Showing posts with label ಪಾಹಿ ಕೃಷ್ಣ ಮಹಿಪತಿ ಮಧುರೆಗೆ ಪೋಗೋದೇನೊ ಕಾರಣ bheemesha krishna. Show all posts
Showing posts with label ಪಾಹಿ ಕೃಷ್ಣ ಮಹಿಪತಿ ಮಧುರೆಗೆ ಪೋಗೋದೇನೊ ಕಾರಣ bheemesha krishna. Show all posts

Wednesday, 1 September 2021

ಪಾಹಿ ಕೃಷ್ಣ ಮಹಿಪತಿ ಮಧುರೆಗೆ ಪೋಗೋದೇನೊ ಕಾರಣ ankita bheemesha krishna

 ..

ಪಾಹಿ ಕೃಷ್ಣ ಮಹಿಪತಿ ಮಧುರೆಗೆ

ಪೋಗೋದೇನೊ ಕಾರಣ

ಯದುಕುಲನಾಥ ಪಾಹಿ ಕೃಷ್ಣ ಮಹಿಪತಿ ಪ


ಉದಯಕಾಲದಲೆದ್ದು ಮಧುವೈರಿ ತಾ ಬ್ಯಾಗ

ಮಧುರಾಪಟ್ಟಣದಾರಿ ಹಿಡಿದಿರೆ1


ಮದಗಜಗಮನೇರು ದಧಿ ಮಥನವ ಮಾಡಿ

ಕದವ ತೆಗೆದು ಕಂಡರು ಬ್ಯಾಗ 2


ಮಿಂಚಿನಂತ್ಹೊಳೆವೊ ವಿರಿಂಚನಯ್ಯನ ರಥ

ಚಂಚಲಾಕ್ಷಿಯರು ನೋಡುತಲಾಗ 3


ಬನ್ನಿರೆ ಬನ್ನಿರೇ ಪನ್ನಂಗಶಯನನ

ಬೆನ್ನ್ಹತ್ತಿ ನಾವು ಹೋಗುವೊಣೀಗ 4


ಫುಲ್ಲನಾಭನೆ ಮತ್ತೆಲ್ಲಿಗೆ ಪಯಣವೊ

ಎಲ್ಲ ವಾರ್ತೆಗಳ್ಹೇಳೊ ನಮಮುಂದೆ 5


ನಂದಗೋಪನ ಬುದ್ಧಿ ಮಂದವಾಯಿತೇನೊ

ವೃಂದಾವನವ ಬಿಟ್ಟು ಕಳಿಸುವ 6


ಕೂಸೆಂದು ನಿನ್ನ ಮುದ್ದಿಸುವೊ ಮೋಹಗಳೆಲ್ಲ

ಬ್ಯಾಸರಿಕ್ಯಾಯ್ತೇನೆಶೋದೆಗೆ 7


ಸಾಧುಗೋವ್ಗಳನೆಲ್ಲ ಕಾದುಕೊಂಡಿರುವೋದು

ಶ್ರೀಧರ ನೀದಾರಿಗ್ಹೇಳಿದ್ಯೊ 8


ವತ್ಸಕಾಯ್ದುದು ಮನಕಿಚ್ಛಿಲ್ಲದಿರಲು ಶ್ರೀ-

ವತ್ಸಧರನೆ ಸುಮ್ಮನಿರೊ ನೀನು 9


ನಮ್ಮನೆಯಲಿ ಪಾಲ್ ಬೆಣ್ಣೆ ಕದ್ದನೆಂದು

ನಿಮ್ಮಮ್ಮನಲ್ಲಿ ದೂರಿದೆವೇನೊ 10


ಕ್ಷೀರಗಡಿಗೆ ಒಡೆದೋಡಿ ಪೋದನೆಂದು

ದೂರಿಕೊಂಡವರಲ್ಲೋ ನಿನ್ನನು 11


ಊರೊಳಗೊಬ್ಬಳು ದೂರಿಕೊಂಡರೆ ನಾವು

ಭಾರಿ ಶಿಕ್ಷೆಯ ಮಾಡಿ ಬಂದೆವೊ 12


ಎಂದಾದರೊಂ(ದು) ದಿನ ಅಂದ ಮಾತುಗಳೆಲ್ಲ

ಇಂದೆ ತಪ್ಪಿ ್ಹಡಿಯದೆ ಕ್ಷಮಿಸಯ್ಯ 13


ಕದವ ತೆಗೆಯದ ಮುಂಚೆ ಸದನದ್ವಾರದಿ ಬಂದು

ಯದುನಾಥ ಎದುರೆ ನಿಂತಿರುವ್ಯಲ್ಲೊ 14


ಕಂಗಳಿಂದಲಿ ನೋಡ್ಯಾಲಿಂಗನೆ ಮಾಡುತ

ಸಂಗಸುಖದಿ ಬೆಳೆದಿದ್ದೇವೊ 15


ನಿನ್ನ ನೋಡದ ಕಂಗಳಿನ್ನ್ಯಾತಕಿರಲು ಕೇ(ಗೇ?)

