Showing posts with label ಶೋಭಾನವೆನ್ನಿರೆ ಸರ್ವಜ್ಞ ಹರಿಗೆ jagannatha vittala SHOBHANAVENNIRE SARVAJNA HARIGE. Show all posts
Showing posts with label ಶೋಭಾನವೆನ್ನಿರೆ ಸರ್ವಜ್ಞ ಹರಿಗೆ jagannatha vittala SHOBHANAVENNIRE SARVAJNA HARIGE. Show all posts

Monday, 6 September 2021

ಶೋಭಾನವೆನ್ನಿರೆ ಸರ್ವಜ್ಞ ಹರಿಗೆ ankita jagannatha vittala SHOBHANAVENNIRE SARVAJNA HARIGE

 ರಾಗ : ಕಾಂಬೋಧಿ  ತಿಶ್ರನಡೆ

Audio by Vidwan Sumukh Moudgalya

..

ಶ್ರೀ ಜಗನ್ನಾಥದಾಸಾರ್ಯ ವಿರಚಿತ  ಶೋಭಾನೆ ಪದ ಮತ್ತು ಆರತಿ


ಶೋಭಾನವೆನ್ನಿರೊ ಸರ್ವಜ್ಞ ಹರಿಗೆ

ಶೋಭಾನವೆನ್ನಿ ಸಕಲ ಗುಣನನಿಧಿಗೆ

ಶೋಭಾನವೆನ್ನಿ ಸಮೀರನ ಪಿತಗೆ

ಶೋಭಾನವೆನ್ನಿ ಸರೋಜ ಸದನೆಯ ಮ-

ನೋಭಿರಾಮಗೆ ಶೋಭಾನವೆನ್ನಿ ॥ಪ॥


ಶಫರ ವೇಷಾದವಗೆ ಕಪಟಾ ಕಾಮಾಠಗೆ

ತಪನೀಯಾಂಬಕನಸು ಅಪಹರಿಸಿದಗೆ

ಕೃಪಣ ಪ್ರಹ್ಲಾದನ್ನ ವಿಪತ್ತು ಕಳದಗೆ

ಶಿಪಿಯ ಕರದಿ ಬಲಿ ವಪು ಬಿಗಿಸಿದವಗೆ

ಚಪಲಾಕ್ಷಿಯರಾರುತಿಯ ಬೆಳಗಿರೇ॥೧॥


ಕೊಡಲಿ ಕೋದಂಡವಾ ಪಿಡಿದ ಪಂಡಿತಗೆ

ಕಡಲಾಂಬುಧಿಸಿ ಖಳರಾ ವಡಲ ಬಗಿದವಗೆ

ಮಡುವಿನೊಳಗೆ ಫಣಿ ಪೆಡಿಯ ತುಳಿದವಗೆ

ಮೃಡನ ಗೆಲಿಸಿ ಕೀರ್ತಿ ವಡನೆ ತಂದೀತ್ತಾಗೆ

ಮಡದೇರಾರುತಿಯಾ ಬೆಳಗೀರೇ॥೨॥


ಹರಿಗೀ ಸುರಿಗೀಯಾ ಪಿಡಿದಾ ಅರವಿಂದಾಂಬಕಗೆ

ಶರಧೀಯೋಳಾಡ್ದಾಗೆ ಗಿರಿಮಹಿಧರಗೆ

ನರಹರಿರೂಪಗೆ ಧರಣೀಯಳದಗೆ

ಧುರದೊಳು ರಾಯರಾ ತರಿದಾ ಸಮರ್ಥಗೆ

ಹರೆದರಾರುತಿಯಾ ಬೆಳಗೀರೇ॥೩॥


ದಶರಥ ತನಯಗೆ ವಸುದೇವ ಸುತಗೆ

ವಸನವಿಹೀನಗೆ ಅಸುರಭಂಜನಗೆ

ಝಷ ಕೂರ್ಮ ರೂಪಗೆ ವಸುಧಿ ವಹಕಗೆ

ಮಿಸುಣೀ ಕಶ್ಯಪನ ಹೆಬ್ಬಸುರ ಬಗದವಗೆ

ಶಶಿಮುಖಿಯರಾರುತಿಯ ಬೆಳಗಿರೇ॥೪॥


ವಟು ಭೃಗುರಾಮಗೆ ಜಟಿಲ ಮಸ್ತಕಗೆ

ಕುಟಿಲ ಕಂಸನ ತಳ ಪಟ ಮಾಡಿದವಗೆ

ನಿಟಿಲಾಕ್ಷ ಸಹಾಯಗೆ ಕಟಕ ಭೀಕರಗೆ

ವಟಪತ್ರಶಯನ ನಿಷ್ಕುಟಿಲ ಜಗನ್ನಾಥ -

 ವಿಠ್ಠಲ ಗಾರುತಿಯ ಬೆಳಗೀರೇ॥೫॥

***


SOBAnavennire sarvaj~ja harige

SOBAnavennire sakala guNanidhige

