Showing posts with label ಅರ್ಜುನಗಾನಂದಾ ಮಾಡಿದ ಗೋವಿಂದಾ kadarundalageesha. Show all posts
Showing posts with label ಅರ್ಜುನಗಾನಂದಾ ಮಾಡಿದ ಗೋವಿಂದಾ kadarundalageesha. Show all posts

Monday 2 August 2021

ಅರ್ಜುನಗಾನಂದಾ ಮಾಡಿದ ಗೋವಿಂದಾ ankita kadarundalageesha

ಅರ್ಜುನಗಾನಂದಾ ಮಾಡಿದ ಗೋವಿಂದಾ ಪ


ರಥದಿ ಮಂಡಿಸಿ ಚತುರತನದಲಿಂದಾ

ಚತುರ ಹಸ್ತದಿಂ ವಾಜಿಯಂ ಪಿಡಿದು

ರಥಕನ ಬೆನ್ಹಿಂದಿಟ್ಟುಕೊಂಡು ಸಾ-

ರಥಿಯು ತಾನೆ ಅಶ್ವವ ನಡಿಸುತಲಿ

ರತಿಪತಿಪಿತನತಿಚಮತ್ಕಾರದಿಂ

ಪೃಥಿವಿಯ ಮೇಲೆ ನರನಟನ ತೋರುತಲಿ

ಪತಿತ ಪಾವನನು ಫಲ್ಗುಣ ಸಖನು

ನುತಿಸಿದವರ ನೆರೆ ಪಾಲಿಸುತಿಹನು

ಅತುಳ ಶಂಖದಿಂ ಭೌಂ ಭೌಂ ಎನಿಸುತ

ರಥದ ಗಾಲಿ ಛಿಟ್ ಛಿಟ್ ಛಿಟಿಲೆನುತ

ಕುದುರೆ ಖುರಪುಟಧ್ವನಿ ಫಳ್ ಫಳ್ ಫಳ್ಳೆ

ನುತ ಸ್ಯಂದನವನು ಮುಂದಕೆ ದೂಡುತ

ಗೋವಿಂದನು ರಭಸದಿ ಭಕ್ತನೂಳಿಗಾ1


ಮಂದಜಭವ ಮುಖ್ಯಾಮರ ವೃಂದವು

ನಂದತನುಜನಾರಂದಲೀಲೆಯಂ

ಛಂದದಿ ನೋಡುತ ನಭೋಮಾರ್ಗದೊಳ್

ಬಂದು ಕುಸುಮಗಳ ವೃಷ್ಟಿಯ ಸುರಿದು

ಸಿಂಧುಶಯನ ನಾಮಾಮೃತ ಸುರಿದು

ಬೃಂದಾರಕ ನಿಕರವು ಕೈಯೆತ್ತಿ

ಇಂದುಕಲಾಧಿಪ ಪ್ರಾರ್ಥನೆ ಸೈ ಸೈ

ಎಂದು ದೇವದುಂದುಭಿ ಧೋಂ ಧೋಂ ಕಂಸಾ-

ಳದರವ ಖಿಣಿಖಿಣಿ ಖಿಣಿ ಭೇರಿ

ನಾದ ಖಡ್ ಖಡ್ ಖಡಲ್ ಭಾರಿ ತಾ-

ಳದಿಂ ಡಿಮಿಡಮರುಗದಿಂ ತಿದ್ಧಿಮಿಧಿಂಕಿಟತಾ

ಹತಜಂತರಿಧೂಂ

ಹತಜಂತರಿ ಧೂಂಗತರಿ ಕಿಣಿಕಿಣಿಕಿಣಿ ಎನುತ

ನರ್ತನಗೈವುತ ತೆರಳುತ 2


ಮಂಗಳ ರವದಿಂ ಜಯಜಯ ಎನಿಸುತ

ಮಂಗಳಾಂಗಿ ರುಕ್ಮಿಣಿ ವಲ್ಲಭನು

ರಂಗಿನಿಂದ ರಥವಿಳಿದು ಗೆಳೆಯನ

ಮುಂಗೈಯನೆ ಪಿಡಿದು ಅಂಗಜನಯ್ಯ

ರಂಗುಮಣಿಯ ಉಂಗುರದಿ ಒಪ್ಪುತಲಿ

ಭಂಗಾರಕೆ ಮಿಗಿಲೆನಿಪ ದುಕೂಲದಿ

ಶೃಂಗರದಲ್ಲಿ ಉತ್ತುಂಗ ಪರಾಕ್ರಮ

ಅಂಗಳದೋಳ್ ನಲಿದಾಡುತ ರಂಗನು

ತಿಂಗಳ ಕುಲದೀಪನ್ನ ನೋಡುತಲಿ

ಭೃಂಗಾಳಕ ರಖಮಾಪತಿ ಪಾಂಡು-

ರಂಗ ಕದರುಂಡಲಗೀಶನ ಒಡೆಯನು ತಾ 3

****