ರೆಣ್ಣೆಯ ತೀಡಿಕೊಂಬುವೋಣೇನೊ 16


ಮಾರನಾಟಕೆ ಮನಸೋತು ನಿನ್ನನೆ ನಾವು

ಜಾರಪುರುಷನೆಂದು ತಿಳಿಯದೆ 17


ಇರುಳೇಯೆ ಮನೆಯಲ್ಲಿ ಕೊಳಲೂದೋ ಕಾಲಕ್ಕೆ

ನಳಿನಾಕ್ಷ ನಾವ್ಹ್ಯಾಗೆ ಬಂದೆವೊ 18


ಕಾಲಿಗಿಡುವ ವಸ್ತು ಕರದಲಿಟ್ಟುಕೊಂಡು

ವಾಲೆ ಮೂಗುತಿ ಹೆರಳಿಗೆ ಚುಚ್ಚಿ 19


ಹರಡಿ ಕಂಕಣ ಪಾದದ್ಹರಡಿನ ಮ್ಯಾಲಿಟ್ಟು

ಮುಡಿವ ಮಲ್ಲಿಗೆ ಕಿವಿಯಲಿ ಸುತ್ತಿ 20


ಹಾರ ಪದಕವ ಟೊಂಕಕೆ ಕಟ್ಟಿ ನಾವು ಉಟ್ಟ

ಸೀರೆ ಕುಪ್ಪುಸ ಪಾರವಿ(ಪರಿವೆಯಿ?)ಲ್ಲದೆ 21


ಗಂಡಮಕ್ಕಳಿಗುಣಬಡಿಸಿ ಮಂಡಿಯ ಮ್ಯಾಲೆ

ಸಂಡಿಗ್ಹುಳಿಯನ್ಹಾಕಿ ಬಂದೆವೊ 22


ಎಲೆಯ ಮ್ಯಾಲ್ಹಾಕೋ ಪದಾರ್ಥವೆಚ್ಚರವಿಲ್ಲ

ತಲೆಯ ಮ್ಯಾಲ್ಹಾಕಿ ಬಂದೆವು ನೋಡೊ 23


ಬೆಣ್ಣೆ ಚೆಟ್ಟಿಗೆಯ ಬೆಕ್ಕಿನ ಮುಂದೆ ಸರಿಸೇವೊ

ಸಣ್ಣ ಕೂಸಿನ ನೆಲವಿನೊಳಿಟ್ಟು 24


ಅಳುವೊ ಮಕ್ಕಳನೆ ಆಕಳ ಕಣ್ಣಿಗೆ ಕಟ್ಟಿ ಕರು-

ಗಳ ತೊಟ್ಟಿಲೊಳಗೆ ಇಟ್ಟು 25


ಮಂಗನ ಮರಿಗೆ ನಾವಂಗಿ ಟೊಪ್ಪಿಗೆ ಹಾಕಿ

ಬಂಗಾರದ್ಹಾರ ಪದಕನ್ಹಾಕಿ 26


ಅಚ್ಛದಿಂದೆತ್ತಿ ಮುದ್ದಿಡುತಿರೆ ನಮ ಗಲ್ಲ ಕಿ-

ತ್ತಿ ಚಿವರಿಕೊಂಡ್ಹೋಯಿತು 27


ಬಂಗಾರ ಕಳಕೊಂಡು ಮಂಗನಂತಾದೆವೊ

ಮಂಗಳಾಂಗನೆ ಇಷ್ಟು ಮರುಳಾಗಿ 28


ವ್ಯತ್ಯಾಸದಿಂದ್ವಸ್ತ್ರ ಇಟ್ಟು ಬಂದೆವೊ ನಾವು

