Showing posts with label ಭಕುತರ ಸೃಷ್ಟಿಯೇವೆ gopala vittala suladi ಹರಿಭಕ್ತ ಮಹಿಮೆ ಸುಳಾದಿ BHAKUTARA SRUSHTIYEVE HARIBHAKTA MAHIME SULADI. Show all posts
Showing posts with label ಭಕುತರ ಸೃಷ್ಟಿಯೇವೆ gopala vittala suladi ಹರಿಭಕ್ತ ಮಹಿಮೆ ಸುಳಾದಿ BHAKUTARA SRUSHTIYEVE HARIBHAKTA MAHIME SULADI. Show all posts

Sunday, 8 December 2019

ಭಕುತರ ಸೃಷ್ಟಿಯೇವೆ gopala vittala suladi ಹರಿಭಕ್ತ ಮಹಿಮೆ ಸುಳಾದಿ BHAKUTARA SRUSHTIYEVE HARIBHAKTA MAHIME SULADI



Audio by Mrs. Nandini Sripad

ಶ್ರೀ ಗೋಪಾಲದಾಸಾರ್ಯ ವಿರಚಿತ ಶ್ರೀಹರಿಭಕ್ತರ ಮಹಿಮೆ ಸುಳಾದಿ 
(ಶ್ರೀಹರಿಯು ಭಕ್ತರಲ್ಲಿ ಮಾಡುವ ವಾತ್ಸಲ್ಯ)

ರಾಗ ಸಾವೇರಿ  ಧ್ರುವತಾಳ 

ಭಕುತರ ಸೃಷ್ಟಿಯೇವೆ ನಿನ್ನ ಸೃಷ್ಟಿಯೊ ದೇವ
ಭಕುತರ ಸ್ಥಿತಿಯೇವೆ ನಿನಗೆ ಸ್ಥಿತಿಯು ಸ್ವಾಮಿ
ಭಕುತರ ಲಯವೆ ನೋಡು ನಿನಗೆ ಲಯವು ಇನ್ನು
ಭಕುತರ ಪ್ರೇರಣವೆ ನಿನಗೆ ಪ್ರೇರಣೆ ಕಾಣೊ
ಭಕುತರ ಜ್ಞಾನವೆ ನಿನಗೆ ಜ್ಞಾನವು ನೋಡು
ಭಕುತರ ಅಜ್ಞಾನವೆ ನಿನಗೆ ಸ್ವಾಧೀನವದು
ಭಕುತರ ಬಂಧದಿಂದ ಬಂಧನೆಂದೆನಿಸಿ ಕೊಂಬೆ
ಭಕುತರ ಮೋಚನವೆ ನಿನಗೆ ಮುಖ್ಯ ಮೋಚನ
ಭಕುತರಿಗೆ ನಿನ್ನದು ಒಂದಾದರು ಬಾರದು
ಭಕುತರದು ನಿನ್ನಲ್ಲಿ ಒಂದು ಇಲ್ಲದವಿಲ್ಲಾ
ಭಕುತರಿಗೆ ನಿನ್ನಾಧೀನ ನೀ ಭಕುತರಾಧೀನ
ಭಕುತರಿಗೆ ನೀ ಬೇಕು ನಿನಗೆ ಭಕುತರು ಬೇಕು
ಭಕುತರೆ ನಿನಗಿನ್ನು ಬ್ಯಾಡದಿದ್ದರೆ ಸ್ವಾಮಿ
ವ್ಯಕುತಿ ಮಾಡುವರಾರು ಈ ನಿನ್ನ ಗುಣಗಳು
ಸಕಲವುಳ್ಳವ ಶೌರ್ಯವಂತ ನೀನು ಆದರು
ರಿಕತನಿಂದಲೆ ಅದು ಪ್ರಕಟವಾಗಲಿ ಬೇಕು
ಭಕುತವತ್ಸಲ ನಮ್ಮ ಗೋಪಾಲವಿಠ್ಠಲ 
ಭಕುತರೆ ಬಲ್ಲಿದರೋ ನಿನ್ನ ಬಲದಿಂದ ಸ್ವಾಮಿ ॥ 1 ॥

 ಮಠ್ಯತಾಳ 

ಜಗವು ನಿನ್ನ ಒಳಗೆ ನೀನು ಭಕುತರೊಳಗೆ
ಜಗವ ಪೊತ್ತಿಹೆ ನೀನು ನಿನ್ನ ಪೊತ್ತಿಹರವರು
ಜಗಕೆ ಮೋಹಕ ನೀನು ನಿನಗೆ ಮೋಹಿಸೊರವರು
ಜಗದಿ ವ್ಯಾಪ್ತ ನೀನು ನಿನ್ನ ವ್ಯಾಪ್ತರವರು
ಜಗದಿ ಭಿನ್ನನು ನೀನು ನಿನಗೆ ಭಿನ್ನರವರು
ಚಿಗಿದರೆ ಚಿಗಿವರು ನಗಿದರೆ ನಗುವರು
ಹಗೆಯು ಸ್ನೇಹವೆಲ್ಲ ನಿನ್ನಾಧೀನವೆಂದು
ಬಿಗಿದು ಕೊಂಡಿಹರು ಬಗಿಯದೆ ಅನ್ಯರನ
ಖಗವಾಹನ ಚಲ್ವ ಗೋಪಾಲವಿಠ್ಠಲ 
ಅಗಲದೆ ನಿನ್ನನು ಅರ್ಚಿಸುವರು ಬಿಡದೆ ॥ 2 ॥

 ರೂಪಕತಾಳ 

ಜಗವನೆಲ್ಲ ಸುತ್ತಿಸುವನೆ ನಿನ್ನ ಅವರು
ಮಗನ ಮಾಡಿ ಪಿಡಿದು ಮತ್ತೆ ಆಡಿಸುವರು
ಜಗವನೆಲ್ಲವ ಇಚ್ಛೆಯಲಿ ಕಟ್ಟುವನೆ ನಿನ್ನ
ಬಿಗಿದು ಕಟ್ಟುವರು ಕಾಲನೆ ಹಗ್ಗದಿಂದಲಿ
ಸೊಗಸಾದ ವೈಕುಂಠ ವಾಸವಾಗಿದ್ದನ್ನ
ಜಗದಲ್ಲಿ ನಿಂತು ಬಾ ಎಂದಿಲ್ಲಿ ಕರೆವರು
ಯುಗ ಮಹಾಪ್ರಳಯಕ್ಕೆ ಚಲಿಸದವನ ನಿನ್ನ
ಮಿಗೆ ಕೂಗಿ ಕರೆದು ಘಾಬರಿಗೊಳಿಸಿದರು ನಿನ್ನ
ಜಗಜನ್ಮಾದಿಕರ್ತ ಗೋಪಾಲವಿಠ್ಠಲ 
ಬಿಗವು ಬೇರೆ ನಿನ್ನ ಭಕುತರ ಭಾಗ್ಯವು ॥ 3 ॥

 ಝಂಪೆತಾಳ 

ನಿತ್ಯ ತೃಪ್ತನೆ ನಿನಗೆ ಅನ್ನವನೆ ಉಣಿಸಿದರು
ಸತ್ಯ ವಚನವು ಬಿಡಿಸಿ ಪಿಡಿಸಿದರು ಚಕ್ರವನು
ಭೃತ್ಯರಜಭವ ಮಹಾಮಹಿಮನೆ ಕೈಯ
ಎತ್ತಿ ಹಾಕಿಸಿದರೆಲ್ಲರು ಉಂಡ ಪರ್ನಗಳ
ರಕ್ತ ಶುಕ್ಲ ರಹಿತ ಕಾಯದವನ ನಿನ್ನ
ಮತ್ತೆ ಬಾಣದಿ ಎಚದು ತೋರಿದರು ನಿನ್ನವರು
ಸ್ತುತ್ಯ ನೀ ಸರ್ವೋತ್ತಮ ಅಹುದೊ ಅಲ್ಲವೊ ಎಂದು
ಎತ್ತಿ ಕಾಲಿಲೆ ಎದಿಗೆ ಒದ್ದರು ನಿನ್ನವರು
ಭಕ್ತ ವಾತ್ಸಲ್ಯತ್ವ ತೋರುವದಕೆ ನಿನ್ನ ಕಚ್ಚಿ
ಸುತ್ತಿದನು ಕಪಟದಲ್ಲಿ ನಿನ್ನವನು
ಮತ್ತೆ ಕಟ್ಟಿದ ಮೀಸೆಯನು ಪಿಡಿದ ಸತ್ಯವ್ರತ
ನಿತ್ಯ ಬಾಗಿಲ ಕಾಯಿಸಿದನು ಆ ಬಲಿರಾಯ
ಕಿತ್ತಿಕೊಂಡೋಡಿದನು ಕಿರೀಟ ನಿನ್ನವನು
ಮತ್ತೆ ಮಳೆಗರೆದು ಪರ್ವತ ಹೊರಿಸಿದರವರು
ಸತ್ಯಸಂಕಲ್ಪ ಗೋಪಾಲವಿಠ್ಠಲರೇಯ 
ಭಕ್ತರೊಳು ನಿನ್ನ ಆಟವ ತಿಳಿವ ಧನ್ಯ ॥ 4 ॥

