Showing posts with label ಅವನೆ ಜೀವಾಂಕಿತ ಪ್ರೇತ ನೋಡಿ ankita prasannavenkata AVANE JEEVAANKITA PRETA NODI. Show all posts
Showing posts with label ಅವನೆ ಜೀವಾಂಕಿತ ಪ್ರೇತ ನೋಡಿ ankita prasannavenkata AVANE JEEVAANKITA PRETA NODI. Show all posts

Sunday, 7 November 2021

ಅವನೆ ಜೀವಾಂಕಿತ ಪ್ರೇತ ನೋಡಿ ankita prasannavenkata AVANE JEEVAANKITA PRETA NODI

ಅವನೆ ಜೀವಾಂಕಿತ ಪ್ರೇತ ನೋಡಿ
ಭುವಿಗೆ ಭಾರನು ಅವನುಹರಿಹಗೆಯನುಪ.

ಹರಿಕಥೆಗೆ ಬೇಸತ್ತು ಹರಟೆಯನೆ 
ಕೇಳುವವಹರಿಯಗುಣ ಹೊಗಳದೊಣಪಂಟ 
ಬಡಿವವಹರಿಮರೆದು ಮಲಭಾಂಡವನು 
ತುಂಬಿಕೊಳುವವಹರಿಭಟರ 
ನಡೆನುಡಿಗೆ ಸೈರಿಸದವ 1

ಹರಿಪ್ರಿಯರ ನೆರೆಗಾರದತ್ತತ್ತ 
ಜಾರುವವಹರಿಯವರಿಗುಣಿಸದೆ 
ಧನ ಕಳೆವವಹರಿಯಾತ್ರೆಗಂಜಿ ಬಲವನೆ 
ಕೊಳುವವಹರಿವ್ರತವ ಬಿಟ್ಟಿತರ ವ್ರತ 
ಕೊಳುವವ 2

ಹರಿಪದಾಂಬುಜವಜರಿದುಹಲವು 
ನೀರ್ಕುಡಿವವಹರಿಲಾಂಛನಿಲ್ಲದ 
ಚೆಲುವಿಕೆಯವಹರಿಪ್ರಸನ್ವೆಂಕಟೇಶನ ಪಾದಾಬ್ಜವ 
ಭಜಿಸಿಹರಿಪರದೈವವೆನ್ನದ್ಹೊಲೆಮನದವ3
***