SOBAnavenni samIra pitanige

SOBAnavenni sarOjasadana

manOBirAmanige SOBAnavenni ||pa||


SaPara vEShadavage kapaTa kamaThage

tapa niyAMbakanasupariharisidage

kRupaNa prahlAdana vipattu kaLedavage

Sipiya karadi balu vaprava bigisidavage

capalAkShiyarAruti beLagire ||1|||


koDali kOdanDava piDiva panDitage

kaDala kaTTisi KaLaroDala bagedage

maDuvinoLage PaNi peDeya tuLidavage

mRuDana gelisi kIrti oDane taMdittage

maDadErArutiya beLagIre ||2||


harigi surigi piDidaravindAnbakage

SaradhiyoLADdage girimahidharage

narahari rUpage dharaNiyALdage

dhuradoLu rAyara tarida samarthage

garatErArutiya beLagIre ||3||


daSaratha tanayage vasudEva sutage

vasana vihInage asura Banjanige

JaSha kUrma rUpage vasudhi vAhakage

misuni kaSyapage hebbasira bagedavage

SaSimuKiyarAruti beLagIre ||4||


vaTu BRugurAmage jaTala mastakage

kaThiNa kaMsana taLa paTava mADidage

niTalAkShavaradage kapaTa BIkarage

vaTapatraSayana niShkuTila jagannAtha

viThalagArutiya beLagIre ||5||

***


ಶೋಭಾನವೆನ್ನಿರೆ ಸರ್ವಜ್ಞ ಹರಿಗೆ
ಶೋಭಾನವೆನ್ನಿರೆ ಸಕಲ ಗುಣನಿಧಿಗೆ
ಶೋಭಾನವೆನ್ನಿ ಸಮೀರ ಪಿತನಿಗೆ
ಶೋಭಾನವೆನ್ನಿ ಸರೋಜಸದನ
ಮನೋಭಿರಾಮನಿಗೆ ಶೋಭಾನವೆನ್ನಿ ||pa||

ಶಫರ ವೇಷದವಗೆ ಕಪಟ ಕಮಠಗೆ
ತಪ ನಿಯಾಂಬಕನಸುಪರಿಹರಿಸಿದಗೆ
ಕೃಪಣ ಪ್ರಹ್ಲಾದನ ವಿಪತ್ತು ಕಳೆದವಗೆ
ಶಿಪಿಯ ಕರದಿ ಬಲು ವಪ್ರವ ಬಿಗಿಸಿದವಗೆ
ಚಪಲಾಕ್ಷಿಯರಾರುತಿ ಬೆಳಗಿರೆ ||1|||

ಕೊಡಲಿ ಕೋದಂಡವ ಪಿಡಿವ ಪಂಡಿತಗೆ
ಕಡಲ ಕಟ್ಟಿಸಿ ಖಳರೊಡಲ ಬಗೆದಗೆ
ಮಡುವಿನೊಳಗೆ ಫಣಿ ಪೆಡೆಯ ತುಳಿದವಗೆ
ಮೃಡನ ಗೆಲಿಸಿ ಕೀರ್ತಿ ಒಡನೆ ತಂದಿತ್ತಗೆ
ಮಡದೇರಾರುತಿಯ ಬೆಳಗೀರೆ ||2||

