RSS song .
ಕೃಣ್ವಂತೋ ವಿಶ್ವಮಾರ್ಯಂ ಕೃಣ್ವಂತೋ ವಿಶ್ವಮಾರ್ಯಂ
ಉಚ್ಛ ಕಂಠದೊಳು ಉಚ್ಛರಿಸಿ ಸಜ್ಜನ ಶಕ್ತಿಯನೆಚ್ಚರಿಸಿ
ದಿವ್ಯ ಮಂತ್ರವ ಘೋಷಿಸುವ
ಕೃಣ್ವಂತೋ ವಿಶ್ವಮಾರ್ಯಂ ಕೃಣ್ವಂತೋ ವಿಶ್ವಮಾರ್ಯಂ ||ಪ||
ಜಗದ ಆದಿ ಪ್ರಾಚೀನ ಸಮಯದಿ ಮಂತ್ರವೆಮಗೆ ಸಂಗಾತಿ
ದೂರ ದೂರಕು ಕಂಪು ತುಂಬಿರುವ ಆರ್ಯ ಧರ್ಮದ ಖ್ಯಾತಿ
ಕಾಲಚಕ್ರವದು ತಿರುಗಿರೆ ಭರದಿ ಮರೆಯಾಯಿತು ಆದರ್ಶ
ನವಸೂರ್ಯೋದಯ ತಂದಿಹುದಿಂದು ಪ್ರಭಾತದುಜ್ವಲ ಸ್ಪರ್ಶ
ಯುಗದ ಸವಾಲನು ಉತ್ಕರಿಸಿ ಸಜ್ಜನ ಶಕ್ತಿಯನೆಚ್ಛರಿಸಿ ||೧||
ವೇದಕಾವ್ಯ ಉಪನಿಷದ್ವಾಕ್ಯಗಳು ತೋರಿವೆ ಬಾಳಿನ ಗುರಿಯ
ರಾಮಾಯಣ ಪಾವನ ಗೀತಾಮೃತ ಹರಿಸಿವೆ ಜ್ಞಾನದ ಝರಿಯ
ಜಗದುದ್ದಗಲದಿ ಕಂಗೊಳಿಸುತಲಿಹ ಸಂಸ್ಕೃತಿಯ ಅವಶೇಷಗಳು
ನವನಿರ್ಮಾಣಕೆ ಪ್ರೇರಣೆ ನೀಡಿಹ ಜಾಗೃತಿಯ ಸಂದೇಶಗಳು
ನಾಡ ಕೀರ್ತಿಯನು ಎತ್ತರಿಸಿ ಸಜ್ಜನ ಶಕ್ತಿಯನೆಚ್ಛರಿಸಿ ||೨||
ಅಖಿಲ ವಿಶ್ವದೊಳು ಮತ್ತೆ ಮೆರೆಯಲಿದೆ ಉನ್ನತ ಧ್ವಜ ಭಗವೆಯ ಲಾಸ್ಯ
ಮೂರು ಲೋಕದೊಳು ಮಾರ್ದನಿಗೊಳಲಿದೆ ಆರ್ಯ ಧರ್ಮದ ಜಯಘೋಷ
ದಿವ್ಯ ಶಾಸ್ತ್ರಗಳು ತೋರಿದ ಪಥದಲಿ ನವಾನ್ವೇಷಣೆಯ ಗೈಯೋಣ
ಆರ್ಯಮಾತೆಯನು ಆರಾಧಿಸುತ ಮನುಜನ ಅಮರತೆಗೊಯ್ಯೋಣ
ನಮೀ ಜಗವನು ಉದ್ಧರಿಸಿ ಸಜ್ಜನ ಶಕ್ತಿಯನೆಚ್ಛರಿಸಿ ||೩||
***
kRuNvaMtO viSvamAryaM kRuNvaMtO viSvamAryaM
ucCa kaMThadoLu ucCarisi sajjana Saktiyaneccarisi
divya maMtrava GOShisuva
kRuNvaMtO viSvamAryaM kRuNvaMtO viSvamAryaM ||pa||
jagada Adi prAcIna samayadi maMtravemage saMgAti
dUra dUraku kaMpu tuMbiruva Arya dharmada KyAti
kAlacakravadu tirugire Baradi mareyAyitu AdarSa
navasUryOdaya taMdihudiMdu praBAtadujvala sparsha
yugada savAlanu utkarisi sajjana SaktiyanecCarisi ||1||
vEdakAvya upaniShadvAkyagaLu tOrive bALina guriya
rAmAyaNa pAvana gItAmRuta harisive j~jAnada Jariya
jagaduddagaladi kaMgoLisutaliha saMskRutiya avaSEShagaLu
navanirmANake prEraNe nIDiha jAgRutiya saMdESagaLu
nADa kIrtiyanu ettarisi sajjana SaktiyanecCarisi ||2||
aKila viSvadoLu matte mereyalide unnata dhwaja Bagaveya lAsya
mUru lOkadoLu mArdanigoLalide Arya dharmada jayaGOSha
divya SAstragaLu tOrida pathadali navAnvEShaNeya gaiyONa
AryamAteyanu ArAdhisuta manujana amarategoyyONa
namI jagavanu uddharisi sajjana SaktiyanecCarisi ||3||
***