by ಪ್ರಸನ್ನವೆಂಕಟದಾಸರು
ಮಂಗಳ ಮಹಿಮಗೆ ನೀರಾಜನಂಗಳ ಪೈಸರಿಸಿ ಭೃಂಗಾಳಕಂಗಳೆಯರು ಸ್ಮಿತವದನಂಗಳೆಯರು ಶಿರಿ ತಿರುವೆಂಗಳಪತಿಗಾರತಿಯ ಬೆಳಗಿರೆ ಪ.
ಅಕ್ರಮದಲಿಶ್ರುತಿಕದ್ದೊಯ್ದವನಾಕ್ರಂದಿಸಿ ಸೀಳಿದಶುಭಮತ್ಸ್ಯಾಕೃತಗೆ ಜಗಗರ್ಭಾಕೃತಗೆ ಹತತಮವ್ಯಾಕೃತಗಾರತಿಯ ಬೆಳಗಿರೆ 1
ಇಂದಿರನೈಶ್ವರ್ಯವು ಮಕರದಮಂದಿರ ಮಗ್ನಾಗಿರೆ ಗಿರಿಭೃತಕಂಧರಗೆ ಕಚ್ಛಪ ಸುಂದರಗೆ ಕರುಣಾಸಾಂದರಗಾರತಿಯ ಬೆಳಗಿರೆ 2
ಪೊಂಗಣ್ಣಿನದಿತಿಜಕ್ಷಿತಿಯಹಿಂಗದೆ ಬೈಚಿಡಲು ಕ್ರೋಡದಿಭಂಗಿತಗೆ ವಸುಮತಿ ಸಂಗತಗೆ ದಿವಿಜರಇಂಗಿತಗಾರತಿಯ ಬೆಳಗಿರೆ 3
ದಾನವಗಂಜದೆ ಶಿಶು ವರಹರಿನೀನೆ ಗತಿಯೆನೆ ಕಾಯ್ದ ಸುಜಾಣನಿಗೆ ನಿಜಜನಪ್ರಾಣನಿಗೆ ನರಪಂಚಾನನಗಾರತಿಯ ಬೆಳಗಿರೆ 4
ಧರ್ಮದಿ ಕೊಬ್ಬಿದ ಬಲಿಚಕ್ರನಮರ್ಮದಿ ಜಡಿದ ವಿಚಿತ್ರಕರ್ಮನಿಗೆ ಧೃತಮೃಗಚರ್ಮನಿಗೆ ಅಣುವಟುಶರ್ಮನಿಗಾರತಿಯ ಬೆಳಗಿರೆ 5
ವೀರ ಕ್ಷತ್ರಿಯರ ಕುಲ ಸಂಹಾರ ರೇಣುಕೆ ಕಂಠ ವಿದಾರಿಗೆ ವಿತರಣ ಶೂರಗೆಘೋರಕುಠಾರಿಗಾರತಿಯ ಬೆಳಗಿರೆ 6
ಮುನಿಮಖಪಾಲಕ ತ್ರಯಂಬಕಧನುಹರ ಸೀತಾವರ ದಶಮುಖಹನನಗೆ ಮತ್ತವನನುಜಪಗೆ ಅಂಜನಾತನುಜಪಗಾರತಿಯ ಬೆಳಗಿರೆ 7
ಗೋಜಂಗುಳಿಹೆಂಗೆಳೆಯರ ಮೋಹಿಪ ತಾವರೆಗಂಗಳಗೆ ಸುಖದ ತರಂಗನಿಗೆ ಪಾಂಡವಸಂಗನಿಗಾರತಿಯ ಬೆಳಗಿರೆ 8
ನೀಚರ ಬಲವಳಿಯಲು ಸತ್ವರಖೇಚರನಾರಿಯರ ವ್ರತಹೃತಆಚರಗೆಜಿತಬೌದ್ಧಾಚರಗೆ ನಿಗಮವಿಗೋಚರಗಾರತಿಯ ಬೆಳಗಿರೆ 9
ಸಂಕರ ಕಲಿಯಂ ಮಥಿüಸಲು ತಾಬಿಂಕದಿ ಹಯವೇರಿದ ಸದ್ಧರ್ಮಾಂಕುರಗೆ ವರ್ಧಿಪ ಕಿಂಕರಗೆ ಪ್ರಸನ್ವೆಂಕಟರೇಯಗಾರತಿಯ ಬೆಳಗಿರೆ 10
**********