ಗುರುರಾಮವಿಠಲ
ಗುರುರಾಯ ನಿನ್ನ ಸಮರನ್ಯಾರ ಕಾಣೆ ಪ
ತರತಮ ಪಂಚಭೇದವರ ಮಾರ್ಗವ ತೋರೋ ಅ.ಪ
ತ್ರಿವಿಧ ಜೀವರಿಗೆ ಹರಿ ಕಾರಣ ಕರ್ತನೆಂದು ವಿವಿಧ ಗತಿಗಳೆಂದು ಶ್ರವಣ ಮನನ ಮಾಡಿಸೊ 1
ಪರಮಾತ್ಮ ಜೀವಾತ್ಮ ಪರಸ್ಪರ ಭೇದವೆಂದು ಅರುಹಿಸೊ ನಿನ್ನವರಿಂದನುದಿನ ಗುಣಸಿಂಧು 2
ನಿಜ ಸಿದ್ಧಾಂತ ಸುಜನರಿಗೆ ಬೋಧಿಸಿದ ಭುಜಗ ಶಯನನ ಭಕ್ತ ವಿಜಯ ರಾಮದಾಸವರ್ಯಾ 3
ಅಂಕಿತಗಳ ಕೊಟ್ಟು ಆದರಿಸುವೆ ಸದಾ 4
ಭಾಗ್ಯನಿಧಿ ದಾಸರ ಶಿಷ್ಯಾಗ್ರೇಸರ ಎನ್ನ ಯೋಗ್ಯತೆ ತಿಳಿಸಿ ಗುರುರಾಮವಿಠಲನ ತೋರೋ 5
***