ಹರಿಗಿ ಸುರಿಗಿ ಪಿಡಿದರವಿಂದಾಂಬಕಗೆ
ಶರಧಿಯೊಳಾಡ್ದಗೆ ಗಿರಿಮಹಿಧರಗೆ
ನರಹರಿ ರೂಪಗೆ ಧರಣಿಯಾಳ್ದಗೆ
ಧುರದೊಳು ರಾಯರ ತರಿದ ಸಮರ್ಥಗೆ
ಗರತೇರಾರುತಿಯ ಬೆಳಗೀರೆ||3||

ದಶರಥ ತನಯಗೆ ವಸುದೇವ ಸುತಗೆ
ವಸನ ವಿಹೀನಗೆ ಅಸುರ ಭಂಜನಿಗೆ
ಝಷ ಕೂರ್ಮ ರೂಪಗೆ ವಸುಧಿ ವಾಹಕಗೆ
ಮಿಸುನಿ ಕಶ್ಯಪಗೆ ಹೆಬ್ಬಸಿರ ಬಗೆದವಗೆ

ಶಶಿಮುಖಿಯರಾರುತಿ ಬೆಳಗೀರೆ ||4||
***

ಜಗನ್ನಾಥದಾಸರು
ಶೋಭಾನವೆನ್ನಿರೆ ಸಕಲ ಗುಣನಿಧಿಗೆ
ಶೋಭಾನವೆನ್ನಿ ಸಮೀರ ಪಿತನಿಗೆ
ಶೋಭಾನವೆನ್ನಿ ಸರೋಜಸದನ
ಮನೋಭಿರಾಮನಿಗೆ ಶೋಭಾನವೆನ್ನಿ ಪ

ಕಪಟ ಕಮಠಗೆ
ತಪ ನಿಯಾಂಬಕನಸುಪರಿಹರಿಸಿದಗೆ
ಕೃಪಣ ಪ್ರಹ್ಲಾದನ ವಿಪತ್ತು ಕಳೆದವಗೆ
ಚಪಲಾಕ್ಷಿಯರಾರುತಿ ಬೆಳಗಿರೆ 1

ಕೊಡಲಿ ಕೋದಂಡವ ಪಿಡಿವ ಪಂಡಿತಗೆ
ಕಡಲ ಕಟ್ಟಿಸಿ ಖಳರೊಡಲ ಬಗೆದಗೆ
ಫಣಿ ಮೃಡನ ಗೆಲಿಸಿ ಕೀರ್ತಿ ಒಡನೆ ತಂದಿತ್ತಗೆ
ಮಡದೇರಾರುತಿಯ ಬೆಳಗೀರೆ 2

ಹರಿಗಿ ಸುರಿಗಿ ಪಿಡಿದರವಿಂದಾಂಬಕಗೆ
ಶರಧಿಯೊಳಾಡ್ದಗೆ ಗಿರಿಮಹಿಧರಗೆ
ನರಹರಿ ರೂಪಗೆ ಧರಣಿಯಾಳ್ದಗೆ
ಧುರದೊಳು ರಾಯರ ತರಿದ ಸಮರ್ಥಗೆ
ಗರತೇರಾರುತಿಯ ಬೆಳಗೀರೆ3

ದಶರಥ ತನಯಗೆ ವಸುದೇವ ಸುತಗೆ
ಕೂರ್ಮ ರೂಪಗೆ ವಸುಧಿ ವಾಹಕಗೆ
ಮಿಸುನಿ ಕಶ್ಯಪಗೆ ಹೆಬ್ಬಸಿರ ಬಗೆದವಗೆ
ಶಶಿಮುಖಿಯರಾರುತಿ ಬೆಳಗೀರೆ 4

ವಟು ಭೃಗುರಾಮಗೆ ಜಟಲ ಮಸ್ತಕಗೆ
ಕಠಿಣ ಕಂಸನ ತಳ ಪಟವ ಮಾಡಿದಗೆ
ಕಪಟ ಭೀಕರಗೆ
ವಟಪತ್ರಶಯನ ನಿಷ್ಕುಟಿಲ ಜಗನ್ನಾಥ
ವಿಠಲಗಾರುತಿಯ ಬೆಳಗೀರೆ 5
****