..
ಎಂದಿಗಾದರೂ ನಾನು ಮರೆಯೆ ಗುರುವಿನತಂದು ಪೂಜಿಸು ತ್ರಿನಯನ ಪ್ರಾಣದೊಡೆಯನ ಪ
ಪ್ರೇಮದಿಂದಲಿ ತನ್ನ ದಯದಿ ನೋಡಿದಕಾಮಕ್ರೋಧ ಮೋಹ ಮದಕೆ ಅಂಬು ಹೂಡಿದ |ತಾಮಸದ ಗುಣಗಳನು ಕಡೆಗೆ ಮಾಡಿದರಾಮ ರಾಮ ಎಂಬ ಬೀಜ ಮಂತ್ರ ನೀಡಿದ 1
ಕಾಣ ಬಂತು ಜಗವು ಎನಗೆ ರಾಮರೂಪವುತಾನು ತಾನೆ ಉದಯವಾಯ್ತು ಜ್ಞಾನದೀಪವು |ಏನು ಪೇಳಲಿ ಕರಗಿ ಹೋಯ್ತು ಮನದ ತಾಪವುಸ್ವಾನುಭಾವದಲಿ ನಾಸ್ತಿ ಪುಣ್ಯಪಾಪವು 2
ಎರಡು ಪಕ್ಷ ಮೀರಿಹ ಗುಣಾತೀತನಪರಬ್ರಹ್ಮ ಪರಂ ಜ್ಯೋತಿ ಸದೋದಿತನ |ಕರುಣಸಿಂಧು ತಂದಜ್ಞಾನಬೋಧ ತಾತನಹರುಷ ಪೂರ್ಣವಾಗಿ ಸುಖವ ಕೊಡುವ ದಾತನ 3
***