Showing posts with label ವಿಠಲನ ಪದವನಜ ತುಂಬೆ vijaya vittala. Show all posts
Showing posts with label ವಿಠಲನ ಪದವನಜ ತುಂಬೆ vijaya vittala. Show all posts

Wednesday, 16 October 2019

ವಿಠಲನ ಪದವನಜ ತುಂಬೆ ankita vijaya vittala

ವಿಜಯದಾಸ
ವಿಠ್ಠಲನ ಪದವನಜ ತುಂಬೆ
ಸೃಷ್ಟಿಯೊಳಗೆ ಎನ್ನ ಬಿಡದೆ ಪೊರೆ ಎಂಬೆ ಪ

e್ಞÁನ ಭಕುತಿ ವೈರಾಗ್ಯದಲಿ ಜಾಣ
ದಾನ ಮಾಡುವರೊಳಗೆ ಪೂತುರೆ ನೀನೆ ನಿಪುಣ
ಮಾನಸದಲಿ ಹರಿಯ ಧ್ಯಾನ ಮಾಡುವ
ಆನಂದಮತಿ ವಿಮಲ ಸರ್ವವಿಧಾನ 1

ಮಾತುಮಾತಿಗೆ ನೆನೆಸಿದವರ ಭವದ ಮಾಯಾ
ಸೇತುವಿಯ ಕಡಿದು ಸಂತತವಾಗಿ ಸಹಾಯಾ
ಪ್ರೀತಿಯಲಿ ಬಂದು ಶ್ರೀ ಹರಿಯ ಪದ ಸೇವಿಯಾ
ತಾ ತೋರಿ ತಿಳಿಸುವಾ ಪ್ರಿಯನೆನಿಸುವಾ
ಪುರಂದರ ರಾಯಾ 2

ವಜ್ರ ಪಂಜರಾ
ಕೂವಾದಿ ಮತಹರ ನಂಬಿದವರಾಧಾರ
ಪಾವಮಾನಿಯ ಮತದಲಿಪ್ಪ ಮನೋಹರ
ಶ್ರೀ ವಿಜಯನಗರ ಮಂದಿರದೊಳಗುಳ್ಳ
ಶ್ರೀ ವಿಜಯವಿಠಲನ್ನ ಪೂಜಿಸುವ ಧೀರ 3
*******