ankita ವಿಠಲೇಶ
ರಾಗ: ಕಾಪಿ ತಾಳ: ತ್ರಿ
ಶಾಂತಿಚಂದ್ರ ಜ್ಯೋತಿ ಪ್ರಭುವರ
ಕಾಂತಿಚಂದ್ರಿಕೆಯುತ ಚಂದ್ರಾಮ ಜಗಕೆ ಪ
ಅಖಿಲಕಲಾಂಶಾ ಸುರಮುನಿಸಾಂಶಾ
ಸುಕಲ ಸುಧೀಂದ್ರಸುತ ಚಂದ್ರಾಮ ಜಗಕೆ 1
ಯೋಗಿಕುಲೇಂದ್ರ ಶ್ರೀ ರಾಘವೇಂದ್ರಾ
ಮೋಘ ಮಹಿಮ ಜ್ಯೋತಿ ಚಂದ್ರಾಮ ಜಗಕೆ 2
ಪರಮವಿಖ್ಯಾತ ಪರಿಮಳದಾತಾ
ಹರಿವಿಠಲೇಶದೂತ ಚಂದ್ರಾಮ ಜಗಕೆ 3
***