ಬಿಟ್ಟೊ ್ಹೀದನೆಂಬೊ ಸಿಟ್ಟಿಲ್ಲವೊ 29


ಅಡಅಡವಿಲಿ ನಿನ್ನ ಹುಡುಕುತ ತಿರುಗೇವೊ

ಕಡಲಶಯನ ಕರುಣದಿ ಬಂದ್ಯೊ 30


ರಾಸಕ್ರೀಡೆ ಜಲಕ್ರೀಡೆನಾಡಿದ ವಾರ್ತೆ

ರಾ(ರಹ?)ಸ್ಯ ಒಬ್ಬರಿಗೆ ನಾವ್ ತಿಳಿಸದೆ31


ಅತ್ತೆಮಾವಂದಿರೀ ವರ್ತಮಾನವ ಕೇಳಿ

ನೆತ್ತಿಮ್ಯಾಲ್ಹೊಡದ್ಹೊರಗ್ಹಾಕೋರೊ 32


ಪತಿಗಳು ನಮ್ಮನ್ನು ಬಿಟ್ಟರೂ ಬಿಡಲೊ ಶ್ರೀ-

ಪತಿ ನಿನ್ನ ಬಿಟ್ಟು ಪೋಗುವರಲ್ಲ 33


ಮನೆ ಧನ ಧಾನ್ಯ ಮಕ್ಕಳು ಪತಿಗಳು ಬ್ಯಾ-

ಡ ನಮಗೊಂದು ಸ್ಥಾನ ತೋರಿಸೊ ನೀನು 34


ಕಟ್ಟಿದ್ದ ಕುಸುಮ ಮಲ್ಲಿಗೆ ಒಣಗಿದ ದಾರ

ಮತ್ಯಾವ ಕೆಲಸಕ್ಕೆ ಬರುವುದೊ 35


ಎಲ್ಲಿ ಬಿಲ್ಲ ್ಹಬ್ಬ ಮತ್ತೆಲ್ಲಿ ಸೋದರಮಾವ

ಎಲ್ಲಿಂದ ಕರೆಯ ಬಂದನು ಈತ 36


ಕ್ರೂರನೆನ್ನದಲೆ ಅಕ್ರೂರನೆಂಬುವೋ ಹೆ-

ಸರ್ಯಾರಿಟ್ಟರ್ಹೇಳೊ ಈ ಪುರುಷಗೆ 37


ನಮ್ಮ ನಿಮ್ಮನು ಅಗಲಿಸುವೋನು ನಮ್ಮಂಥ ಹೆ-

ಣ್ಣು ಮಕ್ಕುಳು ಇವಗಿಲ್ಲವೆ 38


ಇಳಿಯಿಳಿ ಇಳೆಯಲ್ಲೀಳಿಗೆಯ ಕೊಟ್ಟೇವೊ ನಮ್ಮ ಕೊ-

ರಳ ಕೊಯ್ದು ಮುಂದಕ್ಹೋಗೋ ನೀ 39


ವಾಸುದೇವನೆ ನಿನ್ನ ರಥದ ಗಾಲಿಗೆ ನಾವು

ಹಾಸಿಕ್ಯಾಗಿ ಅಡ್ಡಬಿದ್ದೆವೊ 40


ಮಧುರಾಪಟ್ಟಣದಲ್ಲಿ ಇದ್ದ ಸತಿಯರೆಲ್ಲ

ಮದನಮೋಹನ ನಿನ್ನ ಬಿಡುವೋರೆ 41

***


 