 ತ್ರಿಪುಟತಾಳ 

ನೋಡಿ ನೋಡಿಸಬೇಕು ಓಡಿ ಓಡಿಸಬೇಕು
ನೀಡಿ ನೀಡಿಸಬೇಕು ಆಡಿ ಆಡಿಸಬೇಕು
ಕೂಡಿ ಕೂಡಿಸಬೇಕು ಮಾಡಿ ಮಾಡಿಸಬೇಕು
ಕೇಡು ಲಾಭಂಗಳಿಗೆ ಭಿನ್ನವಾಗಿ ನೀನು
ಮಾಡುತಾ ಈಪರಿ ಸಿಲ್ಕಿ ನಿನ್ನವರೊಳು
ಕೂಡುತ ಮಲಗುತ ಏಳುತ ನಿಂತು ನೀ
ನೋಡುವರಿಗೆ ಬಿಂಬಕ್ರಿಯದ ಮೇಲಿನ್ನು
ಪಾಡಾಗಿ ತಿಳಿದರೆ ಸ್ವಾಮಿ ಭೃತ್ಯ ಕಾರ್ಯ
ಜೋಡೆರಡೊಂದಲ್ಲ ಮಾಡುವನು ಒಬ್ಬ
ಮಾಡಿಸುವ ತತ್ತತ್ಯೋಗ್ಯತೆ ಅನುಸಾರ
ಪ್ರೌಢ ನಿನಗೆ ಒಂದು ಫಲ ಅಪೇಕ್ಷೆಯು ಇಲ್ಲ
ಮಾಡುವೀ ಈ ಪರಿ ಭಕ್ತರಿಗೆ
ಮೂಢ ಶಂಕೆಯು ಸಲ್ಲ ವೈಷಮ್ಯ ನೈರ್ಘಣ್ಯ
ಕೂಡದು ನಿನ್ನಲ್ಲಿ ಎಂದೆಂದಿಗೂ
ಪಾಡಿದವರ ಪ್ರಾಣ ಗೋಪಾಲವಿಠ್ಠಲ 
ಈಡ್ಯಾರೊ ನಿನಗೆ ನೀ ಮಾಡಿದ್ದೆ ಮಹಾಧರ್ಮ ॥ 5 ॥

 ಅಟ್ಟತಾಳ 

ಭಕುತರು ಮಾಡಿದ್ದು ನೀ ಮಾಡಿದುದಯ್ಯ
ಭಕುತರು ನೋಡಿದ್ದೆ ನೀನು ನೋಡಿದುದಯ್ಯ
ಭಕುತರು ನೀಡಿದ್ದೆ ನೀನು ನೀಡಿದದಯ್ಯ
ಭಕುತರ ಕೊಂಡದ್ದೆ ನೀನು ಕೊಂಡದದಯ್ಯ
ಭಕುತರು ಆಡಿದ್ದೆ ನೀನು ಆಡಿದದೈಯ್ಯ
ಭಕುತರು ಬೇಡೋದು ನಿನ್ನ ಬೇಡುವದಯ್ಯ
ಭಕುತರು ಉಂಡರೆ ನೀನು ಉಂಡವನಯ್ಯ
ಭಕುತರು ಉಟ್ಟರೆ ನೀನು ಉಟ್ಟವನಯ್ಯ
ಭಕುತರು ದಣಿದರೆ ನೀನು ದಣಿವನಯ್ಯ
ಭಕುತರ ಹಿತವೆಲ್ಲ ನಿನ್ನ ಹಿತವು ಸ್ವಾಮಿ
ಭಕುತರಲ್ಲಿ ನಿನ್ನ ರತಿ ಅನುಗಾಲವು
ಭಕುತ ಬ್ಯಾಸತ್ತರು ನೀ ಬೇಸರುವನು ಅಲ್ಲ
ಭಕುತರನು ಮತ್ತೆ ನೀನು ಹುಡುಕುತಿಪ್ಪಿ
ಭಕುತರು ನಿನ್ನ ಸುತ್ತಲೆ ಸಂಚರಿಸೋರು ಮುಕುತಿದಾಯಕ ಸಿರಿ  ಗೋಪಾಲವಿಠ್ಠಲ 
ಭಕುತರಲ್ಲೇ ಆಸಕುತಿಯು ನಿನಗೆ ॥ 6 ॥

 ಆದಿತಾಳ 

ಕಂಡರು ಕಾಣರು ಉಂಡದ್ದೆ ಉಣ್ಣರು
ಕೊಂಡದ್ದೆ ಕೊಳ್ಳರು ಪಂಡಿತರವರು
ಮಂಡಿಯ ತಗ್ಗಿಸಿ ನಿನ್ನ ಕೆಳಗೆ ಬಿದ್ದು
ಮಂಡಲದೊಳಗೆಲ್ಲ ಸಂಚರಿಸುವರು
ಪುಂಡರೀಕಾಕ್ಷ ನೀ ಅವರೆಲ್ಲಿ ಪೋದಲ್ಲಿ
ಕಂಡ್ಹಾಗೆ ತಿರುಗಿದಂತೆ ನೀನು ತಿರುಗುವಿ
ಖಂಡಾಖಂಡಮೂರ್ತಿ ವ್ಯಾಪ್ತ ನಿರ್ಲಿಪ್ತ ವು -
ದ್ದಂಡ ಉತ್ತಮ ಪುರುಷೋತ್ತಮ ಸರ್ವೋತ್ಮನೆ
ಪಾಂಡವ ಪಾಲಕ ಗೋಪಾಲವಿಠ್ಠಲ 
ಕಂಡ ಮಾತಿಗೆ ಇದಕನುಮಾನ ವ್ಯಾತಕೆ ॥ 7 ॥

 ಜತೆ 

ಭಕುತರ ಭಾಗ್ಯವು ಜಗವೆಲ್ಲ ತುಂಬಿದೆ
ರಿಕತನೊಬ್ಬನೆ ಕಾಣೊ ಗೋಪಾಲವಿಠ್ಠಲ ॥
*************