಸೇವಿತಾನಲ
ನಳಿನಸಖ ಸೋಮೇಕ್ಷಣನೆ ಬಾಂ
ದಳಪುರಾಂತಕ ನಿಜಶರಣವ
ತ್ಸಲ ವೃಷಾರೋಹಣ ವಿಬುಧವರ ||2||
ದೃತಡಮರುಗ ಸಾರಂಗ ನಿನ್ನಯಪಾದ
ಶತಪತ್ರಾರ್ಚಿಪರ ಸಂಗ
ಸತತ ಪಾಲಿಸೊ ಜಗನ್ನಾಥ ವಿಠ್ಠಲನ ಸ
ನ್ನುತಿಸುವ ನೆರೆಧೀರ ಕ್ಷಿತಿಧರ ಧೃತಧನ್ವಿ
ಶತಮಖನ ಜೈಸಿದನ ಪುತ್ರನ
ಪಿತನ ಜನಕನ ಕೈಲಿ ಕೊಲಿಸಿದೆ
ಅತುಳ ಭುಜಜಲ ಭೂತಪಡೆ ಪಾ
ವನತಿ ಮುಖಾಂಭೋರುಹ ದಿವಾಕರ ||3||
*******
ಶಂಭೋ ಸುರಗಂಗಾಧರನೆ ಪಾಲಿಸಂಬಾರಮಣ ಲಿಂಗ ||pa||
ರಂಭ ಜನಕ ಕರುಣಾಂಬುಧಿ ಗುರುವರ ||a.pa||
ಮುರಾರಿ ಮಹದೇವ ನಿನ್ನಯ ಪಾದ
ವಾರಿಜದಳಯುಗವ
ಸಾರಿದೆ ಸತತ ಸರೋರುಹೇಕ್ಷಣ ಹೃ
ದ್ವಾರಿಜದೊಳು ತೋರು ಗಾರುಮಾಡದಲೆನ್ನ
ಅಮಿತ ಗುಣಗುಣ
ವಾರಿನಿಧಿ ವಿಗತಾಘ ವ್ಯಾಳಾ
ಗಾರ ವಿತ್ತಪ ಮಿತ್ರ ಸುಭಗ ಶ
ಪಾವಕ ||1||
ಇಂದು ಮೌಳೀ ಈಪ್ಸಿತಫಲ
ಸಲಿಸುವ ಘನತ್ರಿಶೂಲೀ
ಸಲೆ ನಂಬಿದೆನೊ ಹಾಲಾ ಹಲಕಂಠ ಎನ್ನ ನೀ
ಸಲಹೋ ಸಂತತ ರೌಪ್ಯಾಚಲವಾಸ ವರಪಂಪಾ
ನಿರ್ಜರ ಸೇವಿತಾನಲ
ನಳಿನಸಖ ಸೋಮೇಕ್ಷಣನೆ ಬಾಂ
ದಳಪುರಾಂತಕ ನಿಜಶರಣವ
ತ್ಸಲ ವೃಷಾರೋಹಣ ವಿಬುಧವರ ||2||
ದೃತಡಮರುಗ ಸಾರಂಗ ನಿನ್ನಯಪಾದ
ಶತಪತ್ರಾರ್ಚಿಪರ ಸಂಗ
ಸತತ ಪಾಲಿಸೊ ಜಗನ್ನಾಥ ವಿಠ್ಠಲನ ಸ
ನ್ನುತಿಸುವ ನೆರೆಧೀರ ಕ್ಷಿತಿಧರ ಧೃತಧನ್ವಿ
ಶತಮಖನ ಜೈಸಿದನ ಪುತ್ರನ
ಪಿತನ ಜನಕನ ಕೈಲಿ ಕೊಲಿಸಿದೆ
ಅತುಳ ಭುಜಜಲ ಭೂತಪಡೆ ಪಾ
ವನತಿ ಮುಖಾಂಭೋರುಹ ದಿವಾಕರ ||3||
*******