ಪಾಹಿ ಕೃಷ್ಣ ಮಹಿಪತಿ ಮಧುರೆಗೆ ಪೋಗೋದೇನೊ ಕಾರಣ ಯದುಕುಲನಾಥ ಪಾಹಿ ಕೃಷ್ಣ ಮಹಿಪತಿ ಪ ಮಧುವೈರಿ ತಾ ಬ್ಯಾಗ ಮಧುರಾಪಟ್ಟಣದಾರಿ ಹಿಡಿದಿರೆ1 ದಧಿ ಮಥನವ ಮಾಡಿ ಕದವ ತೆಗೆದು ಕಂಡರು ಬ್ಯಾಗ 2 ಮಿಂಚಿನಂತ್ಹೊಳೆವೊ ವಿರಿಂಚನಯ್ಯನ ರಥ ಚಂಚಲಾಕ್ಷಿಯರು ನೋಡುತಲಾಗ 3 ಬನ್ನಿರೆ ಬನ್ನಿರೇ ಪನ್ನಂಗಶಯನನ ಬೆನ್ನ್ಹತ್ತಿ ನಾವು ಹೋಗುವೊಣೀಗ 4 ಫುಲ್ಲನಾಭನೆ ಮತ್ತೆಲ್ಲಿಗೆ ಪಯಣವೊ ಎಲ್ಲ ವಾರ್ತೆಗಳ್ಹೇಳೊ ನಮಮುಂದೆ 5 ನಂದಗೋಪನ ಬುದ್ಧಿ ಮಂದವಾಯಿತೇನೊ ವೃಂದಾವನವ ಬಿಟ್ಟು ಕಳಿಸುವ 6 ಕೂಸೆಂದು ನಿನ್ನ ಮುದ್ದಿಸುವೊ ಮೋಹಗಳೆಲ್ಲ ಬ್ಯಾಸರಿಕ್ಯಾಯ್ತೇನೆಶೋದೆಗೆ 7 ಸಾಧುಗೋವ್ಗಳನೆಲ್ಲ ಕಾದುಕೊಂಡಿರುವೋದು ಶ್ರೀಧರ ನೀದಾರಿಗ್ಹೇಳಿದ್ಯೊ 8 ವತ್ಸಕಾಯ್ದುದು ಮನಕಿಚ್ಛಿಲ್ಲದಿರಲು ಶ್ರೀ- ವತ್ಸಧರನೆ ಸುಮ್ಮನಿರೊ ನೀನು 9 ನಮ್ಮನೆಯಲಿ ಪಾಲ್ ಬೆಣ್ಣೆ ಕದ್ದನೆಂದು ನಿಮ್ಮಮ್ಮನಲ್ಲಿ ದೂರಿದೆವೇನೊ 10 ಕ್ಷೀರಗಡಿಗೆ ಒಡೆದೋಡಿ ಪೋದನೆಂದು ದೂರಿಕೊಂಡವರಲ್ಲೋ ನಿನ್ನನು 11 ಊರೊಳಗೊಬ್ಬಳು ದೂರಿಕೊಂಡರೆ ನಾವು ಭಾರಿ ಶಿಕ್ಷೆಯ ಮಾಡಿ ಬಂದೆವೊ 12 ಎಂದಾದರೊಂ(ದು) ದಿನ ಅಂದ ಮಾತುಗಳೆಲ್ಲ ಇಂದೆ ತಪ್ಪಿ ್ಹಡಿಯದೆ ಕ್ಷಮಿಸಯ್ಯ 13 ಕದವ ತೆಗೆಯದ ಮುಂಚೆ ಸದನದ್ವಾರದಿ ಬಂದು ಯದುನಾಥ ಎದುರೆ ನಿಂತಿರುವ್ಯಲ್ಲೊ 14 ಕಂಗಳಿಂದಲಿ ನೋಡ್ಯಾಲಿಂಗನೆ ಮಾಡುತ ಸಂಗಸುಖದಿ ಬೆಳೆದಿದ್ದೇವೊ 15 ನಿನ್ನ ನೋಡದ ಕಂಗಳಿನ್ನ್ಯಾತಕಿರಲು ಕೇ(ಗೇ?) ರೆಣ್ಣೆಯ ತೀಡಿಕೊಂಬುವೋಣೇನೊ 16 ಮಾರನಾಟಕೆ ಮನಸೋತು ನಿನ್ನನೆ ನಾವು ಜಾರಪುರುಷನೆಂದು ತಿಳಿಯದೆ 17 ಇರುಳೇಯೆ ಮನೆಯಲ್ಲಿ ಕೊಳಲೂದೋ ಕಾಲಕ್ಕೆ ನಳಿನಾಕ್ಷ ನಾವ್ಹ್ಯಾಗೆ ಬಂದೆವೊ 18 ಕಾಲಿಗಿಡುವ ವಸ್ತು ಕರದಲಿಟ್ಟುಕೊಂಡು ವಾಲೆ ಮೂಗುತಿ ಹೆರಳಿಗೆ ಚುಚ್ಚಿ 19 ಹರಡಿ ಕಂಕಣ ಪಾದದ್ಹರಡಿನ ಮ್ಯಾಲಿಟ್ಟು ಮುಡಿವ ಮಲ್ಲಿಗೆ ಕಿವಿಯಲಿ ಸುತ್ತಿ 20 ಹಾರ ಪದಕವ ಟೊಂಕಕೆ ಕಟ್ಟಿ ನಾವು ಉಟ್ಟ ಸೀರೆ ಕುಪ್ಪುಸ ಪಾರವಿ(ಪರಿವೆಯಿ?)ಲ್ಲದೆ 21 ಗಂಡಮಕ್ಕಳಿಗುಣಬಡಿಸಿ ಮಂಡಿಯ ಮ್ಯಾಲೆ ಸಂಡಿಗ್ಹುಳಿಯನ್ಹಾಕಿ ಬಂದೆವೊ 22 ಎಲೆಯ ಮ್ಯಾಲ್ಹಾಕೋ ಪದಾರ್ಥವೆಚ್ಚರವಿಲ್ಲ ತಲೆಯ ಮ್ಯಾಲ್ಹಾಕಿ ಬಂದೆವು ನೋಡೊ 23 ಬೆಣ್ಣೆ ಚೆಟ್ಟಿಗೆಯ ಬೆಕ್ಕಿನ ಮುಂದೆ ಸರಿಸೇವೊ ಸಣ್ಣ ಕೂಸಿನ ನೆಲವಿನೊಳಿಟ್ಟು 24 ಅಳುವೊ ಮಕ್ಕಳನೆ ಆಕಳ ಕಣ್ಣಿಗೆ ಕಟ್ಟಿ ಕರು- ಗಳ ತೊಟ್ಟಿಲೊಳಗೆ ಇಟ್ಟು 25 ಬಂಗಾರದ್ಹಾರ ಪದಕನ್ಹಾಕಿ 26 ಅಚ್ಛದಿಂದೆತ್ತಿ ಮುದ್ದಿಡುತಿರೆ ನಮ ಗಲ್ಲ ಕಿ- ತ್ತಿ ಚಿವರಿಕೊಂಡ್ಹೋಯಿತು 27 ಬಂಗಾರ ಕಳಕೊಂಡು ಮಂಗನಂತಾದೆವೊ ಮಂಗಳಾಂಗನೆ ಇಷ್ಟು ಮರುಳಾಗಿ 28 ವ್ಯತ್ಯಾಸದಿಂದ್ವಸ್ತ್ರ ಇಟ್ಟು ಬಂದೆವೊ ನಾವು ಬಿಟ್ಟೊ ್ಹೀದನೆಂಬೊ ಸಿಟ್ಟಿಲ್ಲವೊ 29 ಅಡಅಡವಿಲಿ ನಿನ್ನ ಹುಡುಕುತ ತಿರುಗೇವೊ ಕಡಲಶಯನ ಕರುಣದಿ ಬಂದ್ಯೊ 30 ರಾಸಕ್ರೀಡೆ ಜಲಕ್ರೀಡೆನಾಡಿದ ವಾರ್ತೆ ರಾ(ರಹ?)ಸ್ಯ ಒಬ್ಬರಿಗೆ ನಾವ್ ತಿಳಿಸದೆ31 ಅತ್ತೆಮಾವಂದಿರೀ ವರ್ತಮಾನವ ಕೇಳಿ ನೆತ್ತಿಮ್ಯಾಲ್ಹೊಡದ್ಹೊರಗ್ಹಾಕೋರೊ 32 ಪತಿಗಳು ನಮ್ಮನ್ನು ಬಿಟ್ಟರೂ ಬಿಡಲೊ ಶ್ರೀ- ಪತಿ ನಿನ್ನ ಬಿಟ್ಟು ಪೋಗುವರಲ್ಲ 33 ಮನೆ ಧನ ಧಾನ್ಯ ಮಕ್ಕಳು ಪತಿಗಳು ಬ್ಯಾ- ಡ ನಮಗೊಂದು ಸ್ಥಾನ ತೋರಿಸೊ ನೀನು 34 ಕುಸುಮ ಮಲ್ಲಿಗೆ ಒಣಗಿದ ದಾರ ಮತ್ಯಾವ ಕೆಲಸಕ್ಕೆ ಬರುವುದೊ 35 ಎಲ್ಲಿ ಬಿಲ್ಲ ್ಹಬ್ಬ ಮತ್ತೆಲ್ಲಿ ಸೋದರಮಾವ ಎಲ್ಲಿಂದ ಕರೆಯ ಬಂದನು ಈತ 36 ಕ್ರೂರನೆನ್ನದಲೆ ಅಕ್ರೂರನೆಂಬುವೋ ಹೆ- ಸರ್ಯಾರಿಟ್ಟರ್ಹೇಳೊ ಈ ಪುರುಷಗೆ 37 ನಮ್ಮ ನಿಮ್ಮನು ಅಗಲಿಸುವೋನು ನಮ್ಮಂಥ ಹೆ- ಣ್ಣು ಮಕ್ಕುಳು ಇವಗಿಲ್ಲವೆ 38 ಇಳಿಯಿಳಿ ಇಳೆಯಲ್ಲೀಳಿಗೆಯ ಕೊಟ್ಟೇವೊ ನಮ್ಮ ಕೊ- ರಳ ಕೊಯ್ದು ಮುಂದಕ್ಹೋಗೋ ನೀ 39 ವಾಸುದೇವನೆ ನಿನ್ನ ರಥದ ಗಾಲಿಗೆ ನಾವು ಹಾಸಿಕ್ಯಾಗಿ ಅಡ್ಡಬಿದ್ದೆವೊ 40 ಮಧುರಾಪಟ್ಟಣದಲ್ಲಿ ಇದ್ದ ಸತಿಯರೆಲ್ಲ ಮದನಮೋಹನ ನಿನ್ನ ಬಿಡುವೋರೆ 41

***