..
ಶರಣಜನರ ತನ್ನ ಕರುಣದಿಂದಲಿ ಕಾಯ್ವ
ಕರುಣಾಸಾಗರನ ನೋಡಿರೈ ಪ
ತರುಣಾಕರ್Àನಿಭ ಸುಪರಣವಾಹನ ಗುಣ -
ವರಣನ ಮಾಡುವ ಕರ್ಣಹೀನಾಂಶನ ಅ.ಪ
ನಾನಾವಿಧದ ಫಲ ದಾನಮಾಡುವ ಸುರ -
ಧೇನು ನಿನಗೆ ಸೋತು ಪೋಯಿತಯ್ಯಾ
ಮಾನನಿಧಿಯೆ ಎನ್ನ ನೀನೆ ಕಾ -
ಯೆನುತನುರಾಗದಿ ನಂಬಿದೆ
ನಿನ್ನ ಸೇವದಿ ರತನ | ಮಾಡೊ ಯೋಗಾದೀ
ನಾ ನಿನ್ನ ಪದಕಭಿನಮಿಸಿ ಬೇಡವೆನಯ್ಯ ಮಹರಾಯಾ
ಕರಪಿಡಿದು ಕಾಯೋ ನೀ ಎನ್ನ ಗುರುರಾಯಾ
ಹೀನ ಭವದೋಳು ಬಾಯಿ ಬಿಡುವೆ
ನಾನಯ್ಯ ಇದಕೇನುಪಾಯಾ
ನೀನೆ ಚಿಂತಿಸೊ ಸಂತರೊಡೆಯನೆ
ನಾನು ಬಲ್ಲೆನೆ ಮೂಢಮಾನವ
ದೀನ - ಜನ - ಮಂದಾರ - ಶಾಶ್ವತ
ದಾನಿ ನಿನಪದಧ್ಯಾನ ಮಾಡಿಸೋ 1
ಸೇವಕ - ಜನರನ್ನ ಕಾವೋನೀತನು ಎಂಬೊ
ಭಾವಪೂರ್ವಕ ನಿನ್ನ ಸೇವಿಪೆನೋ
ಅವಕಾಲದಲಿಂದ ತವ ಪಾದಧ್ಯಾನವ
ಭಾವಿಸಿದ್ಯನ ಕಾರ್ಯ ಮಾಡುವ
ಕರುಣದಲೆನ್ನನೋಡುವ | ಸೇವಕನಿಷ್ಟ ನೀಡುವಾ
ನೀನಿರಲು ನಿತ್ಯ ಆವ ಭಯ ಎನಗೇನು ಇಲ್ಲಾ
ನಂಬಿದರೆ ಕೈ ಬಿಟ್ಟು ಪೋಗುವವ ನೀನಲ್ಲಾ
ದೇವ ದಾನವರಂಜಿಕೆಯು ಎನಗಿಲ್ಲಾ |
ಈ ಮಾತು ಪುಶಿಯಲ್ಲಾ |
ಜೀವರುತ್ತಮ ಮುಖ್ಯವಾಯು
ದೇವನಾವೇಶದಿಂದಲಿ
ದೇವ ಭಾವವನೈದಿ ಲೋಕದಿ
ಈ ವಿಧದಿ ಮಹಿಮವ ತೋರಿ ಮೆರೆವ 2
ಪಾತಕವನಕುಲ - ವೀತಿಹೋತ್ರನು ಎನಿಸೀ
ದೂತಜನರಘ ದೂರಗೈಸುವಿ
ದಾತ ಗುರು ಜಗನ್ನಾಥ ವಿಠಲಗತಿ
ಪ್ರೀತನಾಗಿ ಮೆರೆವೋ ದಾತನು
ಎನಗೆ ನಿಜಜೀಯಾನೋ ದೂತಜನಕತಿ ಪ್ರೀಯಾನೊ
ತಾನೆನಿಸಿ ವೀತಭಯ ಭೂತಾದಿ ಭಾಧ ಕಳೆವಾ
ಸತಿಯರಿಗೆ ತಾ ಸುತರನ್ನ ಕೊಡುವಾ
ಈತ ನೀಡುವನಹಿಕ ಪರಲೋಕ ಸುಖವಾ
ಇದು ಸರ್ವ ಸಮ್ಮತವೊ
ಜಾತರೂಪ ಸುಶಯ್ಯ ತನಯ
ದೂತನಾದವಗೇನು ಭಯ ನಿ -
ರ್ಭೀತನಾಗಿದ್ದೆಲ್ಲ ಕಾರ್ಯವ -
ನೀತೆರದಿ ತಾ ಮಾಡುತಿರುವಾ 3
***