Showing posts with label ಕೃಷ್ಣ ಮಂತ್ರವ ಜಪಿಸೊ ಏ ಮನುಜ purandara vittala. Show all posts
Showing posts with label ಕೃಷ್ಣ ಮಂತ್ರವ ಜಪಿಸೊ ಏ ಮನುಜ purandara vittala. Show all posts

Wednesday, 4 December 2019

ಕೃಷ್ಣ ಮಂತ್ರವ ಜಪಿಸೊ ಏ ಮನುಜ purandara vittala

ಪುರಂದರದಾಸರು
ಕೃಷ್ಣ ಮಂತ್ರವ ಜಪಿಸೊ ಏ ಮನುಜ |ಕೃಷ್ಣ ಮಂತ್ರವ ಜಪಿಸೊ ಪ.

ವೈಷ್ಣವೋತ್ತಮನಾಗಿ ವಿಷ್ಣುವೆ ಗತಿಯೆಂದು ಅಪಜಪತಪಾನುಷ್ಟಾನ ಸ್ನಾನಕ್ಕೆ ಈ ಮಂತ್ರ |ಕಪಟಬುದ್ದಿಗಳನ್ನು ಕಟ್ಟುವ ಮಂತ್ರ ||ಉಪದೇಶದಲಿ ಜ್ಞಾನಕೊಟ್ಟು ಸಲಹುವ ಮಂತ್ರ |ಸುಪವಿತ್ರ ಮಾಡಿ ಸ್ವರ್ಗ ಸೂರೆಗೊಡುವ ಮಂತ್ರ 1

ಸಕಲ ಸಾಧನೆಗಳಿಗೆ ಸಾರಭೂತದ ಮಂತ್ರ |ನಿಖಿಳ ದೇವರಿಗೆಲ್ಲ ಸಾಕ್ಷಿ ಭೂತದ ಮಂತ್ರ ||ಭಕುತಿಯಲಿ ದ್ರೌಪದಿಯ ಭಜಿಸಿದ ಈ ಮಂತ್ರ |ಮುಕುತಿಯ ಕೊಟ್ಟು ಜನರ ಪೋಷಿಸುವ ಮಂತ್ರ 2

ಭಾವಿಸಲಣುರೇಣು ಪರಿಪೂರ್ಣವಾದ ಮಂತ್ರ |ಜೀವಗಳಿಗೆಲ್ಲ ಸಂಜೀವ ಮಂತ್ರ ||ಪಾವನ ಮಾಡಿ ಪಾಲಿಪುದೀ ಮಂತ್ರ |ದೇವ ಪುರಂದರವಿಠಲ ಮಹಾ ಮಂತ್ರ 3
***

pallavi

krSNa mantrava japisO hE manuja

anupallavi

vaiSNavOttamanAgi viSNuvE gatiyandu

caraNam 1

japa tapAnuSTAna snAnakkE I mantra kapaTa buddhigaLannu koDada mantra
upadEshadali jnAnava koTTu salahuva mantra shubha vitra mADi svargasurE koDuva mantra

caraNam 2

sakala sAdhanagaLige sAra bUda mantra nikhiLa dEvarigellA sAkSi bUda mantra
bhakutiyali draupadiyu bhajisidara mantra mUkutiya koTTu janara pOSisuva mantra

caraNam 3

bhAvisalaNurENu paripURNavAda mantra jIvagaLigella sanjIvi mantra
pAvana mADi pAlipa tudi mantra dEva purandara viTTala mahA mantra
***