Showing posts with label ಮರುಗದೇ ನಿಂತಿಹುದೆ ಮನವು ನಿನ್ನಾಅರಿಯದಪರಾಧ ತಾನಳಿಸುತಿರಲೆನ್ನ vasudevarya. Show all posts
Showing posts with label ಮರುಗದೇ ನಿಂತಿಹುದೆ ಮನವು ನಿನ್ನಾಅರಿಯದಪರಾಧ ತಾನಳಿಸುತಿರಲೆನ್ನ vasudevarya. Show all posts

Friday, 6 August 2021

ಮರುಗದೇ ನಿಂತಿಹುದೆ ಮನವು ನಿನ್ನಾಅರಿಯದಪರಾಧ ತಾನಳಿಸುತಿರಲೆನ್ನ ankita vasudevarya

 ..

Kruti by ವೆಂಕಟದಾಸರು Venkatadasaru 


ಮರುಗದೇ ನಿಂತಿಹುದೆ ಮನವು ನಿನ್ನಾಅರಿಯದಪರಾಧ ತಾನಳಿಸುತಿರಲೆನ್ನ ಪ


ನೆರೆಯವರ ಮೈಸಿರಿಯ ನೋಡಿ 'ರಿಯರ ನಡೆಯಮರೆತು ಧನದಲಿ ಮತಿಯನಳಿದೆಯಾಕರಕೊಂಡು ನರತತಿಯ ಕೆಣಕಿುವರ ಸಹನೆಯಪರಿಪಾಕದಿಂ ನೋಡಿ ಬಂದ ಪೀಡನೆಯ 1


'ತವರೆಂಬಂತಿರುವ 'ಂಸೆಯನಾಳೋಚಿಸುತ ಜೊತೆಯೊಳಾರೋಗಿಸುತ ಜಾರಿ ನಿಲ್ಲುತಸತಿ ಸುತಾದ್ಯರ ಭೋಗಸಾಧನವ ಕೆಡಿಸುತ್ತಪತಿತರಿಂದರಸುತ್ತ ಪಿಡಿಸಲು[ಕಾ]ಯುತ 2


ಪಾದುಕಾರ್ಚನೆಯನ್ನು ಪಾಲಿಸಿದ ಬಗೆಯನುಬೋಧಿಸುತ ಚಿತ್ತವನು ಬೆದರಿಸುವದೆನೀ ದಯಾಸಾಗರನು ನೀಚರುಪಹತಿಯನುಸಾದರದಿ ಬಿಡಿಸಿನ್ನು ಸಾಕು ಮುನಿಸನು 3


ಕಾಲ ದೇಶವ ಕಂಡು ಕಾಪಥವ ಕೈಕೊಂಡುಬಾಳಿದರಳು ಕೂತುಂಡು ಭಕ್ತಿ ಮುಂಕೊಂಡುಊಳಿಗವ ಬೆಸಗೊಂಡು ಊರೊಳಗೆ ತಿರುಕೊಂಡುಬಾಲ ಇರಲರಿದಾಡುಬಡಿಯೆ 'ಡುಕೊಂಡು 4


ಮಂಗಳಾರ್ತಿಯ ಸೇವೆ ಮಾಣುತಿಹುದೇಗೈವೆಕಂಗಳಿಗೆ ನೀ 'ಭುವ ಕಾಣಿಸಿದೆ ಸುಖವೆತಿಂಗಳೆನಿತಾದರುವೆ ತಿರಿದೂಳಿಗಕೆ ತರುವೆಸಂಗಿನವರೊಳಗಿರುವೆ ಸತತವೆಲೆ ಗುರುವೆ 5


ತಪ್ಪಿಗನುಸಾರವಾಗಿ ತಿಳಿಯೆ ಶಿಕ್ಷಿಪೆಯಾಗಿಒಪ್ಪದ ಪದವ ನೀಗಿಪೊಳಿತಾಗಿತೆಪ್ಪಗೂಳಿಗಕಾಗಿ ತಗುಲಿಸುವೆ ನೀನಾಗಿಸುಪ್ರಸನ್ನತೆಯಾಗಿ ಸುಖಬಡುವರಾಗಿ 6


ದುರುಳರಹುದಹುದಿವರು ದೂರಿಗೊಳಗಾದವರುಚರಣಾಬ್ಜ ಸೇವಕರು ಚಾರುಮತಿಯವರುದುರಿತ ಶತವಡಿಸಿದರು ದಾಟುವರು ನಿನ್ನವರುಕರುಣಾಬ್ಧಿ ನೀನಿದಿರುಗಾಣೆ ಸುಖಮಯರು7


ಸೆರೆಯ ಪರಿಹರಿಸಿನ್ನು ಸುಖಿಸು ಸದ್ಭಕ್ತರನುಗುರು ಸುತರ ಚರಣವನು ಕಂಡು ಬದುಕುವೆನುಬರಿದೆ ಬೇಡುವೆ ನಾನು ಪಾಲಿಸುವ 'ಭು ನೀನುಶರಣಾಗತಪ್ರಿಯನು ಶಾಂತಿದಾಯಕನು 8


ಧರೆಯ ಜನರಜ್ಞತೆಯ ದ'ಸಿ ನಿಜ ಸದ್ಗತಿಯಕರೆದೀವ ಗುರುರಾಯ ವಾಸುದೇವಾರ್ಯಕರುಣ ನಾಗನಗರಿಯ ಸ್ಥಿರಗೈದು ಸುವಸತಿಯಒರೆದೆ ಭವ'ಜಯ ವೇದಾಂತಪದ್ಧತಿಯ 9

***